ಕೊಪ್ಪಳದಲ್ಲಿ ಕಾಣಿಸಿಕೊಂಡ ಯಮರಾಯ..!

ಕೊಪ್ಪಳ : ಮನೆಯಿಂದ ಹೊರಬರಬೇಡಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿ ಪೊಲೀಸರು ಕೂಡಾ ಸುಸ್ತಾಗಿದ್ದಾರೆ. ಲಾಠಿ ಬೀಸಿದ್ದಾಯ್ತು, ಕೈ ಮುಗಿದ್ದು ಪ್ರಾರ್ಥಿಸಿದ್ದೂ ಆಯ್ತು. ಜನ ಜಪ್ಪಯ್ಯ ಅಂದ್ರೂ ಕೇಳುತ್ತಿಲ್ಲ.
ರೋಗ ಬಂದ್ರೆ ಬರಲಿ ಅನ್ನುವ ನಿರ್ಲಕ್ಷ್ಯ ಧೋರಣೆ ಜನರದ್ದು. ಹಾಗಂತ ಪೊಲೀಸ್ ಅಧಿಕಾರಿಗಳು ಸುಮ್ಮನಿರಲು ಸಾಧ್ಯವೇ, ಜನರಲ್ಲಿ ಸದಾ ಜಾಗೃತಿ ಮೂಡಿಸಲೇಬೇಕು. ಇಂದಲ್ಲ ನಾಳೆ ನಮ್ಮ ಜನರಿಗೆ ಜ್ಞಾನೋದಯವಾಗುತ್ತದೆ ಅನ್ನುವ ನಂಬಿಕೆ ಅವರದ್ದು.
ಈ ನಿಟ್ಟಿನಲ್ಲಿ ಇದೀಗ ಕೊರೋನಾ ವೈರಸ್ ಕೊಪ್ಪಳದಲ್ಲಿ ರಣಕೇಕೆಯಾಡುವ ಮುನ್ನ ಎಚ್ಚೆತ್ತುಕೊಳ್ಳೋಣ ಎಂದು ಯಮಧರ್ಮ ಹಾಗೂ ಆತನ ವಾಹನವನ್ನೇ ಕರೆ ತಂದಿದ್ದರು.
ಗಾಬರಿಯಾಗಬೇಡಿ ಕೊರೊನಾ ಜಾಗೃತಿಗಾಗಿ ಪೊಲೀಸರ ಹೊಸ ಐಡಿಯಾ ಇದು. ಯಮನ ವೇಷಧಾರಿ ಹಾಗೂ ಕೋಣದ ಸಮೇತ ಜಾಗೃತಿ ಮೂಡಿಸಲು ಮುಂದಾಗಿರುವ ಪೊಲೀಸರು ಹೊರಗಡೆ ಬಂದ್ರೆ ಯಮರಾಯ ಕೊರಳಿಗೆ ಪಾಶ ಬಿಗಿಯುತ್ತಾನೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಾಭೀರಾಜ್ ದಸ್ತೆನವರ್ ಎಕ್ಸ್ ಪ್ರೆಸ್ ಟಿವಿ ಕೊಪ್ಪಳ

Please follow and like us:

Related posts

Leave a Comment