ಪತಿಯ ಅಂತ್ಯ ಸಂಸ್ಕಾರಕ್ಕೆ ತೆರಳಲು ಮಹಿಳೆಗೆ ೨೦ ನಿಮಿಷದಲ್ಲಿ ಪಾಸ್ ವ್ಯವಸ್ಥೆ

ಹುಬ್ಬಳ್ಳಿ:ಪತಿಯ ಅಂತ್ಯ ಸಂಸ್ಕಾರಕ್ಕೆ ತೆರಳಲು ಪಾಸ್ ಇಲ್ಲದೆ ಪರದಾಡುತ್ತಿದ್ದ ಪುಟ್ಟ ಮಕ್ಕಳೊಂದಿಗೆ ಪರದಾಡುತ್ತಿದ್ದ ಮಹಿಳೆಗೆ ೨೦ ನಿಮಿಷದಲ್ಲಿ ಪಾಸ್ ವ್ಯವಸ್ಥೆ ಮಾಡುವ ಮೂಲಕ ಹುಬ್ಬಳ್ಳಿ ತಾಲೂಕು ಆಡಳಿತ ಕಾರ್ಯದಕ್ಷತೆಯನ್ನು ಮೆರೆದಿದೆ.
ಅರವಿಂದ ನಗರದ ಯಶೋಧ ಲೋಕಾಪುರ ಎಂಬುವವರ ಪತಿ ಬಾಗಲಕೋಟೆಯ ನವನಗರದಲ್ಲಿ ತೀರಿಕೊಂಡಿದ್ದರು.
ಆದ್ರೆ ಅವರು ಬಾಗಲಕೋಟಿಗೆ ತೆರಳು ಪಾಸ್ ಇಲ್ಲದೆ ತಮ್ಮ ಎರಡು ಚಿಕ್ಕ ಮಕ್ಕಳ ಜೊತೆಗೆ ತಹಶೀಲ್ದಾರ ಕಚೇರಿಗೆ ಆಗಮಿಸಿ, ಅಂತ್ಯ ಸಂಸ್ಕಾರಕ್ಕೆ ತೆರಳಲು ಪಾಸ್ ನೀಡುವಂತೆ ಮನವಿ ಮಾಡಿದ್ದಾರೆ.
ಮಹಿಳೆಯ ಪರಸ್ಥಿತಿಯನ್ನು ಆಲಿಸಿದ ಹುಬ್ಬಳ್ಳಿ ಶಹರ ತಹಶೀಲ್ದಾರ್ ಶಶಿಧರ ಮಾಡ್ಯಾಳ ಅವರು ಜಿಲ್ಲಾಡಳಿತ ಸಹಾಯದೊಂದಿಗೆ ಕೇವಲ ೨೦ ನಿಮಿಷದಲ್ಲಿ ಪಾಸ್ ವ್ಯವಸ್ಥೆ ಮಾಡುವ ಮೂಲಕ ಕಾರ್ಯದಕ್ಷತೆ ಮೆರೆದಿದ್ದಾರೆ.
ಇನ್ನು ಪಾಸ್ ಪಡೆದ ಮಹಿಳೆ ಹಾಗೂ ಮಕ್ಕಳು ಜಿಲ್ಲಾಡಳಿತಕ್ಕೆ ಧನ್ಯವಾದ ಅರ್ಪಿಸಿ ಬಾರವಾದ ಮನಸ್ಸಿನಿಂದ ಬಾಗಲಕೋಟಿಯತ್ತ ಪ್ರಯಾಣ ಬೆಳೆಸಿದರು.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment