ಅರಕಲಗೂಡಿನಲ್ಲಿ ಮಳೆ-ಗಾಳಿಗೆ ನೆಲಕ್ಕುರುಳಿದ ವಿದ್ಯುತ್ ಕಂಬ,ಮರಗಳು

ಅರಕಲಗೂಡು(ಹಾಸನ):ತಾಲೂಕಿನ ಕೊಣನೂರು ಹೋಬಳಿಯಲ್ಲಿ ಇಂದು ಸಂಜೆ ಸುರಿದ ಧಾಕಾರಾರ ಮಳೆ-ಗಾಳಿಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿ ಮರಗಳು ಬುಡಮೇಲಾಗಿವೆ.
ಪಟ್ಟಣದಲ್ಲಿ ಸಂಜೆ ವೇಳೆಗೆ ಗುಡುಗು ಸಹಿತ ಅರ್ಧ ತಾಸಿಗು ಹೆಚ್ಚು ಹೊತ್ತು ಮಳೆ ಅಬ್ಬರಿಸಿತು.ಮಳೆ-ಗಾಳಿ ಹೊಡೆತಕ್ಕೆ ಕೊಣನೂರು ಅಂಬೇಡ್ಕರ್ ನಗರದಲ್ಲಿ ಮರಗಳು,ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮಳೆ ಬರುವ ಸಮಯಕ್ಕೆ ಕರೆಂಟ್ ಇರಲಿಲ್ಲ ಕಾರಣ ಅದೃಷ್ಟವ ಶಾತ್ ಕಂಬಗಳು ವಾಸದ ಮನೆಗಳ ಪಕ್ಕಕ್ಕೇ ಉರುಳಿವೆ, ಮನೆಗಳ ಮೇಲೆ ಬಿದ್ದಿದ್ದರೆ ಅಪಾಯ ಉಂಟಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನು ಅರಕಲಗೂಡು ಪಟ್ಟಣ ಮಾತ್ರವಲ್ಲದೆ ತಾಲೂಕಿನಲ್ಲಿ ಬಿದ್ದ ಮಳೆಗೆ ಬಿಸಿಲಿ ತಾಪಕ್ಕೆ ಬಳಲಿದ್ದ ಜನತೆಗೆ ತಂಪೆರೆದಿದ್ದು ರೈತಾಪಿ ವರ್ಗದ ಜನರ ಸಂತಸಕ್ಕೆ ಕಾರಣವಾಗಿದೆ.

ಎ.ಎಸ್ ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು(ಹಾಸನ)

Please follow and like us:

Related posts

Leave a Comment