ಈಜಲು ಹೋಗಿ ಇಬ್ಬರು ಬಾಲಕರ ಸಾವು

ಹುಣಸೂರು(ಮೈಸೂರು):ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಸಹೋದರರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಹನಗೋಡು ಹೋಬಳಿಯ ಕಡೆ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗೋವಿಂದರಾಜು ವೆಂಕಟೇಶ್ ಪುತ್ರರಾಗಿರುವ ರಾಹುಲ್(೧೨), ನೂತನ್(೧೪) ಮೃತ ಬಾಲಕರು.
ಇಂದು ಮಧ್ಯಾಹ್ನ ಹಸು ಮೇಯಿಸುವುದಾಗಿ ಮನೆಯವರಿಗೆ ಹೇಳಿ ಹೋಗಿದ್ದ ಬಾಲಕರು ಬಳಿಕ ಹಸುಗಳನ್ನು ಮೇಯಲು ಬಿಟ್ಟು
ಗ್ರಾಮದ ದೊಡ್ಡ ಕೆರೆಗೆ ಈಜಲು ಹೋಗಿದ್ದರು.ಆದರೆ ಆಯತಪ್ಪಿ ಕೆರೆಯಲ್ಲಿ ಮುಳುಗಿದ್ದಾರೆ.
ಇನ್ನು ವಿಷಯ ತಿಳಿದು ಗ್ರಾಮಸ್ಥರು ಬರುವಷ್ಟರಲ್ಲಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಗ್ರಾಮಸ್ಥರು ಇಬ್ಬರ ಶವವನ್ನು ಕೆರೆಯಿಂದ ಮೇಲೆ ಎತ್ತಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಮಾಸೀಂ ಶರೀಪ್ ಎಕ್ಸ್ ಪ್ರೆಸ್ ಟಿವಿ ಹುಣಸೂರು(ಮೈಸೂರು)

Please follow and like us:

Related posts

Leave a Comment