ಶಾಸಕರಿಂದ ಪತ್ರಕರ್ತರಿಗೆ ಆಹಾರ ಕಿಟ್

ಮಳವಳ್ಳಿ(ಮಂಡ್ಯ):ದೇಶ ವ್ಯಾಪ್ತಿ ಕೊರೊನಾ ಮಹಾಮಾರಿ ಹರಡುತ್ತಿರುವ ಬಗ್ಗೆ ಸುದ್ದಿ ಮಾಡುತ್ತಿರುವ ಪತ್ರಕರ್ತರಿಗೆ ಶಾಸಕ
ಡಾ.ಕೆ.ಅನ್ನದಾನಿ ಆಹಾರ ಕಿಟ್ ವಿತರಿಸಿದ್ದಾರೆ.
ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಶಾಸಕ ಡಾ.ಕೆ ಅನ್ನದಾನಿ ಹಾಗೂ ಕಾರ್ಯಕರ್ತರು ಸುಮಾರು ೨೦ಕ್ಕೂ ಹೆಚ್ಚು ಪತ್ರಕರ್ತರಿಗೆ ಅಕ್ಕಿ, ಬೇಳೆ, ಎಣ್ಣೆ, ಕಾಳು ಪದಾರ್ಥಗಳನ್ನು ವಿತರಿಸಿದರು.
ಬಳಿಕ ಶಾಸಕ ಡಾ.ಕೆ ಅನ್ನದಾನಿ ಮಾತನಾಡಿ,ಮಳವಳ್ಳಿ ಪಟ್ಟಣದ ರೆಡ್ ಝೋನ್ ಆಗಿದ್ದರೂ ಅದರ ಭಯವನ್ನು ಬಿಟ್ಟು ವರದಿ ಮಾಡಲು ಬೀದಿಗೆ ಬಂದಿದ್ದು,ಇಲ್ಲಿನ ಪತ್ರಕರ್ತರು ಸೇನಾನಿ ರೀತಿ ಸೇವೆ ಸಲ್ಲಿಸುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇನ್ನೂ ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯಿಂದ. ಪರಿಕರವನ್ನು ವಿತರಿಸಲಾಗುವುದು ಎಂದರು.
ಈ ವೇಳೆಯಲ್ಲಿ ಮಾಜಿ ಪುರಸಭಾದ್ಯಕ್ಷ ಎಂ.ಸಿ.ವೀರೇಗೌಡ,ಪುರಸಭೆ ಸದಸ್ಯ ನಂದಕುಮಾರ, ಚಂದಹಳ್ಳಿ ಶ್ರೀಧರ್ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.

ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Please follow and like us:

Related posts

Leave a Comment