ಪೌರಕಾರ್ಮಿಕರಿಗೆ-ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ

ಮಳವಳ್ಳಿ (ಮಂಡ್ಯ): ಮಳವಳ್ಳಿ ಪಟ್ಟಣದ ಪುರಸಭೆ ಆವರಣದಲ್ಲಿ ಮರಿ ತಿಬ್ಬೇಗೌಡರು ಅಭಿಮಾನಿ ಬಳಗದವತಿಯಿಂದ ಪೌರಕಾರ್ಮಿಕರಿಗೆ ಹಾಗೂ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ ನಡೆಯಿತು.
ಅಂದ ಹಾಗೇ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ರವರ ಅಭಿಮಾನಿ ಬಳಗದ ರಮೇಶ, ಚಿಕ್ಕರಾಜು, ಚೌಡಯ್ಯ, ಕುಮಾರ್, ಪುಟ್ಟಸ್ವಾಮಿ ಜಿ ಶಿವರುದ್ರ ನೇತೃತ್ವದಲ್ಲಿ ಡಿವೈಎಸ್‌ಪಿ ಪೃಥ್ವಿ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು.
ಸದ್ಯ ಅಕ್ಕಿ, ಉಪ್ಪು ಸೇರಿದಂತೆ ತಲಾ ೭೦೦ ರೂಪಾಯಿ ವೆಚ್ಚದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಇನ್ನೂ ಅಯೋಜಕ ಮಾಜಿ ಪುರಸಭಾಧ್ಯಕ್ಷ ಚಿಕ್ಕರಾಜು ಮಾತನಾಡಿ, ಹಗಲಿರಳು ದುಡಿಯುತ್ತಿರುವ ಪೌರಕಾರ್ಮಿಕರು ಹಾಗೂ ಪತ್ರಕರ್ತರಿಂದ ಮಳವಳ್ಳಿ ಪಟ್ಟಣದಲ್ಲಿ ಕೊರೊನಾ ಗ್ರಾಮೀಣ ಪ್ರದೇಶಗಳಿಗೆ ಹರಡದಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು.
ಇನ್ನೂ ಡಿವೈಎಸ್‌ಪಿ ಪೃಥ್ವಿ ಮಾತನಾಡಿ,ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಜೊತೆಗೆ ಪೌರ ಕಾರ್ಮಿಕರು ಸೇವೆ ಅಪಾರವಾಗಿದೆ ಎಂದರು
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಚಂದ್ರಮೌಳಿ, ಮುಖ್ಯಾಧಿಕಾರಿ ಗಂಗಾಧರ್,ಪುರಸಭೆ ಸದಸ್ಯ ನಂದಕುಮಾರ, ಪ್ರಶಾಂತ್, ಕುಮಾರ್ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.
ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ (ಮಂಡ್ಯ)

Please follow and like us:

Related posts

Leave a Comment