ಹುಬ್ಬಳ್ಳಿಯಲ್ಲಿ ಮನಕಲುಕಿದ ಮಂಗಗಳ ಮಂಕಿ ಬಾತ್…

ಹುಬ್ಬಳ್ಳಿ: ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದ್ದು,ಜನರು ಆಹಾರಕ್ಕಾಗಿ ಪರದಾಡುವಂತ ಸ್ಥಿತಿಯನ್ನು ನೋಡಿದ್ದೇವೆ.ಆದರೇ ಈಗ ಮೂಕ ಪ್ರಾಣಿಗಳು ಕೂಡ ಆಹಾರವಿಲ್ಲದೆ ಸಂಕಷ್ಟಕ್ಕೆ ಸಿಲುಕುತ್ತಿವೆ.
ಸದ್ಯ ತಾಯಿ ಮಂಗವೊAದು ತನ್ನ ಪುಟ್ಟ ಮರಿಗಾಗಿ ಆಹಾರ ಹುಡುಕಿಕೊಂಡು ಆಹಾರ ಅರಿಸುತ್ತ ಸಾಗಿದೆ.
ಅಂದ ಹಾಗೇ ಇಂತಹದೊAದು ದೃಶ್ಯ ಗೋಚರಿಸಿದ್ದು,ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ.ಅರಣ್ಯ ಹಾಗೂ ಉದ್ಯಾನವನಗಳಲ್ಲಿ ಆಹಾರ ಪಡೆದುಕೊಂಡು ಜೀವನ ನಡೆಸುತ್ತಿದ್ದ ಮಂಗಗಳು ಈಗ ಎಲ್ಲಿಯೂ ಕೂಡ ಆಹಾರವಿಲ್ಲದೆ ಪರದಾಡುವಂತಾಗಿದೆ.
ಲಾಕ್ ಡೌನ್ ಸಂಕಷ್ಟ ಮನುಷ್ಯನಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ತಟ್ಟಿದ್ದು,ಆಹಾರ ಅರಸಿಕೊಂಡು ಮಂಗಗಳು ನಗರದತ್ತ ಮುಖ ಮಾಡಿವೆ. ಕಾಲೋನಿಗಳಲ್ಲಿ ಜನರು ಹಾಕುತಿದ್ದ ಅಳಿದು ಉಳಿದ ಆಹಾರವನ್ನು ನೆಚ್ಚಿಕೊಂಡು ಜೀವನಕ್ಕೆ ದಾರಿ ಮಾಡಿಕೊಂಡಿರುವ ಮಂಗಗಳು ಈಗ ಆಹಾರವಿಲ್ಲದೆ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿವೆ.ಜನರು ಆಹಾರವಿಲ್ಲದಿರುವ ಕಷ್ಟವನ್ನು ಹೇಳಿಕೊಂಡು ಆಹಾರ ಪಡೆಯುತ್ತಾರೆ. ಆದರೆ ಮೂಕ ಪ್ರಾಣಿಗಳ ರೋಧನ ಹೇಳ ತೀರದಾಗಿದೆ.
ಮಂಗಗಳ ಮಂಕಿ ಬಾತ್ ನಿಜಕ್ಕೂ ಮನಕಲುಕುವಂತಿದೆ.ಆಹಾರವಿಲ್ಲದ ಜೀವನದಲ್ಲಿಯೇ ಮಂಗವೊAದು ತನ್ನ ಪುಟ್ಟ ಕಂದಮ್ಮನನ್ನು ಉದರದಲ್ಲಿ ಹೊತ್ತುಕೊಂಡು ಆಹಾರವನ್ನು ಅರಿಸಿಕೊಂಡು ಪಾಲನೆ ಪೋಷಣೆ ಮಾಡುತ್ತಿದೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment