ದಾಸವಾಳ ಹೂವಿನಿಂದ ದೇಹಕ್ಕೆ ಹತ್ತು ಹಲವು ಲಾಭ…!

ದಾಸವಾಳ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಹೂವಿನ ಜಾತಿಯಲ್ಲಿ ಇದು ಒಂದಾಗಿದೆ. ಆದರೆ ಎಲ್ಲಾ ಹೂವಿನಂತಲ್ಲಾ ದಾಸವಾಳ ತನ್ನ ಸೌಂದರ್ಯದಿಂದಲೇ ಎಲ್ಲರನ್ನು ತನ್ನತ್ತ ಸೆಳೆಯುವಂತೆ ಮಾಡುವ ಈ ಹೂವಿನಿಂದ ಸಿಗುವ ಲಾಭವನ್ನು ನೀವು ಎಂದು ಊಹೆ ಮಾಡಲು ಸಾಧ್ಯವಿಲ್ಲ.
ಹೌದು.. ಸುಂದರ ದಾಸವಾಳ ಹೂ ಪೂಜೆ ಮತ್ತು ಹೆಂಗಳೆಯರ ಮೂಡಿಗೆ ಮಾತ್ರ ಸೀಮಿತವಾಗಿರದೆ ಕೂದಲಿನ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಅಂಶವನ್ನು ಹೊಂದಿದೆ. ದಾಸವಾಳ ಹೂವು, ನೋಡುಗರ ಕಣ್ಮನಗಳನ್ನು ತನ್ನ ಸೌಂದರ್ಯದಿಂದಲೇ ತನ್ನತ್ತ ಸೆಳೆಯುವ ಒಂದು ಸುಂದರವಾದ ಹೂವು. ಇತರ ಹೂವುಗಳಿಗಿಂತ ಸ್ವಲ್ಪ ಅಗಲವಾಗಿ ಮೂಡಿ ಬಂದು ಒಂದೆಳೆಯಲ್ಲಿ ಅರಳುವ ಈ ಹೂವು ಝೇಂಕಾರದಿಂದ ಓಡಾಡುವ ದುಂಬಿಗಳನ್ನು ಕೂಡ ತನ್ನತ್ತ ಆಕರ್ಷಣೆ ಮಾಡುತ್ತದೆ. ಮನುಷ್ಯನ ತಲೆ ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಸುಲಭ ರೀತಿಯಲ್ಲಿ ಪರಿಹಾರ ಮಾಡುವ ಅದ್ಭುತ ಗುಣ ಲಕ್ಷಣ ದಾಸವಾಳ ಹೂವಿಗೆ ಇದೆ. ಪ್ರಾಚೀನ ಕಾಲದಿಂದಲೂ ಆಯುರ್ವೇದ ಪದ್ಧತಿಯಲ್ಲಿ ಇದು ಸಾಬೀತಾಗಿದೆ.
1)ತಲೆ ಹೊಟ್ಟು, ಬಿಳಿ ಕೂದಲು, ಕೂದಲು ಉದುರುವಿಕೆ ಮತ್ತು ನೆತ್ತಿಯ ಸೋಂಕು. ಇದರ ಜೊತೆಗೆ ಬೊಕ್ಕು ತಲೆಯ ಸಮಸ್ಯೆಗೆ ದಾಸವಾಳ ಬಳಸ ಬಹುದಾಗಿದೆ.
2)ಅಧಿಕ ರಕ್ತದೊತ್ತಡ ಇರುವ ರೋಗಿಗಳು ದಾಸವಾಳ ಹೂವನ್ನು ಕುದಿಸಿ ತಣಿಸಿ ಸೋಸಿದ ನೀರನ್ನು ನಿತ್ಯವೂ ಕುಡಿಯುವುದರಿಂದ ರಕ್ತದೊತ್ತಡ ನಿವಾರಣೆಯಾಗುತ್ತದೆ.
3)ಬಿಳಿ ದಾಸವಾಳದ ಹೂವು ವಿಶೇಷವಾಗಿ ಅತಿ ಜ್ವರವನ್ನು ಇಳಿಸಲು ಸಹಾಯಕಾರಿಯಾಗಿದೆ ದಾಸವಾಳದ ಎಲೆಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿರುವ ಕಾರಣ ಈ ಎಲೆಗಳನ್ನು ಬಿಸಿ ನೀರಿನಲ್ಲಿ ಹಾಕಿ ಸೇವಿಸ ಬೇಕು.
4)ಕಿಡ್ನಿ ಸಮಸ್ಯೆ ಮತ್ತು ಕಿಡ್ನಿಯಲ್ಲಿ ಕಲ್ಲು ಉಂಟಾಗುವುದನ್ನು ತಡೆಯಲು ದಾಸವಾಳ ಹೂವಿನ ಟೀ ಸೇವನೆ ಮದ್ದಾಗಿದೆ. ದಾಸವಾಳದ ಸಸ್ಯದ ಬೇರುಗಳನ್ನು ಎಣ್ಣೆಯಲ್ಲಿ ಹಾಕಿ ಬೇರಿನಲ್ಲಿರುವ ನೀರಿನ ಅಂಶ ಆವಿಯಾಗುವವರೆಗೆ ಕುದಿಸಿ ಗಾಯಗಳಿಗೆ ಈ ಎಣ್ಣೆ ಲೇಪಿಸ ಬಹುದು..
5)ನೀರಿನಂಶದ ಕೊರತೆಯಿಂದ ಬಳಲುತ್ತಿರುವವರು ದಾಸವಾಳದ ಜ್ಯೂಸ್ ಕುಡಿದರೆ ದೇಹದಲ್ಲಿ ನೀರಿನ ಅಂಶವು ಸಮತೋಲನಕ್ಕೆ ಬರುತ್ತದೆ. ಹೀಗೆ ಮನೆಯಲ್ಲಿಯೇ ಬೆಳೆಯುವ ಹೂವಿನಿಂದ ದೇಹಕ್ಕೆ ಎಷ್ಟೇಲ್ಲಾ ಪ್ರಯೋಜನಗಳಿವೆ ಎಂಬುವುದು ತಿಳಿಯಿತ್ತಲ್ಲ.ಇನ್ನು ಮುಂದೆ ನೀವು ಮನೆಯಲ್ಲಿಯೇ ಬೆಳೆಯುವ ಈ ಹೂವಿನ ಉಪಯೋಗವನ್ನು ಸದುಪಯೋಗ ಪಡಿಸಿಕೊಳ್ಳುವುದು ಸೂಕ್ತ.

ವರದಿ- ವೆಬ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment