ಹಿಂದೆ ಪ್ರವಾಹ ಈಗ ಕೊರೊನಾ …ರೈತನ ಗೋಳು ಕೇಳೋರು ಯಾರು?

ಗೋಕಾಕ್ : ಲಾಕ್‌ಡೌನ್ ಎಫೆಕ್ಟ್ ರಾಜ್ಯದ ಅನ್ನದಾತನಿಗೆ ಕೊಟ್ಟಿರುವ ಸಂಕಷ್ಟ ಅಷ್ಟಿಷ್ಟಲ್ಲ..ಯಾಕಂದ್ರೆ ವರ್ಷವಿಡಿ ರಾತ್ರ-ಹಗಲನ್ನದೆ ರೈತ ಬೆಳೆದ ಬೆಳೆ ಕೈಗೆ ಬರುವ ಸಮಯವಿದು.
ಆದರೆ ಇದೇ ಸಮಯದಲ್ಲಿ ಕೊರೊನಾ ಅನ್ನುವ ಮಹಾಮಾರಿ ಅಟ್ಟಹಾಸ ಹೆಚ್ಚಾಗಿರುವುದರಿಂದ ಬೆಳೆ ಬೆಳೆದ ರೈತ ಅದನ್ನು ಮಾರಾಟ ಮಾಡಿ ಜೀವನ ಸಾಗಿಸುವುದು ಇದೀಗ ದೂರಾದ ಮಾತಾಗಿದೆ.
ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಇದೇ ರೀತಿ ಅನ್ನದಾತರು ಬೆಳೆದ ಬೆಳೆಯನ್ನ ಸಾಗಿಸಲಾಗದೇ ನಷ್ಟ ಅನುಭವಿಸುತ್ತಿದ್ದಾರೆ.
ಹೌದು, ಇದೇ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ರೈತ ನೀಲಪ್ಪ ಕೇವತಿ ತಮ್ಮ ಹೊಲದಲ್ಲಿ ಕುಂಬಳಕಾಯಿ ಬೆಳೆ ಬೆಳೆದಿದ್ದರು.ಆದರೀಗ ಅವರು ತಾವು ಬೆಳೆದ ಕುಂಬಳಕಾಯಿಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಹಾಗೂ ಸೂಕ್ತ ವ್ಯಾಪಾರವಿಲ್ಲದೇ ನಷ್ಟ ಅನುಭವಿಸುವಂತಾಗಿದೆ. ಜೊತೆಗೆ ೩೦ಕ್ಕೂ ಅಧಿಕ ಟನ್ ಬೆಳೆಯನ್ನು ಹೊಲದಲ್ಲಿ ಕೊಳೆಸುವಂತಾಗಿದೆ.
ವಿಪರ್ಯಾಸವೆAದರೆ ಕಷ್ಟಪಟ್ಟು ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಿಸಲಾಗದೆ ನಾಶವಾಗುತ್ತಿರುವುದಕ್ಕೆ ಆ ರೈತನ ಕಣ್ಣಲ್ಲಿ ನೀರು ತರಿಸುವಂತೆ ಮಾಡಿದೆ. ಒಟ್ಟಾರೆ ಕಳೆದ ಬಾರಿ ಪ್ರವಾಹ,ಈ ಬಾರಿ ಕೊರೊನಾ ರೈತರ ಬದುಕಿಗೆ ಕೊಳ್ಳಿ ಇಟ್ಟಿರುವುದು ನಿಜಕ್ಕೂ ದುರಂತವೇ ಸರಿ..

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment