ಮಸೀದಿಯಲ್ಲಿ ಮೂವರು ಮಾತ್ರ ಪ್ರಾರ್ಥನೆ ಸಲ್ಲಿಸಬೇಕು

ಸಿಂಧನೂರು(ರಾಯಚೂರು): ಯಾವುದೇ ಧರ್ಮದ ಜನತೆಯ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಸರ್ಕಾರಕ್ಕೆ ಇಲ್ಲ.ಮಹಾಮಾರಿ ಕೋವಿಡ್-೧೯ ತಡೆಗಟ್ಟಲು ಸರ್ಕಾರವು ಕೆಲವು ನಿಯಮಗಳನ್ನು ಜಾರಿಗೆ ಬಂದಿದ್ದು ಇದನ್ನು ಪ್ರತಿಯೊಬ್ಬರೂ ಕಟ್ಟು ನಿಟ್ಟಾಗಿ ಪಾಲನೆ ಮಾಡುವಂತೆ ಸರ್ಕಲ್ ಇನ್ಸ್ ಪೆಕ್ಟರ್ ಬಾಲ ಚಂದ್ರ ಲಕ್ಕಂ ಮನವಿ ಮಾಡಿದರು…
ಸಿಂಧನೂರು ನಗರದ ಎಪಿಎಂಸಿಯಲ್ಲಿ ಇರುವ ನಗರ ಪೋಲಿಸ ಠಾಣೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಬಾಲ ಚಂದ್ರ ಲಕ್ಕಂ ನೇತೃತ್ವದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ನಡೆಸಲಾಯಿತು.ಈ ಸಭೆಯಲ್ಲಿ ವಿವಿಧ ಪಕ್ಷದ ಮುಖಂಡರು,ವಿವಿಧ ಸಮಾಜದ ಮುಖಂಡರು ಭಾಗವಹಿಸಿ.ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ನಂತರ ಮಾತನಾಡಿ ಸರ್ಕಲ್ ಇನ್ಸ್ ಪೆಕ್ಟರ್,ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸರಕಾರವು ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದು,ಅದರAತೆ ಮಸೀದಿಯಲ್ಲಿ ಮೂರು ಜನರು ಮಾತ್ರ ಪ್ರಾರ್ಥನೆ ಸಲ್ಲಿಸಬೇಕು.ಮಸೀದಿ ಮುಂದೆ ಯಾವುದೇ ರೀತಿಯ ಆಹಾರದ ಪದಾರ್ಥಗಳನ್ನು ಮಾರಾಟ ಮಾಡಬಾರದು.ಇಫ್ತಾರ್ ಕೂಟ ಆಯೋಜನೆ ಮಾಡುವಂತಿಲ್ಲ ಎಂದು ತಿಳಿಸಿದರು…
ಈ ಸಂಧರ್ಭದಲ್ಲಿ ಸಬ್ ಇನ್ಸ್ ಪೆಕ್ಟರ್ ವಿಜಯ ಕೃಷ್ಣ, ಮುಖಂಡರಾದ ಹೆಚ್.ಎನ್.ಬಡಿಗೇರ, ರಾಜಶೇಖರ ಪಾಟೀಲ್, ಸೈಯದ್ ಬಂದೇ ನವಾಜ್, ಕಾಳಿಂಗಪ್ಪ, ವಕೀಲರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಸೈಯದ್ ಬಂದೇ ನವಾಜ್, ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment