Connect with us

ರಾಯಚೂರು

ಜಲಪಾತ ವೀಕ್ಷಿಸಲು ಹೋಗಿ ನೀರುಪಾಲಾದ ತಂದೆ-ಮಗ..!

Published

on

ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೊಲಪಲ್ಲಿ ಹತ್ತಿರವಿರುವ ಗುಂಡಲಬಂಡಾ ಜಲಾಪಾತ ವೀಕ್ಷಿಸಲು ದೇವದುರ್ಗ ತಾಲೂಕಿನ ಮೂಡಲಗುಂಡಾ ನಿವಾಸಿಗಳಾದ ನಾಲ್ವರು ನಿನ್ನೆ ಬೆಳಿಗ್ಗೆ 10ಗಂಟೆಗೆ ಜಲಪಾತ ವೀಕ್ಷಣೆಗೆ ತೆರಳಿದ್ದರು. ನಂತರ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಈಜಲು ನದಿಗೆ ಇಳಿದಿದ್ದು ಸ್ವಲ್ಪ ಸಮಯದ ನಂತರ ನೀರಿನ ರಭಸ ಹೆಚ್ಚಾಗಿದೆ. ಗಾಬರಿಗೊಂಡು ನೀರಿನಲ್ಲಿಯೇ ಇದ್ದಂತಹ ಮಹಾಂತೇಶ್ ಹಾಗೂ ಸಿದ್ದಣ್ಣ ಸ್ಥಳೀಯರ ನೆರವಿನೊಂದಿಗೆ ಈಜಿ ದಡ ಸೇರಿದ್ದಾರೆ. ಇನ್ನೂ 35 ವರ್ಷದ ತಂದೆ-ಕೃಷ್ಣ ಹಾಗೂ 6 ವರ್ಷದ ಮಗ ಧನುಷ್ ರಭಸದಿಂದ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಲಿಂಗಸೂಗೂರು ಡಿವೈಎಸ್ಪಿ,ಸಿಪಿಐ,ಪಿಎಸ್ಐ ಅಗ್ನಿಶಾಮಕ ಸಿಬ್ಬಂದಿಗಳು ನಿನ್ನೆಯಿಂದ ಶೋಧ ಕಾರ್ಯ ಮುಂದುವರೆಸಿದ್ದರು. ನೀರಿನಲ್ಲಿ ಕೊಚ್ಚಿಹೋಗಿದ್ದ ಕೃಷ್ಣ ಹಾಗೂ ಧನುಷ್ ಮೃತದೇಹಗಳು ಇಂದು ಬೆಳಗ್ಗೆ ಪತ್ತೆಯಾಗಿದ್ದು, ಹಟ್ಟಿ ಚಿನ್ನದ ಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

ನಿಮ್ಮ ಜಿಲ್ಲೆ

ಮಹಿಳೆ ಮೇಲೆ ಹಲ್ಲೆ ; ಆರೋಪಿಗಳ ಬಂಧನಕ್ಕೆ ರೈತ ಸಂಘ ಆಗ್ರಹ

Published

on

By

ರಾಯಚೂರು(ಲಿಂಗಸೂಗೂರು): ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬಯ್ಯಾಪೂರ ಗ್ರಾಮದ ಆಶಾ ಕಾರ್ಯಕರ್ತೆ ಅಂಬುಜಾ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕೆAದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷೆ ರೂಪಾ ಶ್ರೀನಿವಾಸ ನಾಯಕ ಒತ್ತಾಯಿಸಿದ್ದಾರೆ.

ಅಂದ ಹಾಗೇ ಬಯ್ಯಾಪೂರ ಗ್ರಾಮಕ್ಕೆ ಮತ್ತು ಮುದಗಲ್ ಠಾಣೆಗೆ ಭೇಟಿ ವೇಳೆ ಮಾತನಾಡಿದ ರೂಪಾ ಶ್ರೀನಿವಾಸ ನಾಯಕ, ಬಯ್ಯಾಪೂರ ಗ್ರಾಮದಲ್ಲಿ ಮಹಿಳೆ ಅಂಬುಜಾಗೆ ಯಾರು ಇಲ್ಲ.ಸದ್ಯ ಈ ಮಹಿಳೆ ಮೇಲೆ ಅದೇ ಗ್ರಾಮದ ಹನುಮನಗೌಡ ಹಾಗೂ ಆತನ ಕುಟುoಬಸ್ಥರು ಮಹಿಳೆ ಮೇಲೆ  ಹಲ್ಲೆ ಮಾಡಿದ್ದಾರೆ.ಈ ಸಂಬAಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೀಗಾಗಿ ಮಹಿಳೆಯ ಸುರಕ್ಷತೆಗಾಗಿ ಕೂಡಲೇ ಪೊಲೀಸ್ ಇಲಾಖೆ ಅಧಿಕಾರಿಗಳು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಬೇಕು ಅಂತ ಆಗ್ರಹಿಸಿದ್ರು..

 

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ (ಲಿಂಗಸೂಗೂರು) ರಾಯಚೂರು

Continue Reading

ರಾಯಚೂರು

ಕೃಷಿ ಎಂಜಿನಿಯರಿಂಗ್ ಪದವಿಯಲ್ಲಿ ಗರಿಷ್ಠ ಅಂಕ ಪಡೆದು ಚಿನ್ನದ ಪದಕ ಪಡೆದ ರೇಖಾ ಗುಂಡಪ್ಪ..!

Published

on

By

ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 2018-19 ನೇ ಸಾಲಿನ ಘಟಿಕೋತ್ಸವ ಸಮಾರಂಭವನ್ನು ಭಾರತೀಯ ಕೃಷಿ ಸಂಶೋಧನಾ ಸಮಿತಿಯ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ.ಆರ್.ಸಿ.ಅಗರವಾಲ್ ಉದ್ಘಾಟಿಸಿದರು. ಕೋವಿಡ್ ಸೋಂಕು ತಡೆ ಕಾರಣ ಚಿನ್ನದ ಪದಕ ಹಾಗೂ ಗರಿಷ್ಠ ಅಂಕಗಳನ್ನು ಪಡೆದು ಸಾಧನೆ ಮಾಡಿರುವ ವಿವಿಧ ವಿಭಾಗಗಳ 49 ವಿದ್ಯಾರ್ಥಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಕುಲಪತಿ ಡಾಕೆಎನ್ ಕಟ್ಟಿಮನಿ ಸಮ್ಮುಖದಲ್ಲಿ ಡಾ.ಆರ್. ಸಿ. ಅಗರವಾಲ್ ಅವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಿದರು.ಬಿಎಸ್ಸಿ ಕೃಷಿ ಪದವಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಸಹನಾ ರಾಮನಗೌಡ ಪೊಲೀಸ್ ಪಾಟೀಲ ಆರು ಚಿನ್ನದ ಪದಕಗಳು ಮತ್ತು ನಗದು ಬಹುಮಾನ ಪಡೆದರು. ಕೃಷಿ ಎಂಜಿನಿಯರಿಂಗ್ ಪದವಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದಿರುವ ರೇಖಾ ಗುಂಡಪ್ಪ ಅವರೂ ಆರು ಚಿನ್ನದ ಪದಕಗಳು ಮತ್ತು ನಗದು ಪುರಸ್ಕಾರ ಪಡೆದರು.

ವರದಿ-ಬಾಬಾ ಎಕ್ಸ್ ಪ್ರೆಸ್ ಟಿವಿ ರಾಯಚೂರು

Continue Reading

ರಾಯಚೂರು

71 ಕೇಂದ್ರದಲ್ಲಿ ಕೊರೊನಾ ಲಸಿಕೆ ಡ್ರೈರನ್ ಪರಿಶೀಲನೆ- ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್..!

Published

on

By

ರಾಯಚೂರು: ಕೊರೊನಾ ಲಸಿಕೆ ಡ್ರೈರನ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 71 ಕೇಂದ್ರಗಳಲ್ಲಿ ಲಸಿಕೆ ಡ್ರೈರನ್ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಆರ್ ವೆಂಕಟೇಶ್ ಕುಮಾರ ತಿಳಿಸಿದ್ದಾರೆ. ಇಂದು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಡ್ರೈರನ್ ಪೂರ್ವ ಸಿದ್ಧತೆಯನ್ನು ಪರಿಶೀಲನೆ ಮಾಡಿ ನಂತರ ಮಾತನಾಡಿದ ಅವರು ಇಂದು ಜಿಲ್ಲೆಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಡ್ರೈರನ್ ಮಾಡಲು ಸಿದ್ಧತೆಯನ್ನು ಮಾಡಲಾಗಿದೆ.ಒಂದು ಕೇಂದ್ರದಲ್ಲಿ ಕನಿಷ್ಠ 25 ಜನಕ್ಕೆ ಲಸಿಕೆ ಡ್ರೈರನ್ ಮಾಡಬೇಕಾಗುತ್ತದೆ. ಇದನ್ನು ಮಾಡಿದರೆ ವ್ಯಾಕ್ಸಿನ್ ಬಂದಾಗ ನಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ, ಜಿಲ್ಲೆಯಲ್ಲಿ ನಾಲ್ಕು ಖಾಸಗಿ ಆಸ್ಪತ್ರೆಗಳನ್ನು ತೆಗೆದುಕೊಳ್ಳಗಿದೆ. ಒಂದು ಕೇಂದ್ರದಲ್ಲಿ 5 ಜನ ಅಧಿಕಾರಿಗಳು ಇರುತ್ತಾರೆ, ಡ್ರೈರನ್ ಗೆ ಬರುವ ಪ್ರತಿಯೊಬ್ಬರು ಆಧಾರ್ ಕಾರ್ಡ್ ಮತ್ತು ಇನ್ನಿತರ ದಾಖಲಾತಿಯನ್ನು ಕಡ್ಡಾಯವಾಗಿ ತರಬೇಕು. ಇದು 14500 ಜನರಿಗೆ ಅನುಕೂಲವಾಗಲಿದೆ. ನಮ್ಮಲ್ಲಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ವೈದ್ಯರು ಸೇರಿದಂತೆ ಗ್ರೂಪ್ ಡಿ ಸಿಬ್ಬಂದಿಗಳು ಮತ್ತು ಖಾಸಗಿ ವೈದ್ಯರನ್ನು ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಸಹ ತೆಗೆದು ಕೊಂಡಿದ್ದೇವೆ ಒಟ್ಟು ಮೂರು ಹಂತಗಳಲ್ಲಿ ವ್ಯಾಕ್ಸಿನೇಷನ್ ಮಾಡಲಾಗುತ್ತಿದ್ದು. ಇವರ ಎಲ್ಲಾ ಮಾಹಿತಿಯನ್ನು ಕೇಂದ್ರ ಸರ್ಕಾರದ ಕೋವಿಡ್ ಪೊಟ್ರಾಲ್ ನಲ್ಲಿ ಅಪ್ ಲೋಡ್ ಮಾಡಿದ್ದೇವೆ. ಎರಡನೇ ಹಂತದಲ್ಲಿ ಇನ್ನುಳಿದ ಅಧಿಕಾರಿಗಳನ್ನು ತೆಗೆದುಕೊಂಡು ಮೂರನೇ ಹಂತದಲ್ಲಿ 50 ವರ್ಷದ ಮೇಲ್ಪಟ್ಟವರನ್ನು ತೆಗೆದುಕೊಳ್ಳಲಾಗುವುದು,ಇವತ್ತು ಡ್ರೈರನ್ ಮಾತ್ರ ಮಾಡುತ್ತಿದ್ದೇವೆ, ಸದ್ಯದಲ್ಲೇ ವ್ಯಾಕ್ಸಿನ್ ಬರುತ್ತದೆ. ಬಂದ ಮೇಲೆ ಒಂದು ದಿನಕ್ಕೆ 100 ಜನರಿಗೆ ವ್ಯಾಕ್ಸಿನ್ ಮಾಡಲು ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದು, ಇವರನ್ನು ಕೋವಿಡ್ ಪೊಟ್ರಾಲ್ ನಲ್ಲಿ ಅವರ ಮಾಹಿತಿಗಳನ್ನು ಸಂಗ್ರಹಿಸಿ ಸಮಯವನ್ನು ನಿಗದಿ ಪಡಿಸುತ್ತೇವೆ ಎಂದರು . ಇನ್ನೂ ಈ ಸಂದಭ೯ದಲ್ಲಿ ಡಿಎಚ್ಓ ರಾಮಕೃಷ್ಣ, ರಿಮ್ಸ್ ಡೀನ್ ಬಸವರಾಜ ಪೀರಾಪುರು ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

ವರದಿ- ಬಾಬಾ ಎಕ್ಸ್ ಪ್ರೆಸ್ ಟಿವಿ ರಾಯಚೂರು

Continue Reading

Trending

Copyright © 2023 EXPRESS TV KANNADA