ಕೊರೊನಾಗೆ ಹೆದರಲ್ಲ, ಲಾಕ್‌ಡೌನ್ ಗೂ ಜಗಲ್ಲ,ಕಲಬುರಗಿಯಲ್ಲಿ ಜನಜಾತ್ರೆ ಮಾತ್ರ ನಿಂತಿಲ್ಲ..

ಕಲಬುರಗಿ: ಸದ್ಯ ಕೊರೊನಾ ಹಾಟ್‌ಸ್ವಾಟ್ ಆಗಿ ಕಲಬುರಗಿ ಜಿಲ್ಲೆ.ಆದರೆ ಇದಕ್ಕೆ ಲೆಕ್ಕಕ್ಕೆ ಇಟ್ಟುಕೊಳ್ಳದ ಇದೇ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ರಾವೂರ್ ಗ್ರಾಮಸ್ಥರು ಜಾತ್ರೆ ಮಹೋತ್ಸವ ನಡೆಸಿ ಲಾಕ್‌ಡೌನ್‌ಗೆ ನಾವು ಕೇರ್ ಮಾಡಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪರೋಕ್ಷವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ರವಾನಿಸಿದಂತಿದೆ.
ಅAದ ಹಾಗೇ ೧೪೪ ನಿಷೇದಾಜ್ಞೆ ಜಾರಿಯಲ್ಲಿರುವ ಕಲಬುರಗಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಜಾತ್ರೆ, ಉರೂಸ್, ಸಭೆ, ಸಮಾರಂಭಗಳನ್ನು ನಡೆಸದಂತೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.ಆದರೂ ರಾವೂರ್ ಗ್ರಾಮಸ್ಥರು ನಿಷೇಧಾಜ್ಞೆ ನಡುವೆಯೂ ಬೆಳಿಗ್ಗೆ ೬ ಗಂಟೆ ಸುಮಾರಿಗೆ ಗ್ರಾಮದ ಸಿದ್ದಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ನಡೆಸಿದ್ದು,ಈ ವೇಳೆ ಕನಿಷ್ಠ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸುಮಾರು ೨೦೦ಕ್ಕೂ ಹೆಚ್ಚು ಜನರು ಭಾಗಿಯಾಗಿ ದೇವರ ದರ್ಶನ ಪಡೆದಿದ್ದಾರೆ.
ಒಟ್ಟಾರೆ ಕೊರೊನಾ ನಿಯಂತ್ರಣಕ್ಕೆ ಹಗಲು ರಾತ್ರಿ ಜಿಲ್ಲಾಡಳಿತ ಶ್ರಮಿಸುತ್ತಿದೆ.ಜೊತೆಗೆ ರಾವೂರ್ ಗ್ರಾಮದಿಂದ ಕೇವಲ ೪ ಕಿ.ಮೀ ದೂರದಲ್ಲಿ ವಾಡಿ ಪಟ್ಟಣ ಇದೆ. ಈಗಾಗಲೇ ಇಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ವಾಡಿ ಪಟ್ಟಣದಾದ್ಯಂತ ಕಟ್ಟೆಚ್ಚರ ವಹಿಸಿ ಸೀಲ್ ಡೌನ್ ಮಾಡಲಾಗಿದೆ. ಆದರೂ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ರಾವೂರ್ ಗ್ರಾಮದ ಜನರು ಒಂದಡೆ ಸೇರಿ ಜಾತ್ರೆ ನಡೆಸಿದ್ದಾರೆ.
ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಕಲಬುರಗಿ

Please follow and like us:

Related posts

Leave a Comment