Connect with us

ಮೊಳಕಾಲ್ಮೂರು

ಅಜಾತಶತ್ರು ದಿವಂಗತ ವಾಜಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮ.!

Published

on

ಮೊಳಕಾಲ್ಮೂರು: ಭಾರತೀಯ ಜನತಾ ಪಾರ್ಟಿ ಮಂಡಳದ ವತಿಯಿಂದ ಭಾರತದ ಮಾಜಿ ಪ್ರಧಾನಿಗಳಾದ ,ಅಜಾತಶತ್ರು ,ಭಾರತರತ್ನ ಸನ್ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆಯನ್ನು ಇಂದು ಬೆಳಿಗ್ಗೆ 11 ಕ್ಕೆ ಮೊಳಕಾಲ್ಮೂರು ಪಕ್ಷದ ಕಚೇರಿಯಲ್ಲಿ ನೆರೆವೇರಿಸಲಾಯಿತು. ಇನ್ನೂ ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಂಡಳಿ ಅಧ್ಯಕ್ಷರಾದ ಡಾ.ಮಂಜುನಾಥ ಪಿಎಂ ರವರು, ತೇಜಸ್ವಿ ಮುಖಚರ್ಯ ಹಚ್ಚಲು ಸಿದ್ಧಾಂತ ಪ್ರತಿಪಾದನೆ ಅಭಿವೃದ್ಧಿಪರ ಚಿಂತನೆಗಳಿಂದ ಭಾರತದ ಜನರ ಹೃದಯ ಗೆದ್ದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ಸರ್ವಶಿಕ್ಷಣ ಅಭಿಯಾನ, ಚತುಷ್ಪಥ ರಸ್ತೆ, ಗ್ರಾಮ ಸಡಕ್ ಯೋಜನೆಯನ್ನು, ರಾಷ್ಟ್ರಕ್ಕೆ ಸಮರ್ಪಿಸಿದ ಮೇರು ವ್ಯಕ್ತಿತ್ವ ಅಟಲ್ ಅವರದು.ಈ ದಿನವನ್ನು ಕೇಂದ್ರ ಸರ್ಕಾರ “ಸುಶಾಸನ “ಜನ ಹೊನ್ನಾಗಿ ಆಚರಿಸಲಾಗುತ್ತಿದೆ.ಈ ದಿನದ ಅಂಗವಾಗಿ ಕೇಂದ್ರದ ನಮೋ ಸರಕಾರ ಕಿಸನ್ ಸನ್ಮಾನ ಯೋಜನೆಯಡಿ 9ಕೋಟಿ ರೈತರಿಗೆ ತಲಾ 2ಸಾವಿರೂ ಗಳಂತೆ 18000ಕೋಟಿ ರೂ ಗಳನ್ನು ಮಧ್ಯವರ್ತಿಗಳು ಹಾವಳಿಯಿಲ್ಲದಂತೆ ನೇರ ವರ್ಗಾವಣೆ ಮಾಡುತ್ತಿದ್ದಾರೆ.ಇದು ನಮ್ಮ ಸರ್ಕಾರದ ಸುಶಾಸನಕ್ಕೆ ಉದಾಹರಣೆ ಎಂದರು. ಇನ್ನೂ ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ರಾದ ಕಿರಣ್ ಗಾಯಕ್ವಾಡ್ ,ಜಿಲ್ಲಾ ನೇಕಾರ ಪ್ರಕೋಷ್ಠದ ಸಂಚಾಲಕರಾದ ಶಾಂತರಾಮ್ ಸಭಾಪತಿ ,ರೈತ ಮೋರ್ಚಾ ಅಧ್ಯಕ್ಷರಾದ ಮಂಜುನಾಥ್ ಸ್ವಾಮಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ ವಿಜಯ್ ‘ಎಸ್ಟಿ ಮೋರ್ಚಾ ಅಧ್ಯಕ್ಷರಾದ ಸಿದ್ಧಾರ್ಥ್ ಪ್ರಧಾನ ಕಾರ್ಯದರ್ಶಿ ಪ್ರಭು,ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಸರ್ವಮಂಗಳಾ , ಕಾರ್ಯದರ್ಶಿ ರೂಪ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಣ್ ಉಪಾಧ್ಯಕ್ಷರಾದ ಶ್ರೀಮತಿ ಶುಭಾ ಪೃಥ್ವಿರಾಜ್ ,ಪಟ್ಟಣ ಪಂಚಾಯತ್ ಸದಸ್ಯರಾದ ಮಂಜಮ್ಮ ತಿಪ್ಪೆಸ್ವಾಮಿ ದಿಲೀಪ್ ಇನ್ನು ಮುಂತಾದವರು ಉಪಸ್ಥಿತರಿದ್ದರು .

ವರದಿ- ಪಿ ಎಂ ಗಂಗಾಧರ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮೂರು

Continue Reading
Click to comment

Leave a Reply

Your email address will not be published. Required fields are marked *

ಮೊಳಕಾಲ್ಮೂರು

ರೈತರ ಬೇಡಿಕೆಗಳಿಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ…!

Published

on

By

ಮೊಳಕಾಲ್ಮುರ: ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಾಗೂ ಜನವಿರೋಧಿ ವಿದ್ಯುತ್ ಮಸೂದೆಯನ್ನು ಹಿಂಪಡೆಯಲು ಒತ್ತಾಯಿಸಿ ದೆಹಲಿಯಲ್ಲಿ ನಡೆದಿರುವ ರೈತರ ಹೋರಾಟ ಬೆಂಬಲಿಸಿ ಮೊಳಕಾಲ್ಮೂರಿನಲ್ಲಿ ಸಿಐಟಿಯು ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.ಮೊಳಕಾಲ್ಮೂರು ತಾಲ್ಲೂಕಿನ ಕೆಇಬಿ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ್ರು.ಇನ್ನೂ 3 ಕಾಯ್ದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಮೊಳಕಾಲ್ಮುರು ತಹಶೀಲ್ದಾರ್ ಮೂಲಕ ಮೇಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ರು. ಇದೇ ಸಂದರ್ಭದಲ್ಲಿ ಸಿಐಟಿಯುನ ತಾಲೂಕು ಅಧ್ಯಕ್ಷರಾದ ಡಿ.ಎಂ ಮಲಿಯಪ್ಪ ಮಾತನಾಡಿ, ಪ್ರಧಾನಮಂತ್ರಿಗಳಿಗೆ ರೈತರ ಮೇಲೆ ಕಾಳಜಿ ಇಲ್ಲ 48 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ.ಈಗಾಗಲೇ ಕೆಲವು ರೈತರು ಮೃತಪಟ್ಟಿದ್ದಾರೆ.ಅಲ್ಲದೆ “ಕಾರ್ಮಿಕರ ಹಕ್ಕುಗಳನ್ನು ಉಳಿಸುತ್ತವೆ,ರೈತರ ಬದುಕನ್ನು ರಕ್ಷಿಸುತ್ತೇವೆ, ಕಾರ್ಪೊರೇಟ್ ಹಿಡಿತದಿಂದ ದೇಶವನ್ನು ಕಾಪಾಡುತ್ತೇವೆ ಎಂಬ ಪ್ರತಿಜ್ಞೆಯೊಂದಿಗೆ ಅಧಿಕಾರ ಹಿಡಿದ ಕೇಂದ್ರ ಸರ್ಕಾರ ರೈತರ ಜೀವನದಲ್ಲಿ ಆಟವಾಡುತ್ತಿದೆ ಎಂದು ಗುಡುಗಿದರು.

ವರದಿ- ಪಿ.ಎಂ ಗಂಗಾಧರ್ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರ

Continue Reading

ಮೊಳಕಾಲ್ಮೂರು

ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಎಂಎಲ್ಎ ತಿಪ್ಪೇಸ್ವಾಮಿ..!

Published

on

By

ಮೊಳಕಾಲ್ಮುರು: ಮೊಳಕಾಲ್ಮುರು ಪಟ್ಟಣದ ಕೆ.ಇ.ಬಿ ವೃತ್ತದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಎಂಎಲ್ಎ ತಿಪ್ಪೇಸ್ವಾಮಿ ಸಚಿವರ ಕ್ಷೇತ್ರದಲ್ಲಿ ಬಿಜೆಪಿ ಅಲೆ ಇರುವುದು ಸತ್ಯಕ್ಕೆ ದೂರವಾದ ಮಾತು .ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶೇಕಡಾ 80 ರಷ್ಟು ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ಗೆದ್ದು ಬೀಗಿದ್ದಾರೆ. ಮೊಳಕಾಲ್ಮುರು ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ ಇದನ್ನು ಮುಂದಿನ ದಿನಗಳಲ್ಲಿ ,ಜಿಲ್ಲಾ ಪಂಚಾಯತ್ ,ತಾಲ್ಲೂಕು ಪಂಚಾಯಿತಿ,ಚುನಾವಣೆಯಲ್ಲಿ ಮತ್ತೆ ನಾವು ಸಾಬೀತು ಮಾಡುತ್ತೇವೆ. ಇಲ್ಲಿ 3 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ .ಇಲ್ಲಿ ನೀವು ಸಚಿವರಾಗಿದ್ದೀರಿ ನಿಮ್ಮದೇ ಸರ್ಕಾರ,ಮತ್ತೆ ಏಕೆ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಅವರಿಗೆ ಜನಪರ ಕಾಳಜಿ ಇಲ್ಲ ಅನ್ಯರೊಡನೆ ರಾಜಕೀಯ ಮಾಡುತ್ತಾರೆ. ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಜತೆ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಾಗಿ ಯುವ ಜನತೆ ವಿಜೇತರಾಗಿರುವುದು ಉತ್ತಮ ಬೆಳವಣಿಗೆ ಎಂದರು ಬಡ ಹಾಗೂ ಕೆಳವರ್ಗದ ಜನರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಎಂದು ಗುಡುಗಿದರು .

ವರದಿ-ಪಿ.ಎಂ ಗಂಗಾಧರ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು

Continue Reading

ಮೊಳಕಾಲ್ಮೂರು

ಕೊರೋನಾ ನಿಯಮ ಪಾಲನೆಯೊಂದಿಗೆ ಜ್ಯೂನಿಯರ್ ಕಾಲೇಜು ಪ್ರಾರಂಭ ..!

Published

on

By

ಮೊಳಕಾಲ್ಮುರು: ರಾಜ್ಯ ಸರ್ಕಾರದ ಆದೇಶದಂತೆ ಎಲ್ಲಾ ಕಾಲೇಜುಗಳು ಪ್ರಾರಂಭವಾಗಿದ್ದು ಮೊಳಕಾಲ್ಮೂರು ಪಟ್ಟಣದ ಜೂನಿಯರ್ ಕಾಲೇಜು ಎಲ್ಲಾ ಕೊರೋನಾ ನಿಯಮದ ಪಾಲನೆಯೊಂದಿಗೆ ಎಲ್ಲಾ ಸಕಲ ಸಿದ್ಧತೆಯೊಂದಿಗೆ ಕಾಲೇಜು ಓಪನ್ ಆಗಿದೆ. ಕಾಲೇಜಿನ ಪ್ರತಿಯೊಂದು ಕೊಠಡಿಗೆ ಸ್ಯಾನಿಟೈಸರ್ ಮಾಡಿಸಿ ಸ್ವಚ್ಛತೆಯನ್ನು ಕೈಗೊಂಡರು.ಇನ್ನೂ ಕಾಲೇಜಿಗೆ ಹಾಗೂ ಆಗಮಿಸುವ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಥರ್ಮಾಮೀಟರ್ ನಿಂದ ಟೆಂಪ್ರೆಚರ್ ಚೆಕ್ ಮಾಡಿ ವಿದ್ಯಾರ್ಥಿಗಳಲ್ಲಿ ಪರಸ್ಪರ ಅಂತರವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು. ಇನ್ನೂ ಎಲ್ಲಾ ವಿದ್ಯಾರ್ಥಿಗಳು ಕಾಲೇಜಿಗೆ ಖುಷಿಯಿಂದ ಮಾಸ್ಕ್ ಧರಿಸಿ ಆಗಮಿಸುತ್ತಿರುವುದು ವಿಶೇಷವಾಗಿತ್ತು. ಕೆಲ ವಿದ್ಯಾರ್ಥಿಗಳು ಮಾತನಾಡಿ ಆನ್ ಲೈನ್ ಕ್ಲಾಸ್ ನಿಂದ ತುಂಬಾ ತೊಂದರೆಯಾಗುತ್ತಿತ್ತು.ಇದೀಗ ಎಲ್ಲಾ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಒಟ್ಟಾಗಿ ಕಲಿಯಬಹುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಹನುಮಂತಪ್ಪನವರು, ಉಪನ್ಯಾಸಕರಾದ ತಿಪ್ಪೇಸ್ವಾಮಿ, ಕರೂರ್ ಪ್ರಕಾಶ್, ಭಾಗ್ಯಮ್ಮಮಂಜುನಾಥ್, ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ- ಪಿ.ಎಂ ಗಂಗಾಧರ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು

Continue Reading

Trending

Copyright © 2023 EXPRESS TV KANNADA