ಮಳವಳ್ಳಿ ತಾಲೂಕಿನಲ್ಲಿ ಬಾಳೆ ಬೆಳೆ ನಾಶ

ಮಳವಳ್ಳಿ(ಮಂಡ್ಯ):ಕಟಾವಿಗೆ ಬಂದಿದ್ದ ಬಾಳೆ ಗಿಡಗಳು ಕಳೆದ ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ನೆಲಕ್ಕೆ ಬಿದ್ದು ಮಣ್ಣು ಪಾಲಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಕಗ್ಗಲೀಪುರ ಗ್ರಾಮದಲ್ಲಿ ನಡೆದಿದೆ.
ಮಳವಳ್ಳಿ ತಾಲ್ಲೂಕಿನ ಕಗ್ಗಲೀಪುರ ಗ್ರಾಮದ ನಿವಾಸಿ ಹೊಂಬಾಳಮ್ಮ ಮಲ್ಲಯ್ಯ ತಮ್ಮ ಮೂರು ಎಕರೆ ಜಮೀನಿನಲ್ಲಿ ಸುಮಾರು ಎರಡು ಸಾವಿರದ ಎಂಟುನೂರು ಬಾಳೆ ಗಿಡಗಳನ್ನು ನೆಟ್ಟು ಅಂದಾಜು ನಾಲ್ಕು ಲಕ್ಷ ರೂ ಖರ್ಚು ಮಾಡಿ ಬಾಳೆ ಬೆಳೆದಿದ್ದರು, ಅಲ್ಲದೆ ಬಾಳೆ ಕಾಯಿ ಕಟಾವಿಗೆ ಬಂದಿತ್ತು.
ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದಿನ ವಾರ ಬಾಳೆ ಕಟಾವು ಮಾಡುವುದಾಗಿ ಬಾಳೆ ಕಾಯಿ ಕೊಳ್ಳುವ ವ್ಯಾಪಾರಿ ಹೇಳಿದ್ದರ ನಡುವೇ ಕಳೆದ ರಾತ್ರಿ ಸುರಿದ ಬಾರಿ ಗಾಳಿ ಮಳೆಯಿಂದಾಗಿ ನೂರಾರು ಗಿಡಗಳು ನೆಲಕ್ಕೆ ಉರುಳಿ ಮಣ್ಣು ಪಾಲಾಗಿದ್ದು ರೈತ ಕಂಗಾಲಾಗಿದ್ದಾನೆ.
ಈ ಕುರಿತು ತನ್ನ ಅಳನ್ನು ತೊಡಿಕೊಂಡ ರೈತ ಮಲ್ಲಯ್ಯ ಒಂದು ವರ್ಷದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಷ್ಟ ಪಟ್ಟು ಹಗಲು ರಾತ್ರಿ ಎನ್ನದೆ ವ್ಯವಸಾಯ ಮಾಡಿದ್ದೆ ಇನ್ನೂ ಒಂದು ವಾರದಲ್ಲಿ ಕಟಾವು ಮಾಡಬೇಕಿದ್ದ ಬಾಳೆ ರಾತ್ರಿ ಸುರಿದ ಮಳೆಯಿಂದಾಗಿ ನೂರು ಬಾಳೆ ಗಿಡಗಳು ಮುರಿದು ನೆಲಕ್ಕೆ ಬಿದ್ದಿದ್ದು ನನಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಇದನ್ನು ನೋಡಿ ನನಗೆ ಏನು ದೋಚದಂತಾಗಿದೆ, ನನಗೆ ಆಗಿರುವ ನಷ್ಟಕ್ಕೆ ಸಂಬAಧ ಪಟ್ಟ ಇಲಾಖೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಒಟ್ಟಿನಲ್ಲಿ ಒಂದಡೆ ಕೊರಾನ ಮಹಾಮಾರಿಯಿಂದ ತತ್ತರಿಸಿದರೆ ಇನ್ನೊಂದು ಕಡೆ ಕಳೆದ ರಾತ್ರಿ ಮಳೆಯಿಂದ ಬಾಳೆ ನಾಶವಾಗಿದೆ ರೈತರು ಸಂಕಷ್ಟ ಯಾವಾಗ ಪರಿಹಾರಯಾಗುತ್ತಾರೆಯೋ ಕಾದು ನೋಡಬೇಕಾಗಿದೆ.

ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Please follow and like us:

Related posts

Leave a Comment