Connect with us

ಸಿಂಧನೂರು

ಒಂದು ಹಾಳೆಯಲ್ಲಿ ಸುಮಾರು 548 ಚಿತ್ರ..ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿದ ಯುವಕ..!

Published

on

ಸಿಂಧನೂರು: ಸಿಂಧನೂರು ತಾಲೂಕಿನ ಎಂಬಾತ ಒಂದು ಖಾಲಿ ಹಾಳೆಯಲ್ಲಿ ಸುಮಾರು 548 ಚಿತ್ರಗಳನ್ನು ಬಿಡಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿದ್ದಾರೆ. ಈ ಚಿತ್ರಗಳು ಒಂದೊಂದು ಜನಾಂಗದ ಇತಿಹಾಸ, ಪರಿಚಯ, ಅವರ ಕಲೆಯ ಕುರಿತು ಬಿಂಬಿಸುತ್ತವೆ. ತಾವು ಬಿಡಿಸಿದ ಚಿತ್ರಗಳನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ಗಾಗಿ ಇ- ಮೇಲ್ ಮುಖಾಂತರ ಕಳುಹಿಸಿದ್ದು, ಇವರ ಕಲಾಕೃತಿಯನ್ನು ವಿಶೇಷ ಕಲೆಯಂದು ದಾಖಲು ಮಾಡಿಕೊಂಡಿದೆ. ಮುಂದೆ ಲಿಮ್ಕಾ, ಗಿನ್ನಿಸ್ ದಾಖಲೆಗಾಗಿ ವಿಶೇಷ ಚಿತ್ರಗಳನ್ನು ಬರೆಯುವುದಾಗಿ ಉಮೇಶ ಹೇಳಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಹಲವರ ಉದ್ಯೋಗ ಕಸಿದುಕೊಂಡಿದೆ. ಕೋವಿಡ್-19 ಸಂಕಷ್ಟದಿಂದ ಆರ್ಥಿಕವಾಗಿ ಚೇತರಿಸಿಕೊಂಡ ಏಕೈಕ ರಾಜ್ಯ ಕರ್ನಾಟಕ; ಡಿಸಿಎಂ ಅಶ್ವತ್ಥ ನಾರಾಯಣ ಈ ಸಂದರ್ಭದಲ್ಲಿ ಹಲವರು ಸೃಜನಾತ್ಮಕ ಕಲೆಗೆ ಒತ್ತು ಕೊಟ್ಟಿದ್ದು ಇದರ ಭಾಗವಾಗಿ ಉಮೇಶ್ ರ ಈ ಕಲಾಕೃತಿ ಹೊರಹೊಮ್ಮಿದೆ. ಉಮೇಶ್ 2006ರಿಂದ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಏಕವ್ಯಕ್ತಿಯ ಕಲಾಪ್ರದರ್ಶನಗಳು ಹಲವು ಕಡೆ ಪ್ರದರ್ಶನಗೊಂಡಿವೆ. ಇವರ ಕಲೆಯ ಸಾಧನೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಕಲೆಯನ್ನು ಮುಂದುವರಿಸಿದ ಉಮೇಶ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯ ಆಸೆ ಹೊಂದಿದ್ದು ಅದಕ್ಕಾಗಿ ನಿರಂತರ ಪ್ರಯತ್ನ ನಡೆಸಿದ್ದಾರೆ. ಕಲಾವಿದನಿಗೆ ಗೌರವ ಹಾಗೂ ಪ್ರಶಸ್ತಿಗಳು ಕಲೆ ಉತ್ತೇಜನಕ್ಕೆ ಸಹಕಾರಿಯಾಗಿರುತ್ತವೆ. ಅದರಂತೆ ಉಮೇಶರ ಈ ಸಾಧನೆಯನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲಿಸಿ, ಇವರ ಸಾಧನೆಗೆ ಒಂದು ಗೆರೆಯನ್ನು ಮೂಡಿಸಿದೆ. ಮುಂದೆಯೂ ಇವರ ಸಾಧನೆ ಮುಂದುವರಿಯಲಿ ಎಂದು ಹಲವರು ಆಶಯ ವ್ಯಕ್ತಪಡಿಸಿದ್ದಾರೆ.

ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Continue Reading
Click to comment

Leave a Reply

Your email address will not be published. Required fields are marked *

ಸಿಂಧನೂರು

ನೀರಾವರಿ ಇಲಾಖೆಯ ಮುಂದೆ ರೈತರ ಪ್ರತಿಭಟನೆ..!

Published

on

By

ಸಿಂಧನೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ 36ನೇ ಕಾಲುವೆ ಕೆಳಭಾಗದ ರೈತರಾದ ಹೊಸಹಳ್ಳಿ, ಹೊಸಹಳ್ಳಿ ಕ್ಯಾಂಪ್, ಅಮರಾಪುರ, ಸಾಸಲಮರಿ, ಸಾಸಲಮರಿ ಕ್ಯಾಂಪ್ ಸೇರಿದಂತೆ ವಿವಿಧ ಗ್ರಾಮಗಳ ರೈತರು ಈಗಾಗಲೇ ಭತ್ತದ ನಾಟಿ ಮಾಡಿದ್ದು, ಇದುವರೆಗೂ ಕೂಡ ಈ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಈ ಬಗ್ಗೆ ದೂರು ನೀಡಲು ಸಿಂಧನೂರು ನೀರಾವರಿ ಇಲಾಖೆಯ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಹಾಗಾಗಿ ಅಸಮಾಧಾನಗೊಂಡ ರೈತರು ಇಂದು ಸಿಂಧನೂರು ನೀರಾವರಿ ಇಲಾಖೆ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನೂ ಈ ಪ್ರತಿಭಟನೆ ಮುಖಂಡತ್ವ ವಹಿಸಿರುವ ಎಸ್ ಎನ್ ಬಡಿಗೇರ್ ಮಾತನಾಡಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಳ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ.ಇನ್ನಾದರೂ ಅಧಿಕಾರಿಗಳು ಕ್ರಮ ಕೈಗೊಂಡು ಕೆಳ ಭಾಗದ ರೈತರಿಗೆ ನೀರು ಮುಟ್ಟಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವರದಿ- ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Continue Reading

ಸಿಂಧನೂರು

ಗ್ರಾಮ ಪಂಚಾಯಿತಿ ಸದಸ್ಯರಿಗೆ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಸನ್ಮಾನ..!

Published

on

By

ಸಿಂಧನೂರು: ಇತ್ತೀಚಿಗೆ ಜರುಗಿದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗ್ರಾಮೀಣ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಸನ್ಮಾನ ಮಾಡಲಾಯಿತು.ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಹೊರವಲಯದಲ್ಲಿರುವ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ. ವೆಂಕಟರಾವ್ ನಾಡಗೌಡ ಯಾವುದೇ ಹೋರಾಟವಾಗಲಿ, ಸಂಘಟನೆಯಾಗಲಿ ಮಾಡಿಕೊಂಡು ಶಾಸಕರಾದವರಲ್ಲ ಸಾಂದರ್ಭಿಕವಾಗಿ ಶಾಸಕ, ಸಚಿವನಾದ ಆದರೆ ಅಭಿವೃದ್ಧಿ ವಿಷಯದಲ್ಲಿ ಮಾತ್ರ ಶೂನ್ಯ. ಗ್ರಾಮ ಪಂಚಾಯತಿಯಲ್ಲಿ ಅಧಿಕಾರಿ ಹಿಡಿಯಬೇಕೆಂಬ ಉದ್ದೇಶದಿಂದ ಆಸೆ ಆಮಿಷಗಳನ್ನು ಒಡ್ಡಬಹುದು. ಆಸೆ ಆಮಿಷಗಳಿಗೆ ಬಲಿಯಾಗ ಬಾರದು ಎಂದು ಹೇಳಿದರು. ಇನ್ನೂ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಯುವಕರನ್ನು ರಾಜಕೀಯಕ್ಕೆ ಕರೆ ತರಬೇಕು ಹಾಗೂ ಗ್ರಾಮವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆಗೊಳಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷಾತೀತವಾಗಿ ಚುನಾವಣೆ ನಡೆಸಿ ಗ್ರಾಮವನ್ನು ಅಭಿವೃದ್ಧಿ ಪಡಿಸುವಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಅವರ ಕೊಡುಗೆ ಅಪಾರ ಎಂದು ತಿಳಿಸಿದರು.

ವರದಿ- ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Continue Reading

ಸಿಂಧನೂರು

ಪರೋಕ್ಷವಾಗಿ ಬಸನಗೌಡ ಬಾದರ್ಲಿ ಗೆ ಟಾಂಗ್ ಕೊಟ್ಟ ಅಶೋಕ್ ಭೋಪಾಲ್ ಜಾಗೀರ್ದಾರ್..!

Published

on

By

ಸಿಂಧನೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಡೇಸ್ಗೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಶೋಕ್ ಭೋಪಾಲ್ ಜಾಗೀರ್ದಾರ್ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಗೊಂಡ ದಡೆಸ್ಗೂರು, ಸಾಲಗುಂದ, ಹಾಗೂ ಅಲಬನೂರು ನೂತನ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಹಾಗೂ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ವಹಿಸಿದ್ದರು. ನಂತರ ಮಾತನಾಡಿದ ಅವರು ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು, ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ಸದಸ್ಯರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಗ್ರಾಮಗಳು ಸುಂದರ ಗ್ರಾಮವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದು ತಿಳಿಸಿದರು. ನಂತರ ಮಾತನಾಡಿದ ಅಶೋಕ್ ಭೋಪಾಲ್ ಜಾಗೀರ್ದಾರ್ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ಸಂಘಟನೆ ಮುಖ್ಯವಾಗಿತ್ತು. ಆದರೆ ವ್ಯಕ್ತಿಯ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವುದು ವಿಪರ್ಯಾಸ ಎಂದು ಪರೋಕ್ಷವಾಗಿ ಬಸನಗೌಡ ಬಾದರ್ಲಿ ಗೆ ಟಾಂಗ್ ನೀಡಿದರು. ಇನ್ನೂ ಹಂಪನಗೌಡ ಬಾದರ್ಲಿ ಗೆದ್ದಾಗ ಕ್ಷೇತ್ರವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುತ್ತದೆ. ಅದೇ ಸೋತಾಗ ಅಭಿವೃದ್ಧಿ ವಿಷಯದಲ್ಲಿ 10 ವರ್ಷ ಹಿಂದಕ್ಕೆ ಹೋಗುತ್ತದೆ. ಮುಂಬರುವ ವಿಧಾನಸಭಾ ಕ್ಷೇತ್ರದಲ್ಲಿ ಹಂಪನಗೌಡ ಬಾದರ್ಲಿ ಅವರನ್ನು ಗೆಲ್ಲಿಸುವುದರ ಮೂಲಕ ಕ್ಷೇತ್ರದ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ವರದಿ- ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Continue Reading

Trending

Copyright © 2023 EXPRESS TV KANNADA