ವಾಹನ ಸವಾರರಿಗೆ ಮತ್ತೆ ಬಸ್ಕಿ ಹೊಡೆಸಿದ ಪೊಲೀಸರು..

ಹುಬ್ಬಳ್ಳಿ: ಇಷ್ಟು ದಿನ ಲಾಕ್‌ಡೌನ್ ಸಡಿಲಗೊಳಿಸಿದ್ದ ಅವಳಿ ನಗರ ಪೊಲೀಸರು ಲಾಕ್ ಡೌನ್ ಬಿಗಿಗೊಳಿಸಿದ್ದಾರೆ.
ಕಳೆದ ಒಂದು ವಾರದಿಂದ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಜನರು ತಮ್ಮ ಖಾಸಗಿ ವಾಹನಗಳಲ್ಲಿ ಓಡಾಡುತ್ತಿದ್ದ ಜನರಿಗೆ ಪೋಲಿಸರು ಬಸ್ಕಿ ಹೋಡಿಸಿದ್ರು..ಇದೀಗ ಮತ್ತೆ ರೋಡಿಗಳಿದವರಿಗೆ ಅದೇ ರೀತಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಇನ್ನು ನಗರದ ಚೆನ್ನಮ್ಮ ವೃತ್ತ,ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಕೋರ್ಟ್ ಸರ್ಕಲ್‌ನಲ್ಲಿ ಓಡಾಡುವ ಜನರನ್ನು ತಡೆದು ಲಾಠಿ ರುಚಿ ತೋರಿಸಿ ಬಸ್ಕಿ ಹೋಡಿಸಿದರು.
ಅನಗತ್ಯವಾಗಿ ಓಡಾಡದಂತೆ ಮನೆಯಲ್ಲಿ ಎಂದು ಮನವಿ ಮಾಡಿದರೂ ರಸ್ತೆಗಿಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿ ಬೈಕ್ ಹಾಗು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜು ಮುದ್ಗಾಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment