ಪಂಪ್ ಸೆಟ್ ಮೂಲಕ ನೀರು ಒದಗಿಸಿಕೊಳ್ಳಲು ರೈತರಿಗೆ ಅನುಮತಿ ಕೊಡಿ..

ಇಂಡಿ(ವಿಜಯಪುರ): ಇಂಡಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗುತ್ತಿದೆ.ಹೀಗಾಗಿ ಕೃಷ್ಣಾ ಕಾಲುವೆಯಿಂದ ಬಿಡುಗಡೆಯಾದ ನೀರನ್ನು ರೈತರ ಪಂಪಸೆಟ್‌ಗೂ ನೀಡಬೇಕು ಎಂದು ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ್ ಒತ್ತಾಯಿಸಿದ್ದಾರೆ.
ಈ ಸಂಬAಧ ತಹಶೀಲ್ದಾರ್ ಚಿದಂಬರ ಕುಲಕರ್ಣಿರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಇಂಡಿ ತಾಲ್ಲೂಕಿನಾದ್ಯಾಂತ ನೀರಿನ ಸಮಸ್ಯೆ ಇದೆ.ಈ ಭಾಗದ ಜನರ ಕುಡಿಯುವ ನೀರಿಗಾಗಿ ಕೃಷ್ಣಾ ನದಿಯಿಂದ ಲೋಣಿ ಹಾಗೂ ಅರ್ಜನಾಳ ಕೆರೆಗೆ ನೀರು ಬಿಡಲಾಗಿದೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೂಗಿ,ಮಸಳಿ,ತಡವಲಗಾ,ಗೊರನಾಳ ಇತರೆ ಗ್ರಾಮಗಳು ನೀರಿನ ಯಾವುದೇ ಮೂಲವಿಲ್ಲದೇ ಸಮಸ್ಯೆ ಎದುರಿಸುವಂತಾಗಿದೆ.
ಹೀಗಾಗಿ ಈ ಭಾಗದ ರೈತರು ಕಾಲುವೆಯಿಂದ ಪೈಪಲೈನ್ ಮೂಲಕ ಜನ ಜಾನವಾರುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ನೀರಾವರಿ ಅಧಿಕಾರಿಗಳು ರೈತರು ಪಂಪಸೆಟ್ ಮೂಲಕ ನೀರು ಎತ್ತಬಾರದೆಂದು ತಾಕೀತು ಮಾಡಿದ್ದಾರೆ. ಇದರ ಹಿನ್ನೆಲೆಯಲ್ಲಿ ರೈತರು ಪಂಪಸೆಟ್ ಮೂಲಕ ನೀರು ಒದಗಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುಧೀರ್ ಕರಕಟ್ಟಿ, ಸಿದ್ದು ಡಂಗಾ, ಶ್ರೀಶೈಲಗೌಡ ಪಾಟೀಲ್, ಮಹಿಬೂಬ ಬೆವನೂರ,ಶ್ರೀಶೈಲ ಪೂಜಾರಿ,ಸುಜೀತ ಕುಮಾರ ಲಾಳಸಂಗಿ ಹಾಜರಿದ್ದರು.

ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ(ವಿಜಯಪುರ)

Please follow and like us:

Related posts

Leave a Comment