ಅಕ್ರಮ ಆರೋಪ, ತುಮಕೂರು ಡಿಎಚ್‌ಒ ದಿಢೀರ್ ಎತ್ತಂಗಡಿ

ತುಮಕೂರು:ಬೇನಾಮಿ ಕಂಪನಿ ಹೆಸರಲ್ಲಿ ಸರ್ಕಾರದ ಹಣ ಗುಳುಂ ಮಾಡಿದ ಆರೋಪ ಹಿನ್ನೆಲೆ ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಿಕಾರನ್ನು ದಿಢೀರ್ ಎತ್ತಂಗಡಿ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆ ಚಂದ್ರಿಕಾರನ್ನ ಟ್ರಾನ್ಸ್ಫರ್ ಮಾಡಲಾಗಿದೆ.
ತುಮಕೂರು ಜಿಲ್ಲಾಸ್ಪತ್ರೆಯ ಹಿರಿಯ ತಜ್ಞ ವೈದ್ಯ ಡಾ.ಎಂ ಬಿ ನಾಗೇಂದ್ರಪ್ಪ ಅವರನ್ನು ನೂತನ ಡಿಹೆಚ್‌ಒ ಆಗಿ ನೇಮಕ ಮಾಡಲಾಗಿದೆ
ಅಂದ ಹಾಗೇ ಪಿಪಿಇ ಕಿಟ್, ಸ್ಯಾನಿಟೈಸರ್, ಮಾಸ್ಕ್ ಖರೀದಿಯಲ್ಲಿ ಮತ್ತು ವಿತರಣೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎನ್ನಲಾಗಿತ್ತು. ಬೇನಾಮಿ ಕಂಪನಿ ಹೆಸರಲ್ಲಿ ಸರ್ಕಾರದ ಹಣ ಗುಳುಂ ಮಾಡಿ, ೩೦೦ ರೂಪಾಯಿ ಕಿಟ್‌ಗೆ ಬಿಲ್ ೧,೨೦೦ ಕೊಟ್ಟು ಖರೀದಿಸಿದ್ದಾರೆ ಎಂದು ಡಾ.ಚಂದ್ರಿಕಾ ವಿರುದ್ಧ ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಗಂಭೀರ ಆರೋಪ ಮಾಡಿದ್ದರು.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment