ನಿತ್ಯ 500 ಮಂದಿ ಬಡವರಿಗೆ ಅನ್ನ ಸಂತರ್ಪಣೆ

ಮಹದೇವಪುರ(ಬೆಂ.ನಗರ):ಮಹದೇವಪುರ ಕ್ಷೇತ್ರದ ಕಿತ್ತಗನೂರು ಪಂಚಾಯತಿ ವ್ಯಾಪ್ತಿಯ ಸುಮಾರು ೫೦೦ ಬಡ ಜನರಿಗೆ ಬೆಂಗಳೂರು ಪೂರ್ವ ತಾಲೂಕು ಪಂಚಾಯತಿ ಉಪಾಧ್ಯಕ್ಷ ಭಾಗ್ಯಮ ಕೆ.ವಿ.ಸತೀಶ್, ಸ್ವಯಂ ಸೇವಕ ತಂಡ,ಸ್ಥಳೀಯ ದಾನಿಗಳು ಹಾಗೂ ಲೇಔಟ್ ನಿವಾಸಿಗಳು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.
ಸದ್ಯ ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಷ್ಟದಲ್ಲಿರುವ ಸುಮಾರು ೫೦೦ ಮಂದಿ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ
ದಿನ ನಿತ್ಯ ಊಟದ ವ್ಯವಸ್ಥೆ, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಲಾಗುತ್ತಿದೆ.ಇದಕ್ಕೆ ಶಾಸಕ ಅರವಿಂದ ಲಿಂಬಾವಳಿ ಹಾಗೂ ಕ್ಷೇತ್ರ ಗ್ರಾಮಾಂತರ ಅಧ್ಯಕ್ಷ ನಟರಾಜ್ ಹೆಚ್ಚಿನ ಸಹಕಾರ ನೀಡಿದ್ದಾರೆ.
ಇದೇ ವೇಳೆ ಮುಖಂಡ ಕೆ.ವಿ.ಸತೀಶ್ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಕಷ್ಟದಲ್ಲಿರುವ ಜನÀರನ್ನು ಗುರುತಿಸಿ ನಮ್ಮ ಸ್ವಂತ ಖರ್ಚಿನಿಂದ ಸುಮಾರು ೩೦೦ ಕುಟುಂಬಗಳಿಗೆ ದಿನಸಿಯನ್ನು ಸಹ ನೀಡಲಾಗುತ್ತಿದೆ ಎಂದರು.
ಈ ವೇಳೆ ಎಸ್.ಎಂ.ಬಿ.ಮAಜುನಾಥ್, ರಮೇಶ್, ವೆಂಕಟೇಶ್ ಮೂರ್ತಿ, ಕೃಷ್ಣಮೂರ್ತಿ, ಪ್ರಸಾದ್, ನರೇಶ್, ಪ್ರಮೋದ್, ಚಾರ್ಲ್ಸ್ ಮತ್ತು ತಂಡದವರು ಹಾಜರಿದ್ದರು.

ಪರಿಸರ ಮಂಜುನಾಥ್ ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರ(ಬೆಂ.ನಗರ)

Please follow and like us:

Related posts

Leave a Comment