ಆಕಸ್ಮಿಕ ಬೆಂಕಿ, ಕಬ್ಬು ಬೆಳೆ ಸುಟ್ಟು ಭಸ್ಮ..

ತಿ.ನರಸೀಪುರ(ಮೈಸೂರು): ತಾಲ್ಲೂಕಿನ ಮಾದಾಪುರ ಗ್ರಾಮದಿಂದ ಸುಮಾರು ೧ ಕಿಲೊ ಮೀಟರ್ ದೂರದ ತೊಟ್ಟೋಡಿಗೆ ಹಾದು ಹೋಗುವ ಕಾಲುದಾರಿಯಲ್ಲಿ ಕಟಾವಿಗೆ ಬಂದಿದ್ದ ೨ ಎಕರೆ ೧ ಗುಂಟೆ ಕಬ್ಬು ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾದ ಘಟನೆ ಸಂಭವಿಸಿದೆ.
ವಿಪರ್ಯಾಸವೆಂದರೆ ಬೆಂಕಿ ನಂದಿಸಲು ಬಂದ ಅಗ್ನಿ ಶಾಮಕ ದಳದ ವಾಹನ ಆ ಕಾವಲು ದಾರಿಯಲ್ಲಿ ತೆರಳಲಾಗದ ಪರಿಣಾಮ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸದೇ ಅಸಹಾಯಕರಾಗಿ ಹಿಂದಿರುಗಿದ ಘಟನೆ ನಡೆದಿದೆ.
ಇನ್ನು ಜಮೀನಿನ ಮಾಲೀಕರಾದ ರೈತ ಮಹಿಳೆ ಪಂಕಜ ನೀಡಿದ ದೂರಿನ ಹಿನ್ನೆಲ್ಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಟಿ. ನರಸೀಪುರ ಠಾಣೆಯ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದೆ.
ಇನ್ನು ಕಬ್ಬು ಬೆಂಕಿಗಾಹುತಿಯಾದ ಹಿನ್ನೆಲೆಯಲ್ಲಿ ರೈತ ಮಹಿಳೆ ಪಂಕಜ ರೋಧಿಸುತ್ತಿದ್ದು,ಸರ್ಕಾರದಿಂದ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

ರೇವಣ್ಣ ಎಕ್ಸ್ ಪ್ರೆಸ್ ಟಿವಿ ತಿ.ನರಸೀಪುರ(ಮೈಸೂರು)

Please follow and like us:

Related posts

Leave a Comment