ಮುಖ್ಯಮಂತ್ರಿ ಅನುಮತಿ ನೀಡಿದರೆ ಮದ್ಯ ಮಾರಾಟ?

ಬೆಂಗಳೂರು:ಕೇ0ದ್ರ ಗೃಹ ಸಚಿವಾಲಯದಿಂದ ಕೆಂಪು ಮತ್ತು ಕಿತ್ತಳೆ ವಲಯದ ಜಿಲ್ಲೆಗಳಲ್ಲಿ ಲಾಕ್ ಡೌನ್ ಕೊಂಚ ಸಡಿಲಿಕೆಗೆ ಅವಕಾಶ ನೀಡಿದ್ದರೇ,ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಈ ಮೊದಲಿನಂತೆಯೇ ಲಾಕ್ ಡೌನ್ ಸಡಿಲಿಕೆಗೆ ಅವಕಾಶ ನೀಡಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಮೇ.೪.ರ ನಂತರ ಮದ್ಯ ಮಾರಾಟಕ್ಕೆ ಅವಕಾಶ ನೀಡುವಂತ ತೀರ್ಮಾನವನ್ನು ಸದ್ಯದಲ್ಲಿಯೇ ಪ್ರಕಟಿಸಲಿದೆ.
ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಅಬಕಾರಿ ಸಚಿವ ಹೆಚ್ ನಾಗೇಶ್, ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಸಂಬ0ಧ ಮುಖ್ಯಮಂತ್ರಿ  ಯಡಿಯೂರಪ್ಪರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಅವರು ಅನುಮತಿ ನೀಡಿದರೆ ಮೇ.೪ ರ ನಂತರ ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.
ಇನ್ನು ಮದ್ಯ ಮಾರಾಟಕ್ಕೆ ಆರ್ಥಿಕ ಇಲಾಖೆ ಕೂಡ ಅವಕಾಶ ನೀಡುವ ಕುರಿತಂತೆ ಮುಖ್ಯಮಂತ್ರಿ  ಗಮನಕ್ಕೆ ತಂದು ಚರ್ಚೆ ನಡೆಸಿ ಮಾರಾಟಕ್ಕೆ ಮೇ ೪.ರ ನಂತರ ಅವಕಾಶ ಮಾಡಿಕೊಡಲಾಗುತ್ತದೆ. ಆದ್ರೇ ಪಾರ್ಸಲ್ ಗೆ ಮಾತ್ರವೇ ಅವಕಾಶ ನೀಡಲಾಗುತ್ತದೆ. ೬. ಅಡಿ ಅಂತಹದಿ0ದ ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ತೆಗೆದುಕೊಂಡು ಹೋಗಲು ಅಷ್ಟೇ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

Please follow and like us:

Related posts

Leave a Comment