ಲಾಕ್ ಡೌನ್-4 ಘೋಷಿಸಿದ ಪ್ರಧಾನಿ ಮೋದಿ

ನವದೆಹಲಿ: ಮೇ ೧೭ರ ನಂತರ ಲಾಕ್ ಡೌನ್ ಮುಂದುವರಿಯಲಿದ್ದು,ಇ0ದು ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕನೇ ಹಂತದ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ.
ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು,೪ನೇ ಹಂತದ ಲಾಕ್ ಡೌನ್ ಸಂಪೂರ್ಣವಾಗಿ ಹೊಸದಾಗಿರುತ್ತದೆ. ಲಾಕ್ ಡೌನ್-೪ ಹೊಸ ರೂಪ ಮತ್ತು ಹೊಸ ನಿಯಮದೊಂದಿಗೆ ಬರಲಿದೆ.ಮೇ ೧೮ ಕ್ಕೆ ಮೊದಲು ಲಾಕ್ ಡೌನ್ ನಿಯಮ ತಿಳಿಸಲಾಗುವುದು.ಕೊರೋನಾ ವಿರುದ್ಧದ ಹೋರಾಟ ಸುದೀರ್ಘವಾಗಿರುತ್ತದೆ. ಇದಕ್ಕಾಗಿ ಲಾಕ್ ಡೌನ್ ಮುಂದುವರಿಸುವುದು ಅನಿವಾರ್ಯವಾಗಿದ್ದು, ಹೊಸ ರೂಪ, ಹೊಸ ನಿಯಮದೊಂದಿಗೆ ಲಾಕ್ ಡೌನ್-೪ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ ೨೦ ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿರುವ ಪ್ರಧಾನಿ ಎಲ್ಲ ವರ್ಗಗಳಿಗೆ ಅನುಕೂಲವಾಗುವಂತೆ ಪ್ಯಾಕೇಜ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ದೇಶದ ಜಿಡಿಪಿಯ ಶೇಕಡ ೧೦ ರಷ್ಟು ಅನುದಾನ ಇದಾಗಿದೆ. ರೈತರು, ಕಾರ್ಮಿಕರು, ಸಣ್ಣ ಉದ್ಯಮಗಳು, ಗ್ರಾಮೋದ್ಯೋಗ, ದೇಶದ ಮಧ್ಯಮ ವರ್ಗದವರಿಗಾಗಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.ನಾಳೆ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ವಿಶೇಷ ಆರ್ಥಿಕ ಪ್ಯಾಕೇಜ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ದೇಶದ  ಕಾರ್ಮಿಕರು, ಬಾಳೆಹಣ್ಣು ಮಾರುವವರು, ಬಡವರು, ದುರ್ಬಲ ವರ್ಗದವರು, ಮನೆಗಳಲ್ಲಿ ಕೆಲಸ ಮಾಡುವವರಿಗಾಗಿ ಪ್ಯಾಕೇಜ್ ನೀಡಲಾಗುವುದು. ಸಂಘಟಿತ ಮತ್ತು ಅಸಂಘಟಿತ ವಲಯಗಳಿಗೆ ಯೋಜನೆ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.
ಇದಲ್ಲದೆ,ಮೀನುಗಾರರು, ರೈತರು, ನೇಕಾರರು ಸೇರಿದಂತೆ ಎಲ್ಲಾ ವರ್ಗಗಳಿಗೆ ಆರ್ಥಿಕ ಪ್ಯಾಕೇಜ್ ನೀಡಲಾಗುವುದು.ಭಾರತೀಯ ಉದ್ಯೋಗದಾತರಿಗೆ ಪ್ಯಾಕೇಜ್ ಸೌಲಭ್ಯ ಸಿಗಲಿದೆ. ಉದ್ಯೋಗದಾತರು,ಸಣ್ಣ ಕೈಗಾರಿಕೆಗಳಿಗೆ ನೆರವಾಗಲಿದೆ. ಸರ್ಕಾರ ನೀಡುವ ಪ್ರತಿ ಪೈಸೆಯೂ ಬಡವರಿಗೆ, ರೈತರಿಗೆ ಸಿಗಲಿದೆ. ಆರ್ಥಿಕ ಪ್ಯಾಕೇಜ್ ನಿಂದಾಗಿ ಹೊಸ ಕ್ರಾಂತಿ ಶುರುವಾಗಲಿದೆ. ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲರಿಗೂ ನೆರವು ನೀಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಬಡವರ,ರೈತರ ಹಾಗೂ ಶ್ರಮಿಕರ ಜೇಬಿಗೆ ಈ ಹಣ ನೇರವಾಗಿ ಬೀಳಲಿದೆ. ಜನಧನ್, ಆಧಾರ್ ಹಾಗೂ ಮೊಬೈಲ್ ಮೂಲಕ ನೇರವಾಗಿ ಮಾಹಿತಿ ದೊರೆಯಲಿದೆ. ಸರ್ಕಾರ ನೀಡುವ ಪ್ರತಿ ಪೈಸೆಯೂ ಸಹ ಶ್ರಮಿಕರಿಗೆ, ಬಡವರಿಗೆ ನೇರವಾಗಿ ದೊರೆಯಲಿದೆ ಎಂದರು.
ವಿಶ್ವದಲ್ಲಿ ೪೨ ಲಕ್ಷ ಮಂದಿ ಕೊರೋನಾ ಪೀಡಿತರಾಗಿದ್ದಾರೆ.ಭಾರತದಲ್ಲೂ ಬಹಳಷ್ಟು ಮಂದಿ ಇದರಿಂದ ಸಂಕಷ್ಟಕ್ಕೆ ಒಳಗಾಗಿದ್ದು, ತಮ್ಮ ಕುಟುಂಬಸ್ತರು ಹಾಗೂ ಸಂಬAಧಿಗಳನ್ನು ಕಳೆದುಕೊಂಡಿದ್ದಾರೆ. ಇದು ಮನುಕುಲಕ್ಕೆ ಕಲ್ಪನಾತೀತಿ ಸನ್ನಿವೇಶ ಎಂದು ವಿಷಾದಿಸಿದರು.
ವಿಶ್ವದಲ್ಲಾಗುತ್ತಿರುವ ಬದಲಾವಣೆಗಳನ್ನು ನಾವು ನೋಡುತ್ತಿದ್ದೇವೆ. ೨೧ನೆಯ ಶತಮಾನದ ಭಾರತದ ಶತಮಾನ ಎಂದು ಸಾಬೀತಾಗುತ್ತಿದೆ. ನಾವು ಉಳಿಯಬೇಕಿದೆ, ಭಾರತವನ್ನು ಉಳಿಸಿ ಮುಂದೆ ಸಾಗಬೇಕಿದೆ. ಸ್ವಾವಲಂಭಿ ಭಾರತ ಎಂದು ನಮ್ಮ ಶಾಸ್ತ್ರಗಳೇ ಹೇಳಿವೆ. ಈಗ ಇಡಿಯ ವಿಶ್ವಕ್ಕೆ ನಾವು ಮಾದರಿಯಾಗಬೇಕಿದೆ ಎಂದರು.
ಸುಖ ಹಾಗೂ ಸಂಮೃದ್ಧಿಯ ವಿಶ್ವವನ್ನು ಕಟ್ಟುವುದು ಭಾರತೀಯರ ಕನಸಾಗಿದೆ. ಭಾರತೀಯರು ಭೂಮಿಯನ್ನು ತಾಯಿ ಎಂದು ಪೂಜಿಸುತ್ತೇವೆ. ವಿಶ್ವವೇ ಒಂದು ಪರಿವಾರ ಎಂದು ನಾವು ಭಾರತೀಯರು ನಂಬಿಕೊ0ಡು ಬಂದಿದ್ದೇವೆ. ಟಿಬಿ, ಪೋಲಿಯೋ, ಅಪೌಷ್ಠಿಕತೆ ಹೊಡೆದೋಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಕೊರೋನಾ ಸಂಕಷ್ಟ ವಿಶ್ವದಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಿದೆ. ಇಂತಹ ಸಂದರ್ಭದಲ್ಲಿ ಸ್ವಾವಲಂಭಿ ಭಾರತ ಎಂಬುದರ ಕುರಿತಾಗಿ ಗಂಭೀರವಾಗಿ ಚಿಂತಿಸಬೇಕಿದೆ. ನಮ್ಮ ಸಂಕಲ್ಪ ಮತ್ತಷ್ಟು ದೃಢವಾಗಬೇಕು ಎಂದರು.
ಈ ಶತಮಾನದ ಆರಂಭದಲ್ಲಿ ವೈ೨ಕೆ ಸಮಸ್ಯೆ ಎದುರಾಗಿತ್ತು.ಆದರೆ,ಇದರ ವಿರುದ್ದದ ಹೋರಾಟದಲ್ಲಿ ನಮ್ಮ ತಂತ್ರಜ್ಞರು ವಿಜಯಿಯಾದರು. ನಾನು ಕಛ್ ಭೂಕಂಪವನ್ನು ಕಣ್ಣಾರೆ ಕಂಡಿದ್ದೇನೆ. ನೋಡನೋಡುತ್ತಿದ್ದಂತೆಯೇ ಸಾವಿನ ಹೊದಿಕೆ ಕಳಚಲಿದೆ.ಭಾರತ ಈಗ ಗುಲಾಮಿ ಮನಃಸ್ಥಿತಿಯಿಂದ ಹೊರಬಂದಿದೆ. ಭಾರತದಲ್ಲಿರುವಷ್ಟು ಪ್ರತಿಭೆಗಳು ಬೇರೆಲ್ಲೂ ಇಲ್ಲ.ಇದಕ್ಕೆ ಪೂರೈಕೆ ಜಾಲವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದರು.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ನವದೆಹಲಿ

Please follow and like us:

Related posts

Leave a Comment