ಬೆಟ್ಟದಾಸನಪುರ ಎಣ್ಣೆ ಸಾಗಾಟದ ಹಿಂದೆ ಹಿರಿಯ ಪೊಲೀಸ್ ಅಧಿಕಾರಿ ಕೈವಾಡ.. (Exclusive news)

ಪೊಲೀಸ್ ಇಲಾಖೆಯಲ್ಲಿ ಮುಸುಕಿನ ಗುದ್ದಾಟ ಶುರು..! ಅಕ್ರಮ ಮದ್ಯ ಹಿಡಿದ ಎಸಿಪಿ ಸಸ್ಪೆಂಡ್..
(Exclusive news)
ಆನೇಕಲ್(ಬೆಂ.ನಗರ): ರಾಜ್ಯದಲ್ಲಿ ಒಂದೆಡೆ ಕೊರೊನಾ,ಲಾಕ್‌ಡೌನ್ ನಡುವೆ ಜನರು ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ರೆ, ಇನ್ನೊಂದು ಕಡೆ ಕೆಲವು ಅಧಿಕಾರಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಆಡಬಾರದ ಆಟ ಆಡುತ್ತಿರುವುದು ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದಷ್ಟೆ ಹುಬ್ಬಳ್ಳಿಯಲ್ಲಿ ಅರಣ್ಯ ಸಂಚಾರಿ ದಳದ ಪಿಎಸ್‌ಐನೊಬ್ಬ ಸರ್ಕಾರಿ ಜೀಪನ್ನೆ ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿತ್ತು.ಇದಾದ ನಂತರ ಅಂಬ್ಯುಲೆನ್ಸ್ಗಳಲ್ಲಿ ಮದ್ಯ ಮಾರಾಟ ಹೀಗೆ ಕೆಲವು ಪ್ರಕರಣಗಳು ಕೂಡ ಬಯಲಾಗಿದ್ದವು.
ಇದೀಗ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಬೆಟ್ಟದಾಸನಪುರದ ಬಳಿ ಸರಕಾರಿ ವಾಹನದಲ್ಲಿ ಮದ್ಯ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ಅAದ ಹಾಗೇ ಕಳೆದ ೧೧ ರಂದು ಬೆಟ್ಟದಾಸನಪುರದ ಬಳಿ ಸರ್ಕಾರದ ಜಾಗೃತಿ ದಳದ ವಾಹನದಲ್ಲಿ ಬರೋಬ್ಬರಿ ಎಂಟು ಬಾಕ್ಸ್ನಲ್ಲಿ ೧೦೦ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಬಳಿಕ ಇದರ ಖಚಿತ ಮಾಹಿತಿ ಪಡೆದ ಎಸಿಪಿ ವಾಸು ನೇತೃತ್ವದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ದಾಳಿ ನಡೆಸಿ ವಾಹನ ಹಾಗು ಮದ್ಯ ಸೀಜ್ ಮಾಡಿದ್ದರು.
ಇದಾದ ಬಳಿಕ ಸರಕಾರಿ ವಾಹನದಲ್ಲಿ ಮದ್ಯ ಸಾಗಾಟ ಮಾಡಿದ್ದ ಖದೀಮನ ವಿರುದ್ದ ಎಸಿಪಿ ವಾಸು ಎಫ್‌ಐಆರ್ ದಾಖಲು ಮಾಡಿದ್ದರು.
ಆದರೀಗ ಈ ಮದ್ಯ ಸಾಗಾಟದ ಹಿಂದೆ ಅಡಿಷನಲ್ ಕಮಿಷನರ್ ಮುರುಗನ್ ಹೆಸರು ಕೇಳಿ ಬಂದಿದೆ.ಅಲ್ಲದೆ, ಈ ಪ್ರಕರಣದಲ್ಲಿ ಲಂಚ ಕೇಳಿದರೆಂದು ಕುಂಟು ನೆಪ ಹೇಳಿ ಎಸಿಪಿ ವಾಸುರನ್ನ ಸಸ್ಪೆಂಡ್ ಮಾಡಲಾಗಿದೆ.
ಒಟ್ಟಿನಲ್ಲಿ, ಪ್ರಮಾಣಿಕವಾಗಿ ಕೆಲಸ ಮಾಡಿದ್ದೆ ತಪ್ಪಾಯ್ತಾ?,ಪ್ರಕರಣ ದಾಖಲು ಮಾಡಿದ್ದಕ್ಕೆ ಸರಕಾರ ಕೊಟ್ಟಿದೆ ಬಹುಮಾನ?ಎಲ್ಲರ ರಕ್ಷಣೆ ಮಾಡುವ ಪೋಲೀಸರ ಪಾಡೆ ಹೀಗಾದರೆ ಸಾಮನ್ಯ ರ ಪಾಡೇನು?,ಮದ್ಯ ಸೀಜ್ ಮಾಡಿದ್ದೆ ಕೆಲಸಕ್ಕೆ ಕುತ್ತಾಯ್ತಾ?,ಹಿರಿಯ ಅಧಿಕಾರಿ ಮಾತಿಗೆ ಬೆಲೆ ಕೊಟ್ಟಿಲ್ಲ ಎಂದು ಮಾಡಿದ್ರಾ ಟಾರ್ಗೆಟ್? ಎಂಬ ಪ್ರಶ್ನೆ ಎದ್ದಿದ್ದು,ಸ್ವತಃ ಎಸಿಪಿ ವಾಸು ಸುದ್ದಿಗಾರರೊಂದಿಗೆ ಮಾತನಾಡಿ, ವಿಶೇಷ್ ಗುಪ್ತ ಹಾಗು ಚಾಲಕ ಗೋಪಿ ಜೊತೆ ಅಡಿಷನಲ್ ಕಮಿಷನರ್ ಮುರುಗನ್ ಕೈವಾಡ ಈ ಪ್ರಕರಣದಲ್ಲಿ ಇದೆ ಎಂದು ಆರೋಪ ಮಾಡಿದ್ದಾರೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment