ಬೆಂಗಳೂರು ಪೂರ್ಣ ಸೀಲ್‌ಡೌನ್‌ಗೆ ಹಲವು ಸಚಿವರಿಂದಲೇ ಅಸಮಾಧಾನ;ಸಿಎಂ ಆತುರದ ನಿರ್ಧಾರ..!!?
ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ಸದ್ಯ ಲಾಕ್‌ಡೌನ್ ಆದ್ರೂ ಬೆಂಗಳೂರಿನಲ್ಲಿ ಓಡಾಟ ನಿಲ್ಲದ ಪರಿಣಾಮ ಇದೀಗ ರಾಜ್ಯ ಸರ್ಕಾರ ಪ್ಯಾರಾ ಮಿಲಿಟರಿ ಪಡೆಯನ್ನು ಕರೆಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಅAದ ಹಾಗೇ ಸಂಚಾರ ನಿರ್ಬಂಧಕ್ಕೆ ತಯಾರಾಗಿರುವ ಬೆಂಗಳೂರು ಪೊಲೀಸರು ಈಗಾಗಲೇ ಹಲವು ಕಡೆ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ.ಹೀಗಾಗಿ ಇದು ಬೆಂಗಳೂರನ್ನು ಸೀಲ್‌ಡೌನ್ ಮಾಡುವ ಮೊದಲ ಹಂತ ಎಂದು ತಿಳಿದು ಬಂದಿದೆ.
ಅದರಲ್ಲೂ ಬೆಂಗಳೂರನ್ನು ಸೀಲ್‌ಡೌನ್ ಆದ ನಂತರ ಇನ್ನಷ್ಟು ಕಟ್ಟುನಿಟ್ಟಿನ ಕಠಿಣ ಕ್ರಮ ಜಾರಿಗೊಳ್ಳಲಿದೆ ಎನ್ನಲಾಗುತ್ತಿದ್ದು,ಪ್ಯಾರಾ ಮಿಲಿಟರಿ ಪಡೆ ಬಂದರೇ ಮಾತಿಗಿಂತ ಲಾಠಿಗಳೇ ಮಾತನಾಡುವುದು ಜಾಸ್ತಿಯಾಗಲಿದೆ ಎಂದು ಹೇಳಲಾಗಿದೆ.
ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ ೧೯೭ಕ್ಕೆ ಏರಿಕೆಯಾದ ಪರಿಣಾಮ ಕಂಗಲಾಗಿರುವ ಸಿಎಂ ಯಡಿಯೂರಪ್ಪ ಬೆಂಗಳೂರು ಸೀಲ್‌ಡೌನ್‌ಗೆ ಸಮ್ಮತಿ ಸೂಚಿಸಿದರು ಅನುಮಾನವಿಲ್ಲ ಎಂದು ತಿಳಿದು ಬಂದಿದೆ.
ಆದರೆ ಬೆಂಗಳೂರು ಸೀಲ್‌ಡೌನ್‌ಗೆ ಸಚಿವ ಸಂಪುಟದ ಅರ್ಧಕರ್ಧ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದ್ದು,ಇಂದಿನ ಸಂಪುಟ ಸಭೆಯಲ್ಲೂ ಇದರ ಬಗ್ಗೆ ಸಣ್ಣಮಟ್ಟದಲ್ಲಿ ಚರ್ಚೆ ನಡೆದಿದೆನ್ನಲಾಗಿದೆ.
ಆರೋಗ್ಯ ಸಚಿವ ಶ್ರೀರಾಮಲು,ವೈದ್ಯಕೀಯ ಸಚಿವ ಡಿ.ಸುಧಾಕರ್ ಸೇರಿದಂತೆ ಹಲವು ಸಚಿವರು ಇಡೀ ಬೆಂಗಳೂರನ್ನು ಸೀಲ್‌ಡೌನ್ ಮಾಡುವ ಅಗತ್ಯವಿಲ್ಲ.ಬದಲಿಗೆ ಕೊರೊನಾ ಪ್ರಕರಣ ಕಂಡು ಬಂದ ಪ್ರದೇಶಗಳನ್ನು ಹಾಟ್‌ಸ್ಪಾಟ್ ಆಗಿ ಗುರುತಿಸಿ ಅಲ್ಲಿ ಕೆಲವೊಂದು ನಿರ್ಬಂಧ ಹೇರಬಹುದು.ಜೊತೆಗೆ ಇಡೀ ಬೆಂಗಳೂರನ್ನು ಸೀಲ್‌ಡೌನ್ ಮಾಡಿದರೇ ಅದು ಜನರ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ,ಪ್ರತಿಪಕ್ಷಗಳು ಇದಕ್ಕೆ ಸಮ್ಮತಿ ಸೂಚಿಸುವುದು ಕಡಿಮೆ ಎಂಬ ಸಲಹೆಗಳನ್ನು ಸಂಪುಟ ಸಭೆ ಮುಂದೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
ಇದಲ್ಲದೆ, ಆರೋಗ್ಯ ಸಚಿವ ಶ್ರೀರಾಮಲು ರಾಜ್ಯದ ನಾಲ್ಕು ಜಿಲ್ಲೆಗಳಾದ ಮೈಸೂರು, ಬೆಂಗಳೂರು, ಕಲಬುರ್ಗಿ ಮತ್ತು ಬೀದರ್‌ನಲ್ಲಿ ಲಾಕ್‌ಡೌನ್ ಮುಂದುವರೆಸಬಹುದು ಎಂದು ಸಭೆಯಲ್ಲಿ ಸಿಎಂ ಮನವರಿಕೆ ಮಾಡಿಕೊಟ್ಟಿದ್ದಾರೆ.
ಈಗಾಗಲೇ ಕರ್ನಾಟಕದಲ್ಲಿ ೧೮ ಜಿಲ್ಲೆಗಳನ್ನು ಕೊರೋನಾ ಹಾಟ್‌ಸ್ಪಾಟ್ ಕೇಂದ್ರಗಳು ಎಂದು ಗುರುತಿಸಲಾಗಿದೆ. ಆದ್ದರಿಂದ ಈ ಎಲ್ಲಾ ಜಿಲ್ಲೆಗಳಲ್ಲೂ ಲಾಕ್‌ಡೌನ್ ಮುಂದುವರಿಸುವ ಬಗ್ಗೆಯೂ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿದೆ ಎಂದು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಆರೋಗ್ಯ ಸಚಿವ ಶ್ರೀರಾಮಲು ಮಾಹಿತಿ ಕೂಡ ನೀಡಿದ್ದಾರೆ.
ಒಟ್ಟಾರೆ ಬೆಂಗಳೂರನ್ನು ಸೀಲ್‌ಡೌನ್ ಮಾಡುವ,ಪ್ಯಾರಾ ಮಿಲಿಟರಿ ಪಡೆ ಕರೆಸುವ ಆತುರದ ನಿರ್ಧಾರಕ್ಕೆ ಸಿಎಂ ಯಡಿಯೂರಪ್ಪ ಕೈ ಹಾಕಬಾರದು ಎಂಬುದು ಖುದ್ದು ಸರ್ಕಾರಿ ವಲಯದಲ್ಲೇ ಕೇಳಿ ಬರುತ್ತಿದೆ.
ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ
ಬೆಂಗಳೂರಿಗೆ ಬರಲಿದೆ ಪ್ಯಾರಾಮಿಲಿಟರಿ ಪಡೆ?

Please follow and like us: