`ಕೊರೊನಾ’ದಿಂದ ಸಂಕಷ್ಟಕ್ಕೀಡಾದ ಯಾದಗಿರಿ ಅನ್ನದಾತ..

ಯಾದಗಿರಿ:ಕೊರೊನಾದಿಂದ ಇಡೀ ದೇಶವೇ ತಲ್ಲಣಗೊಂಡಿದ್ದು,ರಾಜ್ಯದಲ್ಲೂ ತನ್ನ ಆರ್ಭಟ ಮುಂದುವರೆಸಿದೆ.
ಅ0ದ ಹಾಗೇ ರಾಜ್ಯದಲ್ಲಿ ಜನರನ್ನು ಕಂಗೆಡಿಸಿರುವ ಕೊರೊನಾದಿಂದ ಅನ್ನದಾತ ಕೂಡ ಸಂಕಷ್ಟಕ್ಕೀಡಾಗಿದ್ದು,ಹಲವು ಕಡೆ ಬೆಳೆದ ಬೆಳೆ ಮಾರಾಟ ಮಾಡಲಾಗದೇ ರೈತರ ಪರದಾಟ ನಡೆಸುತ್ತಿದ್ದಾನೆ.
ಸದ್ಯ ಯಾದಗಿರಿ ಜಿಲ್ಲೆಯ ಶಾಹಪುರ ತಾಲೂಕಿನ ರೈತ ಕಷ್ಟಪಟ್ಟು ಬೆವರು ಸುರಿಸಿ ಸಾಲ ಸೋಲ ಮಾಡಿ ಬೆಳೆದಿದ್ದ ಹಣ್ಣಿನ ಬೆಳೆ ಇದೀಗ ಮಾರಾಟವಾಗದೇ ಕೊಳೆತು ಹೋಗುತ್ತಿದ್ದು,ಈ ಮೂಲಕ ಆತ ಕುಸಿದು ಕಂಗಾಲಾಗಿದ್ದಾನೆ.
ಹೌದು,ಈ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ರೈತ ಮಹಾಂತಪ್ಪ ಪಂಡಿತರಾಯ ಮಲಗೊಂಡ ಸರ್ವೆ ನಂಬರ್ ೮೦೫ರಲ್ಲಿರುವ ತನ್ನ ೨ ಎಕರೆ ಜಮೀನಿನಲ್ಲಿ ಸುಮಾರು ೨ ರಿಂದ ೩ ಲಕ್ಷದವರೆಗೆ ಸಾಲ ಮಾಡಿ, ಹಗಲು ರಾತ್ರಿ ಕಷ್ಟಪಟ್ಟು ಹೈಬ್ರಿಡ್ ಪಪ್ಪಾಯಿ ಹಣ್ಣು ಬೆಳೆದಿದ್ದರು.
ಆದರೆ ಕೊರೊನಾ ವೈರಸ್ ಹರಡುವಿಕೆಯ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆದ ಪರಿಣಾಮ ಮಹಾಂತಪ್ಪ ಬೆಳದಿದ್ದ ಪಪ್ಪಾಯಿ ಮಾರಾಟವಾಗದೇ ಕೊಳೆತು ನಾರುವ ಸ್ಥಿತಿಗೆ ಬಂದಿದೆ.
ಒAದು ವೇಳೆ ಈ ಪಪ್ಪಾಯಿ ಹಣ್ಣು ಸಕಾಲದಲ್ಲಿ ಮಾರಾಟವಾಗಿದ್ದರೇ ರೈತ ಮಹಾಂತಪ್ಪನಿಗೆ ಸುಮಾರು ೬ ರಿಂದ ೭ ಲಕ್ಷ ರೂಪಾಯಿ ಲಾಭ ಬರುತ್ತಿತ್ತು ಎನ್ನಲಾಗುತ್ತೆ.. ಆದರೆ ಲಾಕ್‌ಡೌನ್‌ನಿಂದ ಲಾಭವಿರಲಿ ಬೆಳೆದ ಹಣ್ಣು ಮಾರಾಟವಾಗದೇ ಈ ರೈತನ ಬದುಕನ್ನೆ ಕಸಿದುಕೊಂಡAತಾಗಿದೆ.
ಇನ್ನು ಲಾಕ್‌ಡೌನ್‌ನಿಂದ ಬೆಳೆದ ಬೆಳೆ ಮಾರಾಟವಾಗದೇ ಕೈ ಚೆಲ್ಲಿ ಕುಳಿತಿರುವ ರೈತ ಮಹಾಂತಪ್ಪ,ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಇತ್ತ ಗಮನಹರಿಸಿ ನಷ್ಟಕ್ಕೆ ಒಳಗಾಗಿರುವ ತಮಗೆ ಸಹಾಯ ಮಾಡಬೇಕು ಅಂತ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಈ ನಡುವೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಶಿಕಾಂತ್, ಯಾವ ರೈತರು ಕೂಡ ಚಿಂತೆ ಮಾಡಬೇಡಿ.ಧೈರ್ಯ ಕಳೆದುಕೊಂಡು ಕಂಗಾಲಾಗಬೇಡಿ.ನಿಮ್ಮ ಸಮಸ್ಯೆಯನ್ನ ನಾವು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಲಾಕ್‌ಡೌನ್ ಮುಗಿದ ನಂತರ ಸರ್ಕಾರ ಯಾವ ರೀತಿ ರೈತರಿಗೆ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನೋಡೋಣ ಎಂದು ಭರವಸೆ ನೀಡಿದ್ದಾರೆ.
ಒಟ್ಟಾರೆಯಾಗಿ ಕೃಷಿ ನಂಬಿ ಜೀವನ ನಡೆಸುವ ರೈತಾಪಿ ವರ್ಗಕ್ಕೆ ಈ ಕೊರೊನಾದಿಂದ ಭಾರೀ ನಷ್ಟ ಉಂಟಾಗಿದ್ದು,ಈಗಲಾದರೂ ಸರ್ಕಾರ ಹಾಗೂ ಯಾದಗಿರಿ ಜಿಲ್ಲಾಡಳಿತ ಒಂದಷ್ಟು ಪರಿಹಾರ ಕೊಟ್ಟರೇ ಇಂತಹ ಅದೆಷ್ಟೂ ರೈತರ ಬದುಕು ಮತ್ತೆ ಹಸನಾಗುತ್ತದೆ.

ನಾಗರಾಜ್ ಎಕ್ಸ್ ಪ್ರೆಸ್ ಟಿವಿ ಯಾದಗಿರಿ

Please follow and like us:

Related posts

Leave a Comment