ಆಂಧ್ರ ಪ್ರವೇಶಿಸುತ್ತಿದ್ದ ಕಾರ್ಮಿಕ ಸಾವು, ಇನ್ನಿಬ್ಬರ ಸ್ಥಿತಿ ಚಿಂತಾಜನಕ..

ಕೊಪ್ಪಳ:ಸ0ಚರಿಸುತ್ತಿದ್ದ ಲಾರಿಯಲ್ಲಿ ಸಾಗಿಸುತ್ತಿದ್ದ ಜೆಸಿಬಿ ಮುಂಬದಿಗೆ ಸರಿದ ಪರಿಣಾಮ ಅದರೊಳಗಿದ್ದ ಕೂಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಸಾವು ಕಂಡು ಆತನ ಪತ್ನಿ ಹಾಗೂ ಮಗ ಗಂಭೀರವಾಗಿ ಗಾಯಗೊಂಡ ಘಟನೆ ಕೊಪ್ಪಳ ನಗರದದಲ್ಲಿ ನಡೆದಿದೆ.
ರಾಮರೆಡ್ಡಿ(35) ಸಾವು ಕಂಡ ವ್ಯಕ್ತಿ.ಸದ್ಯ ಈತನ ಪತ್ನಿ ಹಾಗೂ ಮಗ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂದ ಹಾಗೇ ಗದಗ ಬಳಿಯ ಲಕ್ಕುಂಡಿಯ ಬಳಿ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದ ಐದರಿಂದ ಆರು ಜನರು ಲಾರಿಯಲ್ಲಿ ಅಕ್ರಮವಾಗಿ ಆಂಧ್ರದ ಹೋಂಗಲ್ ಊರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಇನ್ನು ಲಾರಿಯಲ್ಲಿ ಸಾಗಿಸುತ್ತಿದ್ದ ಜೆಸಿಬಿಯೊಳಗೆ ಇವರೆಲ್ಲರು ಬಚ್ಚಿಟ್ಟುಕೊಂಡು ತಮ್ಮ ಊರಿಗೆ ಹೋಗುತ್ತಿದ್ದರು.ಆದರೆ ಲಾರಿಯಲ್ಲಿ ಸಾಗಿಸುತ್ತಿದ್ದ ಜೆಸಿಬಿ ಏಕಾಎಕಿ ಮುಂಬದಿಗೆ ಸರಿದಿದೆ.ಪರಿಣಾಮ ಅದರೊಳಗೆ ಅಡಗಿ ಕುಳಿತ್ತಿದ್ದ ರಾಮರೆಡ್ಡಿ ಸಾವು ಕಂಡ್ರೆ ಆತನ ಪತ್ನಿ ಹಾಗೂ ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೇ ವೇಳೆ ಲಾರಿ ಚಾಲಕ ಪರಾರಿಯಾಗಿದ್ದು,ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಭೀರಾಜ್ ದಸ್ತೇನವರ್ ಎಕ್ಸ್ ಪ್ರೆಸ್ ಟಿವಿ ಕೊಪ್ಪಳ

Please follow and like us:

Related posts

Leave a Comment