ಬೈಕ್ ಏರಿ ಡ್ಯಾಂ ವೀಕ್ಷಣೆ ಮಾಡಿದ ಸಿಂಧನೂರು ಶಾಸಕ

ಸಿಂಧನೂರು(ರಾಯಚೂರು):ಸಿಂಧನೂರು ತಾಲೂಕಿನ ದೇವರಗುಡಿ ಫಿಕಪ್ ಡ್ಯಾಂನ್ನು ಮಾಜಿ ಸಚಿವ, ಶಾಸಕ ವೆಂಕಟರಾವ್ ನಾಡಗೌಡ ವೀಕ್ಷಣೆ ನಡೆಸಿದರು.
ಅಂದ ಹಾಗೇ ಫಿಕಪ್ ಡ್ಯಾಂನ ಸಮಸ್ಯೆಗಳನ್ನು ರೈತರಿಂದ ಆಲಿಸಿದ್ದ ಶಾಸಕ ವೆಂಕಟರಾವ್ ನಾಡಗೌಡ ಸ್ವತಃ ತಾವೇ ಬೈಕ್ ಮೂಲಕ ಆಗಮಿಸಿ ಡ್ಯಾಂ ವೀಕ್ಷಣೆ ಮಾಡಿದರು.ಅಲ್ಲದೆ,ಡ್ಯಾಂನ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು. ಈ ವೇಳೆ ಸಂಬ0ಧ ಪಟ್ಟ ಅಧಿಕಾರಿಗಳು ಹಾಜರಿದ್ದರು.
ಇದಕ್ಕೂ ಮುನ್ನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment