ಕೊರೊನಾಗಿಂತ ಹೆಚ್ಚಾಗಿ ಆರ್ಭಟಿಸುತ್ತಿದೆ ಸಿಂಧೂರಿನ ಅಕ್ರಮ ಮರಳು ಮಾಫಿಯಾ..

ಸಿಂಧನೂರು(ರಾಯಚೂರು):ಬರದ ಪ್ರದೇಶ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಕೊರೊನಾದಷ್ಟೆ ಅಕ್ರಮ ಮರಳು ಮಾಫಿಯಾ ಕೂಡ ಆರ್ಭಟಿಸುತ್ತಿದೆ.ಆದರೆ ಇದನ್ನು ತಡೆಯುವಲ್ಲಿ ಮಾತ್ರ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿರುವುದು ಬೆಳಕಿಗೆ ಬಂದಿದೆ.
ವಿಪರ್ಯಾಸವೆ0ದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಗೊಳಿಸಿರುವ ಪರಿಣಾಮ ಪೊಲೀಸ್ ಇಲಾಖೆ ದಿನದ ೨೪ಗಂಟೆಯೂ ಕೆಲಸ ನಿರ್ವಹಿಸುತ್ತಿದೆ.ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ಅಕ್ರಮವಾಗಿ ಅಕ್ರಮ ಮರಳು ಮಾಫಿಯಾದಲ್ಲಿ ತೊಡಗಿಕೊಂಡಿದ್ದಾರೆ.
ಅದರಲ್ಲೂ ತಾಲೂಕಿನ ಸೋಲಾಪೂರ ಕೆಂಗಲ್, ಸಾಲಗುಂದಾ ಗ್ರಾಮಗಳಲ್ಲಿ ಹೆಚ್ಚು ಅಕ್ರಮ ಮರಳು ಮಾಫಿಯಾ ನಡೆಯುತ್ತಿರುವುದು ಬಯಲಾಗಿದ್ದು, ಇಲ್ಲೆಲ್ಲಾ ರಾಜಾರೋಷವಾಗಿ ಅಕ್ರಮ ಮರಳನ್ನು ಸರಬರಾಜು ಮಾಡಲಾಗುತ್ತಿದೆ.
ಆದರೆ ಇದು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ಗೊತ್ತಿದೋ,ಇಲ್ಲವೋ ತಿಳಿಯುತ್ತಿಲ್ಲ.ಆದರೆ ಅಕ್ರಮ ಮರಳು ಮಾಫಿಯಾ ನಡೆಯುತ್ತಲೇ ಇದೆ.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment