ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ ಅರಸೀಕೆರೆ ಶಾಸಕ

ಅರಸೀಕೆರೆ : ಲಾಕ್‌ಡೌನ್‌ನಿಂದಾಗಿ ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದಲ್ಲಿ ಜನ ಸಾಮಾನ್ಯರು ಸಂಕಷ್ಟದಲ್ಲಿ ಸಿಲುಕಿರೋದ್ರಿಂದ ೫೦ ಸಾವಿರ ಆಹಾರ ಧಾನ್ಯಗಳ ಕಿಟ್ ವಿತರಿಸಲು ಸ್ಥಳೀಯ ಶಾಸಕ ಶಿವಲಿಂಗೇಗೌಡ ಮುಂದಾಗಿದ್ದಾರೆ.
ಅAದ ಹಾಗೇ ನಗರದ ವಾರ್ಡ್ ಸಂಖ್ಯೆ ೨೮ರ ಸುನ್ನಿ ಚೌಕದ ಬಡಾವಣೆಯಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಎಷ್ಟು ಜನರಿಗೆ ಅಗತ್ಯವಿದೆಯೋ ಅವರಿಗೆ ತಮ್ಮ ಕೈಲಾದ ಮಟ್ಟಿಗೆ ಆಹಾರ ಧಾನ್ಯದ ಕಿಟ್ ತಲುಪಿಸುತ್ತಿದ್ದೇವೆ. ಒಂದು ವೇಳೆ ಏಪ್ರಿಲ್ ತಿಂಗಳ ನಂತರವೂ ಲಾಕ್‌ಡೌನ್ ಮುಂದುವರಿದರೆ ಕೈಲಾದ ಸಹಾಯ ಮಾಡುತ್ತೇನೆ ಎಂದರು.
ಇನ್ನು ನಮ್ಮ ತಾಲ್ಲೂಕಿನ ಯಾವೊಬ್ಬ ವ್ಯಕ್ತಿ ಕೂಡಾ ಹಸಿವಿನಿಂದ ಬಳಲಬಾರದು ಎಂದ ಅವರು, ಕೆಲವೊಂದು ಹಳ್ಳಿಗಳಿಗೆ ತಾವೇ ಸ್ವತಃ ತೆರಳಿ ಬೆಂಬಲಿಗರೊAದಿಗೆ ಕಿಟ್ ಹಂಚಿಕೆ ಮಾಡುತ್ತಿರೋದಾಗಿ ಹೇಳಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಅರಸೀಕೆರೆ

Please follow and like us:

Related posts

Leave a Comment