ಮಗಳ ಮೇಲೆ ತಂದೆಯಿ0ದಲೇ ಮಾರಣಾಂತಿಕ ಹಲ್ಲೆ

ತಿಪಟೂರು(ತುಮಕೂರು):ತಂದೆಯೇ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.
ಅಮೃತಾ ಹಾಗೂ ಸುನಿಲ್ ಹಲ್ಲೆಗೊಳಗಾದವರು ತಂದೆ ಭೈರಪ್ಪ ಗೋಪಾಲಪುರ ಗ್ರಾಮ ಪಂಚಾಯಿತಿ ಸದಸ್ಯ ಸದಸ್ಯನಾಗಿದ್ದು,ಹಲ್ಲೆ ಮಾಡಿದ ಆರೋಪಿಯಾಗಿದ್ದಾನೆ.
ಕಳೆದ ಆರು ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಿದ್ದ ಅಮೃತ-ಸುನೀಲ್‌ಗೆ ಓರ್ವ ಮಗಳಿದ್ದಾಳೆ. ಕÀಳೆದ ಮಾರ್ಚ್ನಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉಳಿದುಕೊಂಡಿದ್ದರು.
ಈ ವೇಳೆ ಜಮೀನಿನ ವಿಚಾರವಾಗಿ ತಂದೆ ಮತ್ತು ಮಗಳ ನಡುವೆ ಜಗಳ ನಡೆದು ಗಲಾಟೆ ಶುರುವಾಗಿತ್ತು.ಈ ಬಗ್ಗೆ ಅಮೃತ ನೊಣವಿನಕೆರೆ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು.
ಆದರೆ ಠಾಣೆಯಿಂದ ಮನೆಗೆ ಬಂದ ಅಮೃತ ಹಾಗೂ ತಂದೆ ಭೈರಪ್ಪ ನಡುವೆ ಮತ್ತೆ ಜಗಳ ಶುರುವಾಗಿದ್ದು,ಬಳಿಕ ಅದು ವಿಕೋಪಕ್ಕೆ ತಿರುಗಿ ಭೈರಪ್ಪ ಹಾಗೂ ಅಣ್ಣ ತಮ್ಮಂದಿರು ಸೇರಿ ಮಾರಕಾಸ್ತ್ರಗಳಿಂದ ಅಮೃತ ಮೇಲೆ ಹಲ್ಲೆ ನಡೆಸಿದ್ದಾರೆ.ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಪತಿ ಸುನೀಲ್ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಅಮೃತ ಆರೋಪಿಸಿದ್ದಾರೆ.
ಸದ್ಯ ಅಮೃತಾ ತಲೆಗೆ ಗಂಭೀರ ಗಾಯಗಳಾಗಿದ್ದು ಸುನಿಲ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಇಬ್ಬರು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ತಂದೆ ಭೈರಪ್ಪ ಅಕ್ರಮ ಸಂಬAಧಗಳನ್ನು ಹೊಂದಿದ್ದು ಕುಟುಂಬದ ಬಗ್ಗೆ ಬೇಜವಾಬ್ದಾರಿ ಹೊಂದಿದ್ದರು.ಜೊತೆಗೆ ಎರಡು ಹೆಣ್ಣು ಮಕ್ಕಳನ್ನು ಸರಿಯಾಗಿ ಸಾಕದೆ ಹಿರಿಯ ಮಗಳನ್ನು ಹೋಟೆಲಿನಲ್ಲಿ ಜೀತಕ್ಕೆ ಮಾರಿಕೊಂಡಿದ್ದ.ಹಿರಿಯ ಮಗಳು ಅಮೃತಾಳನ್ನು ಅನಾಥಾಶ್ರಮದಲ್ಲಿ ಬಿಟ್ಟಿದ್ದನಂತೆ.ಅಲ್ಲದೆ,ಪತ್ನಿ ನಾಗಮ್ಮನ ಮೇಲೂ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ತಂದೆ ಭೈರಪ್ಪ ವಿರುದ್ಧ ದೂರು ನೀಡಿದ್ದಾರೆ.

ಸಿ.ಎನ್.ಸಿದ್ದೇಶ್ವರ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)

Please follow and like us:

Related posts

Leave a Comment