ನೆಲಮಂಗಲ ತಾಲೂಕಿನಲ್ಲಿ ಬಡವರಿಗೆ ದಿನಸಿ ವಿತರಣೆ

ನೆಲಮಂಗಲ(ಬೆA.ಗ್ರಾಮಾAತರ ಜಿಲ್ಲೆ):ನೆಲಮಂಗಲದ ಬಳಿ ಇರುವ ಇತ್ತೀಚೆಗಷ್ಟೇ ನಗರಸಭೆಗೆ ಸೇರ್ಪಡೆಯಾದ ವಾಜರಹಳ್ಳಿ ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯ ಹಾಗೂ ಅರಿಶಿನಕುಂಟೆ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ವಿ.ಕೆ.ಎಸ್ ಕುಟುಂಬದ ಭಾಗ್ಯ ಕೆಂಪರಾಜು ಪಂಚಾಯಿತಿ ವ್ಯಾಪ್ತಿಯ ಹಲವಾರು ಹಳ್ಳಿಗಳಲ್ಲಿ ವಾಸವಿರುವ ಬಡವರಿಗೆ ದಿನಸಿ ಹಾಗೂ ತರಕಾರಿ ಕಿಟ್‌ಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ನಮ್ಮೊಂದಿಗೆ ಮಾತನಾಡಿದ ಅವರು.ಈಗಾಗಲೇ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಾರು ಹಳ್ಳಿಗಳ ಬಡ ಕುಟುಂಬದವರಿಗೆ ದಿನಸಿ ಹಾಗೂ ತರಕಾರಿಗಳ ವಿತರಣೆ ಮಾಡಲಾಗಿದ್ದು ಕೊರೊನಾ ಭೀತಿಯಿಂದಾಗಿ ಇಡೀ ದೇಶವೇ ಲಾಕ್‌ಡೌನ್ ಆದ ಪರಿಣಾಮ ಜನಸಾಮಾನ್ಯರು ಪರದಾಡುವಂತಾಗಿತ್ತು.
ಇನ್ನು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಬಡವರು ಕೂಲಿ ಕಾರ್ಮಿಕರು ನೆಲೆಸಿರುವುದರಿಂದ ಅವರಿಗೆ ಆಹಾರದ ತೊಂದರೆ ಉಂಟಾಗಿತ್ತು.ಹಾಗಾಗಿಅವರಿಗೆ ಕೈಲಾದಷ್ಟು ಸಹಾಯ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಕೆ.ಕೆ.ಕಿರಣ್ ಎಕ್ಸ್ ಪ್ರೆಸ್ ಟಿವಿ ನೆಲಮಂಗಲ(ಬೆA.ಗ್ರಾಮಾAತರ ಜಿಲ್ಲೆ)

Please follow and like us:

Related posts

Leave a Comment