ಕೊರೊನಾ ರೋಗಿಗಳೊಂದಿಗೆ ಡಾಕ್ಟರ್ ಗಳ ಹಾಡು..ಡ್ಯಾನ್ಸ್..

ಕಲಬುರಗಿ : ಕೊರೊನಾ ಕಡಿಮೆಯಾದ ಹಿನ್ನಲೆಯಲ್ಲಿ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆ ವೈದ್ಯರು ಕೊರೊನಾ ರೋಗಿಗಳೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.. ಅಂದ ಹಾಗೇ ವರನಟ ಡಾ.ರಾಜಕುಮಾರ್ ಅವರ ಸೂಪರ್ ಹಿಟ್ ಚಿತ್ರಗೀತೆ `ನಗುತ್ತಾ..ನಗುತ್ತಾ..ಬಾಳು ನೀನು ಎಂಬ ಹಾಡಿಗೆ’ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳು ಸಖತ್ ಸ್ಟೇಫ್ ಹಾಕಿದ್ದಾರೆ.. ಸದ್ಯ ಆಸ್ಪತ್ರೆ ವೈದ್ಯರ ಹಾಡುಗಾರಿಗೆ ಹಾಗೂ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರು ಸಹ ಫುಲ್ ಖುಷ್ ಆಗಿದ್ದಾರೆ. ಇನ್ನು ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆಯಲ್ಲಿ ೩೦ನೇ ಸ್ಥಾನಕ್ಕೆ ಕಲಬುರಗಿ ಜಿಲ್ಲೆ ಇಳಿದಿದೆ.ಜೊತೆಗೆ ಬೀದರ್ ಬಿಟ್ಟರೆ ಕಲಬುರಗಿಯಲ್ಲೇ ಅತೀ ಕಡಿಮೆ ಅಂದರೆ ಕೇವಲ ೩.೮%ಗೆ ಪಾಸಿಟಿವ್ ಸಂಖ್ಯೆ ಇಳಿದಿದೆ.. ಉಮೇಶ್ ಅಚಲೇರಿ ಎಕ್ಸ್ ಪ್ರೆಸ್ ಟಿವಿ ಕಲಬುರಗಿ

Read More

ಹತ್ತಲ್ಲ, ಇಪ್ಪತ್ತಲ್ಲ ಐವತ್ತು ಲಕ್ಷ ರೂ. ಬೆಲೆಬಾಳುವ ಔಷಧಿ ದಾನ ಮಾಡಿದ ಅಪರಿಚಿತ..!

ಹಾವೇರಿ(ರಾಣೆಬೆನ್ನೂರು):ಕೊರೊನಾ ಸಂದರ್ಭದಲ್ಲಿ ರೋಗಿಗಳಿಂದ ಹಿಡಿದು ಬಡವ, ಶಮ್ರಿಕ ಸೇರಿ ಇತರೆ ವರ್ಗದವರಿಗೆ ದಾನಿಗಳು ಮುಂದೆ ಬಂದು ದಾನ ಮಾಡುವುದನ್ನು ನೋಡಿದ್ದೇವೆ.ಆದರೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮಾತ್ರ ಅನಾಮಧೇಯ ವ್ಯಕ್ತಿಯೊಬ್ಬರು ಸುಮಾರು ೫೦ ಲಕ್ಷ ರೂಪಾಯಿ ಬೆಲಬಾಳುವ ಔಷಧಿಗಳ ದಾನ ಮಾಡಿ ತೆರೆಮರೆಗೆ ಉಳಿದಿದ್ದಾರೆ. ಅಂದ ಹಾಗೇ ಕೋವಿಡ್‌ಗೆ ಸಂಬAಧಿಸಿದAತೆ ಸುಮಾರು ೫೦ ಲಕ್ಷ ರೂಪಾಯಿ ಮೌಲ್ಯದ ಔಷಧಿಗಳು, ಮಾಸ್ಕ್, ಫೇಸ್ ಶೀಲ್ಡ್, ಮತ್ತು ಇಂಜೆಕ್ಷನ್‌ಗಳನ್ನು ಹೆಸರು ಹೇಳಲು ಇಚ್ಛಿಸದ ದಾನಿಯೊಬ್ಬರು ಹಾವೇರಿ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದ್ದಾರೆ… ಸದ್ಯ ಹಾವೇರಿ ಜಿಲ್ಲಾಡಳಿತವು ಶೀಘ್ರದಲ್ಲೇ ಇದನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ನೀಡಲಿದ್ದು,ಹಾವೇರಿ ಜಿಲ್ಲಾಧಿಕಾರಿ ಆ ಅಪರಿಚಿತ ದಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.   ಬಸವನಗೌಡ ಎಕ್ಸ್ ಪ್ರೆಸ್ ಟಿವಿ (ರಾಣೆಬೆನ್ನೂರು) ಹಾವೇರಿ

Read More

ಕೊರೊನಾ ಸೋಂಕಿತ ಕುಟುಂಬಗಳಿಗೆ ಔಷಧಿ ಕಿಟ್ ಹಸ್ತಾಂತರ..

ಮೈಸೂರು(ಪಿರಿಯಾಪಟ್ಟಣ):ಗ್ರಾಮಾAತರ ಪ್ರದೇಶದ ಕೊರೊನಾ ಸೋಂಕಿತ ವ್ಯಕ್ತಿ ಹಾಗೂ ಅವರ ಕುಟುಂಬಗಳಿಗೆ  ಔಷಧಿ ಕಿಟ್ ವಿತರಿಸಿ ಆತ್ಮಸ್ಥೈರ್ಯ ತುಂಬಲು ಗ್ರಾಮ ಪಂಚಾಯಿತಿವಾರು ತೆರಳುತ್ತಿದ್ದೇನೆ ಎಂದು ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ತಿಳಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಪುರಸಭಾ ಕಚೇರಿಯಲ್ಲಿ ಸಾರ್ವಜನಿಕರಿಗೆ ವಿತರಿಸಲು ಪುರಸಭಾ ಸಾಮಾನ್ಯ ನಿಧಿಯಿಂದ ಸುಮಾರು ೩ ಲಕ್ಷ ರೂಪಾಯಿ ವೆಚ್ಚದ ಔಷಧಿ ಕಿಟ್‌ಗಳನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿದ ಅವರು, ಕೊರೊನಾ ಸಂಕಷ್ಟ ಕಾಲದಲ್ಲಿ ಪಕ್ಷಭೇದ ಮರೆತು ರಾಜಕೀಯ ಮಾಡದೆ ಈ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇನ್ನು ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ,ಕೊರೊನಾ ರೋಗವನ್ನು ನಿರ್ಮೂಲ ಮಾಡಲು ಸರ್ಕಾರದ ಜೊತೆ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು. ಇದೇ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್ ಮಾತನಾಡಿ, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರು ಪಂಚ ಸೂತ್ರಗಳನ್ನು ಪಾಲಿಸಿದರೆ ಯಾವುದೇ ರೋಗ ಬಾಧಿಸುವುದಿಲ್ಲ ಆ ನಿಟ್ಟಿನಲ್ಲಿ ಪುರಸಭೆಯ…

Read More

ಲಿಂಗಸುಗೂರು ಕೆನರಾ ಬ್ಯಾಂಕ್ ಸೀಲ್‌ಡೌನ್..

ಲಿಂಗಸೂಗೂರು(ರಾಯಚೂರು):ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಕೋವಿಡ್-೧೯ ಪ್ರಕರಣ ವರದಿಯಾದ ಬಳಿಕ ಕೆನರಾ ಬ್ಯಾಂಕ್‌ನ ಸೀಲ್‌ಡೌನ್ ಮಾಡಲಾಗಿದ್ದು,ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಲಾಗಿದೆ. ಕೇರಳ ಮೂಲದ ವ್ಯಕ್ತಿ ನಿರಂತರವಾಗಿ ಲಿಂಗಸುಗೂರು ಕೆನರಾ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡಿದ್ದಾರೆ.ಅಲ್ಲದೇ ಇವರ ಪ್ರಾಥಮಿಕ ಸಂಪರ್ಕವನ್ನು ಬ್ಯಾಂಕ್ ಸಿಬ್ಬಂದಿ ಹೊಂದಿದ್ದು, ಪರಿಣಾಮ ನಾಲ್ಕು ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಿ, ಬ್ಯಾಂಕ್‌ನ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಇನ್ನು ಕೇರಳ ಸೋಂಕಿತ ಮತ್ತು ಸರ್ಜಾಪುರ ಯುವಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹೀಗಾಗಿ ಇವರಿಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯನ್ನೂ ಕ್ವಾರಂಟೈನ್ ಮಾಡಿ ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ. ಇದೇ ವೇಳೆ ಸಾರ್ವಜನಿಕ ಆಸ್ಪತ್ರೆಗೆ ನಿತ್ಯ ೪೦೦ ರಿಂದ ೫೦೦ ಹೊರ ರೋಗಿಗಳು ಬರುತ್ತಿದ್ದರು. ಇದೀಗ ತುರ್ತು ಚಿಕಿತ್ಸೆ ಹೊರತು ಪಡಿಸಿ ಉಳಿದ ಸೇವೆ ಸ್ಥಗಿತಗೊಳಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿಯನ್ನು…

Read More

ಧಾರವಾಡದಲ್ಲಿ ಎರಡು ಕೊರೊನಾ ಕೇಸ್

ಧಾರವಾಡ : ಧಾರವಾಡದ ಜಿಲ್ಲೆಯಲ್ಲಿಂದು ಎರಡು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಪಿ-೩೪೩೬(೪೮ ವರ್ಷ,ಪುರುಷ) ಹಾಗೂ ಪಿ-೩೪೩೭ (೬೬ ವರ್ಷ,ಮಹಿಳೆ)ಈ ಇಬ್ಬರೂ ರಾಜಸ್ಥಾನ ರಾಜ್ಯದ ಅಜ್ಮೀರ್‌ನಿಂದ ಹಿಂದಿರುಗಿರುವ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.ಸಾAಸ್ಥಿಕ ಕ್ವಾರಂಟೈನ್‌ನಲ್ಲಿದ್ದರು ಎಂದು ತಿಳಿಸಿದ್ದಾರೆ. ಇನ್ನು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ೫೦ಕ್ಕೆ ಏರಿಕೆಯಾಗಿದೆ.ಈಗಾಗಲೇ ೨೬ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಉಳಿದವರು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Read More

ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ..

ಶಿರಾ(ತುಮಕೂರು): ಜಿಲ್ಲೆಯ ಶಿರಾ ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಸಾಲದ ಮೊತ್ತ ಜಮಾ ಮಾಡಿರುವ ಆದೇಶ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು. ಅಂದ ಹಾಗೇ ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ನಿರ್ದೇಶಕ ಜಿ.ಎಸ್.ರವಿ ಬೀದಿ ಬದಿ ವ್ಯಾಪಾರಿಗಳಿಗೆ ನೇರವಾಗಿ ಅವರ ಶೂನ್ಯ ಉಳಿತಾಯ ಖಾತೆಗೆ ಸಾಲದ ಮೊತ್ತ ಜಮಾ ಮಾಡಿರುವ ಆದೇಶ ಪತ್ರಗಳನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು,ಲಾಕ್‌ಡೌನ್‌ನಿಂದ ಬೀದಿ ಬದಿ ವ್ಯಾಪಾರಸ್ಥರು ಆರ್ಥಿಕ ಮುಗ್ಗಟ್ಟಿನಿಂದ ಕಷ್ಟಪಡುತ್ತಿದ್ದಾರೆ.ಜೀವನೋಪಾಯಕ್ಕೆ ಅನ್ಯ ಮಾರ್ಗವಿಲ್ಲದೆ ಖಾಸಗಿ ಲೇವಾದೇವಿ ಸಂಸ್ಥೆಯ ಶೋಷಣೆಗೆ ಒಳಗಾಗುತ್ತಿರುವುದನ್ನು ಅರಿತು ಬ್ಯಾಂಕ್ ಆಡಳಿತ ಮಂಡಳಿ ಈ ವ್ಯಾಪಾರಸ್ಥರಿಗೆ ಸಾಲ ನೀಡಲು ತೀರ್ಮಾನ ಕೈಗೊಂಡಿದೆ ಎಂದರು. ಯಾವುದೇ ರೀತಿಯ ಆಧಾರ ಇಲ್ಲದೇ ಬಡವರ ಬಂಧು ಯೋಜನೆಯಡಿ ಸಾಲ ನೀಡಲಾಗುವುದು.ಜಿಲ್ಲೆಯ ೧೦ತಾಲ್ಲೂಕುಗಳನಿರ್ದೇಶಕರು ತಮ್ಮ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ತಾವುಗಳೇ ಸಾಲದ ಚೆಕ್ ವಿತರಿಸಬಹುದು.ಇದಕ್ಕೆ ಅಧ್ಯಕ್ಷರನ್ನು ಕಾಯುವ ಅಗತ್ಯವಿಲ್ಲ ಎಂದು ಹೇಳಿದರು. ಈ ವೇಳೆ…

Read More

ರಾಜ್ಯದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಯಶ್ವಸಿಯಾದ ಪ್ಲಾಸ್ಮಾ ಥೆರಪಿ ಚಿಕಿತ್ಸೆ..

ಹುಬ್ಬಳ್ಳಿ : ಜಗತ್ತನ್ನೇ ತಲ್ಲಣಗೊಳಿಸಿದ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕಿಮ್ಸ್ ಮತ್ತೊಂದು ಸಾಧನೆ ಮಾಡಿದೆ.ಕರ್ನಾಟಕ ಭಾಗದ ಸಂಜೀವಿನಿ ಎಂದೇ ಖ್ಯಾತಿ ಪಡೆದ ಕಿಮ್ಸ್ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಕೊವೀಡ್ ಸೊಂಕಿತರನ್ನು ಗುಣಮುಖರನ್ನಾಗಿ ಮಾಡಲು ಪಾಸ್ಮಾ ಥೆರಪಿ ಚಿಕಿತ್ಸೆ ಪ್ರಯೋಗ ಮಾಡಲಾಗಿತ್ತು.ಆದರೆ ಹಲವೆಡೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ವಿಫಲವಾದ ನಂತರ ಇದೀಗ ರಾಜ್ಯದಲ್ಲಿ ಮೊದಲ ಭಾರಿಗೆ ಹುಬ್ಬಳ್ಳಿಯಲ್ಲಿ ಪಾಸ್ಮಾ ಥೆರಪಿ ಚಿಕಿತ್ಸೆ ಯಶ್ವಸಿಯಾಗಿದೆ. ಹುಬ್ಬಳ್ಳಿಯ ಕೋವಿಡ ಸೊಂಕಿತ ಪಿ-೩೬೩ರಿಂದ ಪ್ಲಾಸ್ಮಾ ಡೋನೇಟ್ ಪಡೆದು ಮುಂಬೈನಿAದ ರಾಜ್ಯಕ್ಕೆ ವಾಪಸ್ ಆಗಿದ್ದ ಪಿ-೨೭೧೦ಗೆ ಪ್ಲಾಸ್ಮಾ ಥೆರಪಿ ಮಾಡಿ ವೈದ್ಯರ ತಂಡ ಯಶಸ್ಸು ಸಾಧಿಸಿದೆ.ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರ ಈ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಿಮ್ಸ್ನಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ನೀಡಲು ಐಸಿಎಂಆರ್ ನಿಂದ ಅನುಮತಿ ನೀಡಿದ್ದು,ರಾಜ್ಯದಲ್ಲಿ ಹುಬ್ಬಳ್ಳಿಯ ವೈದ್ಯಕೀಯ ಶಿಕ್ಷಣ…

Read More

ಬಾದಾಮಿಯತ್ತ ಮುಖ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ..

ಬಾಗಲಕೋಟೆ: ನಾಳೆ ಹಾಗೂ ನಾಡಿದ್ದು ಎರಡು ದಿನಗಳ ಕಾಲ ವಿಪಕ್ಷ ನಾಯಕ ಹಾಗೂ ಶಾಸಕ ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆಯ ಸ್ವಕ್ಷೇತ್ರ ಬಾದಾಮಿ ಪ್ರವಾಸ ಕೈಗೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದೆ. ಅಂದ ಹಾಗೇ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಬಾದಾಮಿ ಕ್ಷೇತ್ರ ರಾಜಕೀಯ ಪುರ್ನಜನ್ಮ ನೀಡಿತ್ತು.ಆದರೆ,ಅವರು ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಇಲ್ಲಿನ ರೈತರ, ಬಡ ಕೂಲಿ ಕಾರ್ಮಿಕರ ಮತ್ತು ನೆರೆ ಸಂತ್ರಸ್ತರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿರಲಿಲ್ಲ. ಅಲ್ಲದೆ,ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ಮೂರು ತಿಂಗಳಾದರೂ ಸ್ವಕ್ಷೇತ್ರಕ್ಕೆ ಆಗಮಿಸಿರಲಿಲ್ಲ.ಹೀಗಾಗಿ ಜೂ.೩ ಹಾಗೂ ೪ ರಂದು ಬಾಗಲಕೋಟೆ ಜಿಲ್ಲೆಯ ಸ್ವಕ್ಷೇತ್ರ ಬಾದಾಮಿ ಪ್ರವಾಸ ಕೈಗೊಳ್ಳಲಿದ್ದಾರೆ. ಇದಲ್ಲದೆ, ಸಿದ್ದರಾಮಯ್ಯ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಜನರ ಸಮಸ್ಯೆಗೆ ಖುದ್ದಾಗಿ ಸ್ಪಂದಿಸಿರಲಿಲ್ಲ.ಬದಲಿಗೆ ಇಲ್ಲಿನ ರೈತರ, ಬಡ ಕೂಲಿ ಕಾರ್ಮಿಕರ ಮತ್ತು ನೆರೆ ಸಂತ್ರಸ್ತರಿಗೆ ತಮ್ಮ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಮೂಲಕ…

Read More

ಸ್ವಂತ ಖರ್ಚಿನಲ್ಲಿ ಆಹಾರ ಕಿಟ್ ನೀಡಿದ ಹುಬ್ಬಳ್ಳಿ ಇಂಜನಿಯರ್..

ಹುಬ್ಬಳ್ಳಿ: ಲಾಕ್ ಡೌನ್ ಸಂದರ್ಭದಲ್ಲಿ ನಿರ್ಗತಿಕರು ಹಾಗೂ ಬಡವರಿಗೆ ಅನಕೂಲವಾಗಲಿ ಎಂದು ಜಿಲ್ಲಾಡಳಿತದ ಮುಖಾಂತರ ಹುಬ್ಬಳ್ಳಿಯ ಇಂಜನಿಯರ್ ಸಂಜೀವ್ ಜೋಶಿ ತಮ್ಮ ಸ್ವಂತ ಖರ್ಚಿನಲ್ಲಿ ೨೫ಕ್ಕೂ ಹೆಚ್ಚು ಆಹಾರ ಕಿಟ್ ವಿತರಣೆ ಮಾಡಿದರು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವನ್ನೇ ಲಾಕ್ ಡೌನ್ ಮಾಡಲಾಗಿತ್ತು.ಹೀಗಾಗಿ ಹಲವಾರು ವರ್ಗದ ಜನರು ಸಂಕಷ್ಟ ಸಿಲುಕಿದ್ದು,ಅವರಿಗೆ ಅನೂಕೂಲವಾಗಲಿ ಎಂದು ಅಕ್ಕಿ,ಎಣ್ಣೆ,ಸಕ್ಕರೆ ಹಾಗೂ ದಿನ ನಿತ್ಯ ಉಪಯೋಗಿಸುವ ದಿನಸಿ ವಸ್ತುಗಳನ್ನು ತಹಶೀಲ್ದಾರ್ ಮುಖಾಂತರ ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಶಶಿಧರ್ ಮಾಡ್ಯಾಳ, ಎಫ್‌ಡಿಸಿ ಹುಕ್ಕೇರಿ,ಮಕಾನದಾರ,ಸಂಜೀವ್ ಜೋಶಿ ಹಾಗೂ ಇನ್ನಿತರರು ಹಾಜರಿದ್ದರು. ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Read More

ಕೊರೊನಾಗಿಂತ ಮೊದಲೇ ಬೇರೆ ರೋಗದಿಂದ ನಾವ್ ಸಾಯೋದು ಗ್ಯಾರಂಟಿ..!

ತಿಪಟೂರು(ತುಮಕೂರು): ಕೊರೊನಾ ರೋಗದ ಹಾವಳಿಯಿಂದ ಅಂತರ ಜಿಲ್ಲೆ ಅಂತರರಾಜ್ಯದಿAದ ಬಂದAತಹ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಇಲ್ಲಿ ಸಮರ್ಪಕ ಆಹಾರ, ನೀರು ಮತ್ತು ಇತರೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ನಾವು ಇನ್ನೂ ಇಲ್ಲಿಯೇ ಇದ್ದರೆ ಇನ್ನಿತರೆ ಕಾಯಿಲೆಗಳೂ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದು ನಗರದ ಬಲಿಜ ಸಮಾಜದ ವಿದ್ಯಾರ್ಥಿನಿಲಯದಲ್ಲಿ ಕ್ಯಾರಂಟೈನ್‌ಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇAದು ಬೆಳಗ್ಗೆ ಕೊಟ್ಟ ಚಿತ್ರಾನ್ನದಲ್ಲಿ ಅಕ್ಕಿಯೂ ಬೆಂದೇ ಇರಲಿಲ್ಲ, ಇನ್ನು ಇವರು ಕೊಡುವ ಚಪಾತಿ ಅರ್ಧಬೆಂದಿದ್ದರೆ ಉಳಿದ್ದು ಬೆಂದೇ ಇರುವುದಿಲ್ಲ ನಿಷೇದಿತ ಪ್ಲಾಸ್ಟಿಕ್ ಬಳಸಿದರೆ ರಸ್ತೆಬದಿಯ ಬಡವರ ಹೋಟೆಲ್‌ಗಳಿಗೆ ದಂಡ ವಿಧಿಸುವ ಪ್ರಾಮಾಣಿಕ ಅಧಿಕಾರಿಗಳು ಇಂದೇಕೆ ಕಳಪೆಗುಣಮಟ್ಟದ ಪ್ಲಾಸ್ಟಿಕ್‌ನಿಂದ ಪೊಟ್ಟಣ ಕಟ್ಟಿರುವ ಆಹಾರ ತಂದು ನೀಡುತ್ತಾರೆಂದು ಪ್ರಶ್ನಿಸಿದ್ದಾರೆ. ಅಲ್ಲದೆ,ಇಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಸೂಕ್ತವಾದ ಕುಡಿಯುವ ನೀರು, ಶೌಚಾಲಯವಿಲ್ಲ ಇನ್ನೂ ಶೌಚಾಲಯಗಳನ್ನು ಸ್ವಚ್ಚಮಾಡಿ ಎಷ್ಟೋ ದಿನಗಳು ಕಳೆದಿದ್ದರೂ ಅಧಿಕಾರಿಗಳು ಮಾತ್ರ…

Read More