ಯಲಹಂಕ ವಿಭಾಗದ ಪೊಲೀಸರಿಂದ ಬಡವರಿಗೆ ಆಹಾರ, ದಿನಸಿ ವಿತರಣೆ..

ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾದ ದಿನದಿಂದಲೂ ಬಡವರು,ನಿರ್ಗತಿಕರು,ಕೂಲಿ ಕಾರ್ಮಿಕರು ಹಸಿವಿನಿಂದ ಬಳುತ್ತಿದ್ದಾರೆ.
ಸದ್ಯ ರಾಜ್ಯ ಸರ್ಕಾರ ಸೇರಿದಂತೆ ಹಲವು ಸಮಾಜ ಸೇವಕರು,ಸಂಘ ಸಂಸ್ಥೆಗಳು ಹೀಗೆ ಹಲವರು ಹಸಿವಿನಿಂದ ಬಳಲುತ್ತಿರುವ ಇವರೆಲ್ಲರಿಗೂ ಆಹಾರ ಭದ್ರತೆ ಕಲ್ಪಿಸುತ್ತಿದ್ದಾರೆ.
ಅಂದ ಹಾಗೇ ಇವರೆಲ್ಲರ ಜೊತೆ ರಾಜ್ಯದ ಪೊಲೀಸರು ಕೂಡ ಕೈ ಜೋಡಿಸಿದ್ದು,ಎಲ್ಲಾ ಕಡೆಯೂ ಕೂಡ ಪೊಲೀಸರು ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಊಟ,ದಿನಸಿ ವಿತರಣೆ ಮಾಡುತ್ತಿದ್ದು,ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.
ಅದರಂತೆ ಬೆಂಗಳೂರಿನ ಯಲಹಂಕ ಸಹಾಯಕ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲೂ ಕೂಡ ಆಹಾರ ಹಾಗೂ ದಿನಸಿಯನ್ನು ಪೊಲೀಸರು ವಿತರಿಸಿದ್ದಾರೆ.
ಇನ್ನು ಯಲಹಂಕ ಸಹಾಯಕ ಪೊಲೀಸ್ ಆಯುಕ್ತರ ವ್ಯಾಪ್ತಿಗೆ ಬರುವ ಯಲಹಂಕ, ಯಲಹಂಕ ಉಪನಗರ, ವಿದ್ಶಾರಣ್ಶಪುರ, ಕೊಡಿಗೇಹಳ್ಳಿ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಪ್ರತಿನಿತ್ಶ ಸುಮಾರು ನಾಲ್ಕು ಸಾವಿರ ಜನರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ.
ಅಲ್ಲದೆ, ಯಲಹಂಕ ವಿಭಾಗದಲ್ಲಿರುವ ಹಲವಾರು ದಾನಿಗಳ ಸಹಕಾರದಿಂದ ಪ್ರತಿ ನಿತ್ಶವೂ ಹಸಿದ ಬಡಜೀವಿಗಳಿಗೆ,ವಲಸೆ ಕೂಲಿ ಕಾರ್ಮಿಕರಿಗೆ ಎಸಿಪಿ ಶ್ರೀನಿವಾಸ್ ಹಾಗೂ ನಾಲ್ಕು ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್‌ಗಳು ಸೇರಿದಂತೆ ಪೋಲಿಸ್ ಸಿಬ್ಬಂದಿಗಳು ಸಿದ್ದ ಆಹಾರದ ಜೊತೆಗೆ ಹತ್ತು ದಿನಸಿ ಪದಾರ್ಥಗಳನ್ನು ವಿತರಿಸುತ್ತಿದ್ದಾರೆ.
ಒಟ್ಟಾರೆ ಯಲಹಂಕ ಪೋಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಸಮಾಜದ ರಕ್ಷಣೆಯ ಜೊತೆಗೆ ಇಂತಹ ತುರ್ತು ಪರಿಸ್ಥಿತಿಯಲ್ಲಿ ಬಡಜನರ ಪರ ನಿಂತು ಸಮಾಜಕ್ಕೆ ಉತ್ತಮ ಸಂದೇಶ ಸಾರಿ ಜನಸೇವೆ ಮಾಡುತ್ತಿರುವುದು ಶ್ಲಾಘನೀಯ.

ಶಿವಕುಮಾರ್ ಚಿಕ್ಕಜಾಲ ಎಕ್ಸ್ ಪ್ರೆಸ್ ಟಿವಿ ಯಲಹಂಕ(ಬೆAಗಳೂರು)

Please follow and like us:

Related posts

Leave a Comment