ಸಿರುಗುಪ್ಪದಲ್ಲಿ ಯಾರೂ ಹೊರಗಡೆ ಬರಬಾರದು

ಸಿರುಗುಪ್ಪ:ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕು ಪಂಚಾಯತ ಸಂಭಾಗಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ೧೨೯ನೇ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿ ಶಾಸಕ ಸೋಮಲಿಂಗಪ್ಪ ಡಾ.ಬಿರ್.ಅಂಬೇಡ್ಕರ್ ಪ್ರತಿಮೆಗೆ ಹಾರವನ್ನು ಹಾಕು ಮೂಲಕ ನಮನ ಸಲ್ಲಿಸಿದರು.
ಅಂಬೇಡ್ಕರ್ ಜಯಂತಿಯನ್ನು ಸರಳ, ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಹೆಚ್ಚಿನ ಜನಸಂದಣಿ ಇಲ್ಲದಂತೆ ಆಚರಿಸಲಾಗುತ್ತದೆ. ಸಾರ್ವಜನಿಕ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು.ಸರ್ಕಾರದ ಮಾರ್ಗದರ್ಶನ ಪ್ರತಿಯೊಬ್ಬ ವ್ಯಕ್ತಿಯೂ ಪಾಲಿಸುವ ಮೂಲಕ ಸಮಾಜಿಕ ಅಂತರ ಕಾಯ್ದೆ ಕೊಳ್ಳಬೇಕು.ಯಾರೂ ಹೊರಗಡೆ ಬರಬಾರದು ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿಗಳು,ತಾಲ್ಲೂಕು ಆಡಳಿತ ಅಧಿಕಾರಿಗಳು,ವಿವಿಧ ಪ್ರಗತಿಪರ ದಲಿತ ಸಂಘಟನೆಗಳು ಹಾಗೂ ಊರಿನ ಪ್ರಮುಖ ಮುಂಖಡರು ಹಾಜರಿದ್ದರು.

ಡಿ.ಅಲ್ಲಾ ಭಾಷ ಎಕ್ಸ್ಪ್ರೆಸ್ ಟಿವಿ ಸಿರುಗುಪ್ಪ (ಬಳ್ಳಾರಿ)

Please follow and like us:

Related posts

Leave a Comment