ವೀಳ್ಯದೆಲೆಯ ಬಳಕೆ ಹತ್ತಾರು ರೋಗಕ್ಕೆ ರಾಮಾಭಾಣ..!

ಊಟದ ನಂತರ ವೀಳ್ಯದ ಎಲೆ ಸೇವಿಸುವುದು ವಾಡಿಕೆ. ತಿಂದ ಆಹಾರ ಸುಲಭವಾಗಿ ಜೀರ್ಣಗೊಳ್ಳಲೆಂದು ಮನೆಯಲ್ಲಿ ಹಿರಿಯರು ವೀಳ್ಯದ ಎಲೆಯನ್ನು ಊಟದ ನಂತರ ದಿನ ನಿತ್ಯ ಸೇವಿಸುತ್ತಾರೆ.ಆದರೆ ವೀಳ್ಯದ ಎಲೆ ಜೀರ್ಣಕ್ರಿಯೆಗೆ ಮಾತ್ರವಲ್ಲದೆ, ಅನೇಕ ಕಾಯಿಲೆಗಳನ್ನು ಉಪಶಮನಗೊಳಿಸುವ ಶಕ್ತಿಯನ್ನೂ ಹೊಂದಿದೆ. ಜೊತೆಗೆ ನಿಮ್ಮ ಸೌಂದರ್ಯ ಹೆಚ್ಚಲು ಸಹಾಯ ಮಾಡುತ್ತದೆ. ಅದು ಹೇಗೆ ಗೊತ್ತಾ? 1)ವೀಳ್ಯದೆಲೆಯನ್ನು ಸೇವಿಸುವುದರಿಂದ ಕೂದಲು ಉದುರುವಿಕೆಯನ್ನು ತಡೆಯುತ್ತದೆ- ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಗೆ ವೀಳ್ಯದ ಎಲೆ ಬಳಸಲು ಆಯುರ್ವೇದ ಕೂಡ ಶಿಫಾರಸ್ಸು ಮಾಡುತ್ತದೆ. ಎಳ್ಳು ಅಥವಾ ತೆಂಗಿನ ಎಣ್ಣೆಯಿಂದ ವೀಳ್ಯದ ಎಲೆಯನ್ನು ರುಬ್ಬಿ, ಆ ಪೇಸ್ಟ್ ಅನ್ನು ನೆತ್ತಿಗೆ, ಕೂದಲಿನ ಬುಡಕ್ಕೆ ಹಚ್ಚಿ. ಕನಿಷ್ಠ ಒಂದು ಗಂಟೆಯಾದರೂ ಬಿಡಿ. ನಂತರ ಶಾಂಪೂವಿನಿಂದ ತೊಳೆಯಿರಿ 2)ಹಲ್ಲು ಕೊಳೆಯದಂತೆ, ಹಾಗೂ ಸವೆಯದಂತೆ ಮತ್ತು ಒಸಡುಗಳನ್ನು ಬಲಪಡಿಸಲು ವಿಳ್ಯದಲೆಯನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತದೆ. ಆದ್ದರಿಂದ ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ, ತಣ್ಣಗಾದ ನಂತರ…

Read More

ನೀರಿಗಾಗಿ ಚುನಾವಣೆಯನ್ನು ಬಹಿಷ್ಕರಿಸಿದ ಹೊನ್ನವಳ್ಳಿ ಗ್ರಾಮದ ಜನ..!

ತಿಪಟೂರು ತಾಲೂಕಿನ ಹೊನ್ನವಳ್ಳಿ ಸುತ್ತಮುತ್ತಲ ಭಾಗಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಾಗಿದೆ ಹಾಗಾಗಿ ಈ ಬಾರಿ ಹೊನ್ನವಳ್ಳಿ ಭಾಗದ ಜನರು ಪಕ್ಷಾತೀತವಾಗಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ಸಂಪೂರ್ಣವಾಗಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಹೊನ್ನವಳ್ಳಿ ಗ್ರಾಮ ಪಂಚಾಯಿತಿಯ 6ಕ್ಷೇತ್ರಗಳ 14 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ .ಇದರ ಮಧ್ಯೆ ಚುನಾವಣೆ ಬಹಿಷ್ಕಾರದ ಮಧ್ಯೆ ಸಂಧಾನ ಮಾಡಲು ಪ್ರಯತ್ನಿಸಿದ್ದ ಅಧಿಕಾರಿಗಳಿಗೂ ಜಗ್ಗದೆ ಯಾರೂ ಸಹ ನಾಮಪತ್ರ ಸಲ್ಲಿಸಲು ಮುಂದೆ ಬಂದಿರಲಿಲ್ಲ. ವರದಿ-ಸಿದ್ದೇಶ್ ಎಕ್ಸ್ ಪ್ರೆಸ್ ಟಿವಿ ತಿಪಟೂರು

Read More

ಮದುವೆ ಆಗಿ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ಟ ಬಾಲಿವುಡ್ ನ ಖ್ಯಾತ ಗಾಯಕಿ..!

ಬಾಲಿವುಡ್ ನ ಖ್ಯಾತ ಗಾಯಕಿ ನೇಹಾ ಕಕ್ಕರ್ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಆಗಿ 2 ತಿಂಗಳು ಕಳೆದಿದ್ದು, ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು ಮದುವೆ ಆಗಿ ಎರಡೇ ತಿಂಗಳಿಗೆ ನೇಹಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇತ್ತೀಚೆಗೆ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪತಿ ಜೊತೆಯಿರುವ ಒಂದು ಫೊಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಇದೀಗ ಆ ಫೋಟೊ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.ಆ ಫೊಟೊ ಬೇಬಿ ಬಂಪ್ ತೋರಿಸುವಂತಿದೆ. ಪೋಟೊ ಶೇರ್ ಮಾಡಿರುವ ನೇಹಾ ಯಾವುದೇ ರೀತಿಯಾ ಕ್ಯಾಪ್ಚನ್ ಪೋಟೊಗೆ ನೀಡಿಲ್ಲ, ಬದಲಿಗೆ ಕಾಳಜಿ ವಹಿಸು ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಈ ಫೋಸ್ಟ್ ಗೆ ಪತಿ ರೋಹನ್ ಕೂಡ ಕಾಮೆಂಟ್ ಮಾಡಿದ್ದು, ಇನ್ನು ಮುಂದೆ ನಾನಿ ಇನ್ನಷ್ಟು ಕೇರ್ ಮಾಡಬೇಕು ನೇಹೂ ಎಂದು ತಿಳಿಸಿದ್ದಾರೆ. ಸದ್ಯ ಈ ದಂಪತಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿ…

Read More

ನಾಗನಕೆರೆಯಲ್ಲಿ ಅಂಗಡಿ ಮುಂಗಟ್ಟಿಲ್ಲದೇ ಸರಳವಾಗಿ ನಡೆದ ಗಿಡದ ಜಾತ್ರೆ..!

ನಾಗಮಂಗಲ: ಮರ, ಗಿಡ, ಕಲ್ಲು, ಬಂಡೆ, ನೆಲ ಹಾಗೂ ಜಲದಂತಹ ಪ್ರಕೃತಿಯ ಒಂದೊಂದು ರೂಪದಲ್ಲೂ ದೇವರನ್ನು ಕಾಣುವ ನಮ್ಮ ಧಾರ್ಮಿಕ ಭಾವನೆ ವಿಶೇಷದಲ್ಲಿ ವೈಶಿಷ್ಟತೆ ಹೊಂದಿದೆ. ಅದೇ ರೀತಿ ಗುಡಿ ಗೋಪುರಗಳಿಲ್ಲದಿದ್ದರೂ ವಿಶಾಲವಾದ ಅಂಗಳದಲ್ಲಿ ಕಂಡುಬರುವ ಗಿಡಗಳ ಬುಡವನ್ನೇ ದೇವಾಲಯದಂತೆ ಬಿಂಬಿಸಿ ಭಕ್ತರು ದೇವರಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಅದೇ ರೀತಿ ಇಂದು ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗನಕೆರೆ ಗಿಡದ ಜಾತ್ರೆಯಲ್ಲಿ ಈ ವರ್ಷ ಅಂಗಡಿ ಮುಂಗಟ್ಟಿಲ್ಲದೆ ಕೇವಲ ಸಾಂಪ್ರದಾಯಿಕ ಪೂಜೆಗಷ್ಟೆ ಸೀಮಿತವಾಗಿದ್ದು ಭಕ್ತಾಧಿಗಳ ನಿರಾಸೆಗೆ ಕಾರಣವಾಯಿತು.ಇಲ್ಲಿನ ನೆಲದ ಪವಾಡವೇ ಒಂದು ವಿಶೇಷ. ಚಿಕ್ಕತಿರುಪತಿಯೆಂದೇ ಪುರಾಣ ಪ್ರಸಿದ್ದವಾದ ಈ ಕ್ಷೇತ್ರ. ಪ್ರತಿ ವರ್ಷದ ಕಾರ್ತಿಕಮಾಸದ ಅಮವಾಸ್ಯೆ ನಂತರದ ಶುಕ್ರವಾರ ನಡೆಯುವ ಜಾತ್ರೆಯಲ್ಲಿ ದಾಸಪ್ಪಂದಿರ ಜಾಗಟೆ, ಬಾನ್ಕೆಗಳ ನಾದದೊಂದಿಗೆ ಗೋವಿಂದನ ನಾಮಸ್ಮರಣೆ ಆಸ್ತಿಕರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.ಆದರೆ ಈ ವರ್ಷ ವಕ್ಕರಿಸಿದ ಕೊರೋನಾ ಮಹಾಮಾರಿಯ ಹಿನ್ನಲೆಯಲ್ಲಿ ಜಿಲ್ಲಾಡಳಿತ…

Read More

ಮತ ಬಹಿಷ್ಕಾರ ಮಾಡುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗ್ತಾಯಿದೆ- ಬಳ್ಳೆಕಟ್ಟೆ ಸುರೇಶ್..!

ಯಾರೋ ಕೆಲವು ಮಂದಿ ನೀರಾವರಿ ಹೋರಾಟಗಾರರ ಮಾತು ಕೇಳಿಕೊಂಡು ಹೊನ್ನವಳ್ಳಿ ಭಾಗದ ಜನರು ಚುನಾವಣೆ ಬಹಿಷ್ಕಾರ ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಬಳ್ಳೆಕಟ್ಟೆ ಸುರೇಶ್ ಕಿಡಿಕಾರಿದ್ದಾರೆ.ಇನ್ನೂ ಬಿಜೆಪಿ ಮುಖಂಡ ಗಂಗರಾಜು ಮಾತನಾಡಿ ಕೆಲವು ನೀರಾವರಿ ಹೋರಾಟಗಾರರು ತಮ್ಮ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.ಹೋರಾಟಗಾರರ ಮಾತುಕೇಳಿ ಚುನಾವಣಾ ಬಹಿಷ್ಕರಿಸಿರುವುದು ಮಹಾ ಅಪರಾಧವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರ ಜೊತೆಗೆ ಎಪಿಎಂಸಿ ಅಧ್ಯಕ್ಷರಾದ ದಿವಾಕರ್ ಮಾತನಾಡಿ ಮುಂದಿನ ದಿನಗಳಲ್ಲಿ ಎಲ್ಲಾ ಕೆರೆಗಳಿಗೂ ನೀರು ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷನ ಗೂಂಡಾಗಿರಿ- ಬೆದರಿಕೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್..!

ಮಾಲೂರು: ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾದನಹಟ್ಟಿ ಗೇಟ್ ಬಳಿಯಹಿರುವ ಅಲ್ ಕಾರ್ಗೋ ಖಾಸಗಿ ಕಂಪನಿ ಕಾರ್ಮಿಕರಿಗೆ ಊಟ ಸರಬರಾಜು ಮಾಡಲು ಗುತ್ತಿಗೆ ಪಡೆದಿರುವ ಮಾಲೀಕರಿಗೆ ಊಟಕ್ಕೆ ವಿಷ ಹಾಕೋದಾಗಿ ಕೋಲಾರ ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿ ಗೌಡ ಬೆದರಿಕೆ ಹಾಕಿದ್ದಾರೆ. ಗುತ್ತಿಗೆ ಪಡೆದ ಮಾಲೀಕರಿಗೆ ಪೋನ್ ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಊಟ ಸರಬರಾಜು ಮಾಡುವ ವಾಹನಕ್ಕೆ ಬೆಂಕಿ ಹಚ್ಚೋದಾಗಿ ಬೆದರಿಕೆ ಹಾಕಿದ್ದಾರೆ. ಇನ್ನು ಅಧ್ಯಕ್ಷನ ಬೆದರಿಕೆಯ ಆಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ವರದಿ-ಮಾರುತೇಶ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಮಾಲೂರು

Read More

ಮದಗಜ’ ಚಿತ್ರದ ಟೀಸರ್ ಗೆ ಫಿದಾ ಆದ ಸಿನಿ ಪ್ರೀಯರು..!

‘ಮದಗಜ’ ಚಿತ್ರ ಬಿಡುಗಡೆಯಾದ 24 ಗಂಟೆಗಳಲ್ಲಿ, ಚಿತ್ರದ ಟೀಸರ್ 3 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ. ಈ ಚಿತ್ರವು ದೊಡ್ಡ ವಾಣಿಜ್ಯ ಯಶಸ್ಸನ್ನು ಗಳಿಸುವ ಸಾಧ್ಯತೆಯಿದೆ. ಹೌದು,’ಮದಗಜ’ ಚಿತ್ರವು ಭವ್ಯ ಶೈಲಿಯಲ್ಲಿ ಘೋಷಿಸಿದೆ. ಮುಂಬರುವ ಸ್ಯಾಂಡಲ್ ವುಡ್ ನಟ ಶ್ರೀಮುರಳಿ ಅಭಿನಯದ ಈ ಚಿತ್ರದ ಟೀಸರ್ ಒಂದು ದಿನ ಬಿಡುಗಡೆ ಆಗಿ ಈಗಾಗಲೇ 3 ಮಿಲಿಯನ್ ವೀಕ್ಷಣೆಗಳ ಗಡಿ ದಾಟಿದೆ. ‘ಮದಗಜ’ ಚಿತ್ರ ಶೂಟಿಂಗ್ ಪ್ರಾರಂಭದಿಂದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯ ಭಾಗವಾಗಿದೆ, ಆದರೆ ಟೀಸರ್ ಗಮನ ಸೆಳೆದಿರುವ ವೇಗವು ಕಮರ್ಷಿಯಲ್ ಯಶಸ್ಸನ್ನು ಗಳಿಸುವ ಹಾದಿಯಲ್ಲಿದೆ ಎಂದು ಸೂಚಿಸುತ್ತದೆ. ವರದಿಯ ಪ್ರಕಾರ, ನೆನ್ನೆಯಷ್ಟೇ, ನಿರ್ದೇಶಕ ಪ್ರಶಾಂತ್ ನೀಲ್ ‘ಮದಗಜ’ ಚಿತ್ರ ತಂಡಕ್ಕೆ ತಮ್ಮ ಬೆಂಬಲವನ್ನು ವಿಸ್ತರಿಸಿದರು ಮತ್ತು ಫಸ್ಟ್ ಲುಕ್ ಟೀಸರ್ ಅನ್ನು ಹೆಮ್ಮೆಯಿಂದ ಅನಾವರಣಗೊಳಿಸಿದರು. ಪ್ರಶಾಂತ್ ನೀಲ್ ಮತ್ತು ನಟ ಶ್ರೀಮುರಳಿ ಅವರು ಈ ಹಿಂದೆ ‘ಉಗ್ರಂ’ ಚಿತ್ರದಲ್ಲಿ…

Read More

ಬಾಲಿವುಡ್ ನ ಖ್ಯಾತ ನಿರ್ಮಾಪಕ/ನಿರ್ದೇಶಕನಿಗೆ ಎನ್ ಸಿಬಿ ಶಾಕ್..!

ಬಾಲಿವುಡ್ ಡ್ರಗ್ಸ್ ಮಾಫಿಯಾ ಕುರಿತು ಎನ್ ಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಹಲವು ಸೆಲೆಬ್ರೆಟಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈಗ ಖ್ಯಾತ ನಿರ್ಮಾಪಕ/ನಿರ್ದೇಶಕರಾದ ಕರಣ್ ಜೋಹರ್ ಗೆ ಎನ್ ಸಿಬಿ ನೋಟಿಸ್ ನೀಡಿದ್ದು ಶಾಕ್ ಕೊಟ್ಟಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರಿಗೆ ಎನ್ ಸಿ ಬಿ ನೋಟಿಸ್ ಜಾರಿ ಮಾಡಿದೆ. 2019ರಲ್ಲಿ ಕರಣ್ ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ವಿಕ್ಕಿ ಕೌಶಾಲ್, ವರುಣ್ ಧವನ್, ಅರ್ಜುನ್ ಕಪೂರ್, ಶಾಹಿದ್ ಕಪೂರ್, ಮಲೈಕಾ ಅರೋರಾ ಸೇರಿದಂತೆ ಅನೇಕರು ಆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅದೇ ಪಾರ್ಟಿಯಲ್ಲಿ ಮಾದಕ ವಸ್ತು ಬಳಕೆ ಆಗಿದೆ ಎಂದು ಆರೋಪಿಸಿ ಶಿರೋಮಣಿ ಅಕಾಲಿ ದಳದ ಮುಖಂಡ ಮಂಜಿಂದರ್ ಸಿಂಗ್ ಶಿರ್ಸಾ…

Read More

ಕಂಗನಾ ರನೌತ್ ಮತ್ತು ದಿಲ್ಜಿತ್ ದೊಸೊಂಜ್ ನಡುವೆ ನಿಲ್ಲದ ಸಮರ..!

ಬಾಲಿವುಡ್ ನ ಖ್ಯಾತ ನಟಿ ಪದೇ ಪದೇ ಒಂದಲ್ಲ ಒಂದು ವಿವಾದಗಳನ್ನು ತನ್ನ ಮೈಮೇಲೆ ಎಳೆದು ಕೊಳ್ತಾನೆ ಇರ್ತಾರೆ. ಇತ್ತೀಚೆಗೆ ತನ್ನ ಮಾಜಿ ಪ್ರಿಯಕರ ಹೃತಿಕ್ ರೋಷನ್ ನನ್ನು ಮತ್ತೇ ಕೆಣಕಿ ಹೃತಿಕ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಕಂಗನಾ ರನೌತ್ ಮತ್ತು ದಿಲ್ಜಿತ್ ದೊಸಾಂಜ್ ನಡುವಿನ ದೆಹಲಿ ಚಲೋ ಪರ-ವಿರೋಧದ ಗಲಾಟೆ ಸದ್ಯಕ್ಕೆ ಮುಗಿಯುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ನೂತನ ಕೃಷಿ ಕಾಯ್ದೆಯ ಬಗ್ಗೆ ಇಬ್ಬರು ಟ್ವೀಟ್ಟರ್ ನಲ್ಲಿ ವಾಗ್ವಾದವನ್ನು ಮುಂದುವರೆಸಿದ್ದಾರೆ. ದೆಹಲಿ ಚಲೋಗೆ ಬೆಂಬಲ ಘೋಷಿಸಿ ಸುಮಾರು ಒಂದು ಕೋಟಿ ರೂಪಾಯಿಯನ್ನು ದಿಲ್ಜಿತ್ ದೊಸೊಂಜ್ ದಾನ ಮಾಡಿದ್ದರು. ಪಂಚಾಬ್ ರೈತರ ಪರ ಧ್ವನಿ ಎತ್ತಿದ್ದ ದಿಲ್ಜಿತ್ ಕಂಗನಾ ವಿರುದ್ದ ಗುಡುಗಿದ್ದರು. ನೂತನ ಖಾಯ್ದೆ ವಿರುದ್ದ ಸರಣಿ ಟ್ವೀಟ್ ಮಾಡುತ್ತೀರುವ ಕಂಗನಾರನೌತ್ ನನ್ನು ಚಳುವಳೀಯಿಂದ ಕಾಣೆಯಾಗಿದ್ದಾರೆಂದು ದಿಲ್ಜಿತ್ ಟ್ವೀಟ್ ಮಾಡಿದ್ದರು. ಆದ್ರೆ ಇದೀಗ ಕಂಗನಾ ದಿಲ್ಜಿತ್…

Read More

ದಾಸವಾಳ ಹೂವಿನಿಂದ ದೇಹಕ್ಕೆ ಹತ್ತು ಹಲವು ಲಾಭ…!

ದಾಸವಾಳ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಹೂವಿನ ಜಾತಿಯಲ್ಲಿ ಇದು ಒಂದಾಗಿದೆ. ಆದರೆ ಎಲ್ಲಾ ಹೂವಿನಂತಲ್ಲಾ ದಾಸವಾಳ ತನ್ನ ಸೌಂದರ್ಯದಿಂದಲೇ ಎಲ್ಲರನ್ನು ತನ್ನತ್ತ ಸೆಳೆಯುವಂತೆ ಮಾಡುವ ಈ ಹೂವಿನಿಂದ ಸಿಗುವ ಲಾಭವನ್ನು ನೀವು ಎಂದು ಊಹೆ ಮಾಡಲು ಸಾಧ್ಯವಿಲ್ಲ. ಹೌದು.. ಸುಂದರ ದಾಸವಾಳ ಹೂ ಪೂಜೆ ಮತ್ತು ಹೆಂಗಳೆಯರ ಮೂಡಿಗೆ ಮಾತ್ರ ಸೀಮಿತವಾಗಿರದೆ ಕೂದಲಿನ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಅಂಶವನ್ನು ಹೊಂದಿದೆ. ದಾಸವಾಳ ಹೂವು, ನೋಡುಗರ ಕಣ್ಮನಗಳನ್ನು ತನ್ನ ಸೌಂದರ್ಯದಿಂದಲೇ ತನ್ನತ್ತ ಸೆಳೆಯುವ ಒಂದು ಸುಂದರವಾದ ಹೂವು. ಇತರ ಹೂವುಗಳಿಗಿಂತ ಸ್ವಲ್ಪ ಅಗಲವಾಗಿ ಮೂಡಿ ಬಂದು ಒಂದೆಳೆಯಲ್ಲಿ ಅರಳುವ ಈ ಹೂವು ಝೇಂಕಾರದಿಂದ ಓಡಾಡುವ ದುಂಬಿಗಳನ್ನು ಕೂಡ ತನ್ನತ್ತ ಆಕರ್ಷಣೆ ಮಾಡುತ್ತದೆ. ಮನುಷ್ಯನ ತಲೆ ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಸುಲಭ ರೀತಿಯಲ್ಲಿ ಪರಿಹಾರ ಮಾಡುವ ಅದ್ಭುತ ಗುಣ ಲಕ್ಷಣ ದಾಸವಾಳ ಹೂವಿಗೆ ಇದೆ. ಪ್ರಾಚೀನ…

Read More