ಸಿಎಂ ಪರಿಹಾರ ನಿಧಿಗೆ 3 ಲಕ್ಷ ರೂ. ದೇಣಿಗೆ

ಲಿಂಗಸೂಗೂರು(ರಾಯಚೂರು):ಕೋವಿಡ್-೧೯ ವೈರಸ್ ತಡೆಗೆ ಸರ್ಕಾರ ಕೈಗೊಂಡಿರುವ ಅಗತ್ಯ ಸೌಲಭ್ಯಗಳಿಗೆ ನೆರವಾಗಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಹರಿದು ಬರುತ್ತಿದೆ.
ಸದ್ಯ ಶಾಸಕರು, ಸಂಸದರು, ಸಂಘ ಪರಿವಾರದವರು ಹೀಗೆ ಎಲ್ಲರೂ ಸಿ.ಎಂ.ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ನೇತೃತ್ವದಲ್ಲಿ ಲಿಂಗಸೂಗೂರು ತಾಲೂಕಿನ ವೀರಶೈವ ವಿಧ್ಯಾವರ್ಧಕ ಸಂಘದ ವತಿಯಿಂದ 2 ಲಕ್ಷ ರೂ.ಗಳ ಚೆಕ್ ಹಾಗೂ ಅದೇ ರೀತಿ ಪಟ್ಟಣದ ಅಮರೇಶ್ವರ ವಿಧ್ಯಾವರ್ಧಕ ಸಂಘದಿ0ದ 1 ಲಕ್ಷ ರೂ.ಚೆಕ್‌ನ್ನು ಲಿಂಗಸೂಗೂರು ಸಹಾಯಕ ಆಯುಕ್ತ ರಾಜಶೇಖರ ಡಂಬಳರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ಹಸ್ತಾಂತರಿಸಲಾಯಿತು.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Please follow and like us:

Related posts

Leave a Comment