ಬಳ್ಳಾರಿ: ಭತ್ತದ ಕಣಜ ಕಲಾವಿದರ ಬಿಡು ಎಂದು ಹೆಸರು ವಾಸಿಯಾಗಿರುವ ಬಳ್ಳಾರಿ ಜಿಲ್ಲೆಯ ಸಿರಾಗುಪ್ಪ ತಾಲ್ಲೂಕಿನ ತೆಕ್ಕಲ ಕೋಟೆಯಲ್ಲಿ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಗಿರಿಜನ ಉಪಯೋಜನೆಯ ಅಡಿಯಲ್ಲಿ ತೆಕ್ಕಲಕೋಟೆ ಗ್ರಾಮದ ಪರಿಶಿಷ್ಟ ಪಂಗಡದ ರೈತರುಗಳಿಗೆ ಹಾಗೂ ಇತರರ ಜಮೀನುಗಳಿಗೆ ಅಂದಾಜು 100.00 ಲಕ್ಷಗಳಲ್ಲಿ ಏತ ನೀರಾವರಿ ಯೋಜನೆ ಕಲ್ಪಿಸುವ ಕಾಮಗಾರಿಯನ್ನು ಕಲ್ಪಿಸಲಾಯಿತು. ವರದಿ- ಡಿ.ಅಲಂ ಭಾಷಾ ಎಕ್ಸ್ ಪ್ರೆಸ್ ಟಿವಿ ಸಿರಾಗುಪ್ಪ
Read MoreCategory: ಬಳ್ಳಾರಿ
ರಾಜ್ಯ ಸರ್ಕಾರದ ವಿರುದ್ದ “ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಮಿತಿ”ಯಿಂದ ಆಕ್ಷೇಪ..!
ಬಳ್ಳಾರಿ: ಕರ್ನಾಟಕ ರಾಜ್ಯ ಸರ್ಕಾರ ಮರಾಠ ಸಮುದಾಯಕ್ಕೆ 50 ಕೋಟಿ ರೂಪಾಯಿಗಳು ಮೀಸಲಿಟ್ಟಿರುವುದು ಖಂಡನೀಯ ಹಾಗೂ ಜನಾ ಸಮಾನ್ಯರಿಗೆ ವಿರುದ್ದದ್ದಾಗಿದೆ, ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದಾಗಿ ಎಷ್ಟೋ ಜನ ಮನೆ ಮಠಗಳಿಲ್ಲದೇ ಬೀದಿಗೆ ಬಿದ್ದರೂ ಸರ್ಕಾರ ಆ ಕಡೆ ತಿರುಗಿಯೂ ನೋಡಲಿಲ್ಲ, ರೈತರು ಬೆಳೆದ ಬೇಳೆ ಕೈಗೆ ಸಿಗದೇ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ರೈತರು ಬೆಳೆ ಪರಿಹಾರಕ್ಕಾಗಿ ಮತ್ತು ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರು ಪುನರ್ವಸತಿಗಾಗಿ ಬೇಡಿಕೆ ಇಟ್ಟರೂ ಸರಕಾರ ಕರೋನ ನೆಪ ಹೇಳಿಕೊಂಡು ಬಜೆಟ್ ಇಲ್ಲ ಎಂದು ಸಬೂಬು ನೀಡಿತ್ತು. ಈಗ ಇದ್ದಕ್ಕಿದ್ದಂತೆ ಮರಾಠ ಸಮುದಾಯಕ್ಕೆ 50 ಕೋಟಿ ರುಪಾಯಿ ಎಲ್ಲಿಂದ ಬಂತು ಎಂದು ಸಂಸ್ಥಾಪಕ ಅಧ್ಯಕ್ಷರಾದ ಪಿ.ಎಂ ಈಶ್ವರಪ್ಪ ಹಾಗೂ ಯುವ ಘಟಕದ ಅಧ್ಯಕ್ಷರಾದ ವೆಂಕಟೇಶ ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ಆ ಹಣವನ್ನು ಉತ್ತರ ಕರ್ನಾಟಕದ ನೆರೆ ಹಾವಳಿಗೆ ತುತ್ತಾದ…
Read More“ಬಳ್ಳಾರಿ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ವಿರುದ್ಧ AIDSO ವತಿಯಿಂದ ಪ್ರತಿಭಟನೆ”..!
ಬಳ್ಳಾರಿ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ 5ನೇ ಸೆಮಿಸ್ಟರ್ ನಲ್ಲಿ ತೇರ್ಗಡೆಯಾಗದ ವಿಷಯಗಳನ್ನು 6 ನೇ ಸೆಮಿಸ್ಟರ್ ನಲ್ಲಿ ಬರೆಯಲು ಅವಕಾಶ ನೀಡಲಾಗಿದ್ದು, ಮರು ಮೌಲ್ಯಮಾಪನ/ಫೋಟೊ ಕಾಪಿ ತೆಗೆಸಲು ಅವಕಾಶ ನೀಡದಿರುವುದನ್ನು ಪ್ರಶ್ನಿಸಿ, ಆ ಅವಕಾಶವನ್ನು ವಿವಿಯು ಕಲ್ಪಿಸಬೇಕೆಂದು ಪ್ರತಿಭಟನೆ ನಡೆಸಲಾಯಿತು. ವಿಶ್ವ ವಿದ್ಯಾಲಯದ ಆಡಳಿತ ಕುಲಸಚಿವರಾದ ಶ್ರೀಮತಿ ಡಾ.ಸಿ.ತುಳಸಿಮಾಲರವರು ಮನವಿ ಪತ್ರ ಸ್ವೀಕರಿಸಿದರು. ವಿದ್ಯಾರ್ಥಿಗಳ ಬೇಡಿಕೆಯು ಸರಿಯಾದದ್ದು ಮಾನ್ಯ ಕುಲಪತಿಗಳು ಹಾಗು ಪರಿಕ್ಷಾಂಗ ಕುಲಸಚಿವರೊಂದಿಗೆ ಚರ್ಚಿಸಿ ತಿಳಿಸವಾಗುವುದೆಂದು ಹೇಳಿದರು. ಈ ಪ್ರತಿಭಟನೆಯಲ್ಲಿ AIDSO ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಸುರೇಶ್.ಜಿ, ಉಪಧ್ಯಕ್ಷರಾದ ಗುರಳ್ಳಿ.ರಾಜ, ಜಿಲ್ಲಾ. ಕಾರ್ಯದರ್ಶಿ ರವಿಕಿರಣ್.ಜೆ.ಪಿ ಹಾಗು ಜಿಲ್ಲಾ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವರದಿ- ವೆಂಕಟೇಶ್. ಯು ಎಕ್ಸ್ ಪ್ರೆಸ್ ಟಿವಿ ಬಳ್ಳಾರಿ
Read Moreಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಪತ್ರ ಸಲ್ಲಿಕೆ..!
ಬಳ್ಳಾರಿ- ಬಳ್ಳಾರಿ ತಾಲೂಕು ಕಛೇರಿ ಆವರಣದಲ್ಲಿ ಕಂದಾಯ ಇಲಾಖೆ, ಉದ್ಯೋಗ ವಿನಿಮಯ ಕೇಂದ್ರ, ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ, ಗ್ರಾಮಾಂತರ ಪೊಲೀಸ್ ಠಾಣೆ, ಬ್ರೂಸ್ ಪೇಟೆ ಪೋಲಿಸ್ ಠಾಣೆ, ಜಂಟಿ ಕೃಷಿ ನಿರ್ದೇಶಕರ ಕಛೇರಿ, ತೋಟಗಾರಿಕೆ ಇಲಾಖೆಗಳಿವೆ. ಕುಡಿಯುವ ನೀರು, ಶೌಚಾಲಯ, ಆಸನ ವ್ಯವಸ್ಥೆ, ಮತ್ತು ವಾಹನ ನಿಲುಗಡೆ ಸ್ಥಳ ಇರುವುದಿಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿ ಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ತಹಶಿಲ್ದಾರರಾದ ನಾಗರಾಜ.ಯು ಅವರು ಮಾತನಾಡಿ ಆದಷ್ಟು ಬೇಗನೇ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತವೆ ಎಂದು ಮನವಿ ಪತ್ರವನ್ನು ಸ್ವೀಕರಿಸಿದರು. ಮಾಹಾನಗರ ಪಾಲಿಕೆಯ ಕಛೇರಿ ನಿರ್ವಾಹಕರಾದ ಗೋವಿಂದ ಬಾಬು ಅವರಿಗೂ ಮನವಿ ಪತ್ರ ಸಲ್ಲಿಸಲಾಯಿತು. ಆದಷ್ಟು ಬೇಗನೇ ಈ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದೆಂದು ಸಂಸ್ಥಾಪಕ ಅಧ್ಯಕ್ಷರಾದ ಪಿ.ಎಂ ಈಶ್ವರಪ್ಪ ಹೇಳಿದರು.ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾದಶ್ರೀ ರಾಮುಲು.ಯು, ಯುವ ಘಟಕದ…
Read More“ಉತ್ತರ ಪ್ರದೇಶದ ಹತ್ರಾಸ್ ನ ಅತ್ಯಾಚಾರ ಮತ್ತು ರೈತ ವಿರೋಧಿ ಕಾಯ್ದೆಗಳ ವಿರುದ್ದ ಪ್ರತಿಭಟನೆ..!
ಬಳ್ಳಾರಿ: AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಉತ್ತರ ಪ್ರದೇಶದ ಹತ್ರಾಸ್ ನ ಅತ್ಯಾಚಾರ ಮತ್ತು ರೈತ ವಿರೋಧಿ ಕಾಯ್ದೆಗಳ ವಿರುದ್ದ ಇಂದು ಬಳ್ಳಾರಿಯಲ್ಲಿರುವ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡಲಾಯಿತು. ಅತ್ಯಾಚಾರಿಗಳಿಗೆ ಅತ್ಯುಗ್ರ ಶಿಕ್ಷೆಯಾಗಬೇಕು ಮತ್ತು ರೈತ ವಿರೋಧಿ ಕಾಯ್ದೆ ಗಳನ್ನು ಸರಕಾರ ಹಿಂಪಡೆಯಬೇಕು ಎಂದು AIDSO ಜಿಲ್ಲಾಧ್ಯಕ್ಷ ಸುರೇಶ್.ಜಿ ಮಾತನಾಡಿ ಸಂಘಟನೆಯ ಎಲ್ಲಾ ಸದಸ್ಯರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ರವಿ ಕಿರಣ್ ಮಾತನಾಡಿ ರೈತ- ಕಾರ್ಮಿಕ ಕಾಯ್ದೆ ಗಳನ್ನು ಸರ್ಕಾರ ಜಾರಿಗೆ ತರುತ್ತಿರುವುದು ಜನ ವಿರೋಧಿ ಯಾಗಿದೆ ಎಂದರು. ಸರ್ಕಾರ ಎಲ್ಲಾ ಕಾಯ್ದೆ ಗಳನ್ನು ರದ್ದು ಮಾಡಿ. ಜನಕಲ್ಯಾಣಕ್ಕೆ ಅನುಕೂಲವಾಗುವ ಕಾಯ್ದೆಗಳನ್ನು ಜಾರಿಗೆ ತರಬೇಕು. ಇದು ಹೀಗೆ ಮುಂದುವರಿದರೆ ಮುಂದಿನ ದಿನಮಾನಗಳಲ್ಲಿ ಅತ್ಯುಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರದ ವಿರುದ್ದ ಘೋಷಣೆ ಗಳನ್ನು ಕೂಗಿದರು.ಈ ಸಂದರ್ಭದಲ್ಲಿ ಜಿಲ್ಲಾ…
Read Moreಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸಲು ವಠಾರ ಸಂಚಾರ ಕಾರ್ಯಕ್ರಮ- ಬಿಇಒ ವೀರಭದ್ರಪ್ಪ..!
ಬಳ್ಳಾರಿ: ಹರಪನಹಳ್ಳಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉಚ್ಚಂಗಿದುರ್ಗ ಚಟ್ನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಠಾರ ಸಂಚಾರ-ಕೊರೊನಾ ಜಾಗೃತಿ-ಕಲಿಕಾ ಪ್ರಗತಿ ಎನ್ನುವ, ವಿನೂತನ ಕಾರ್ಯಕ್ರಮಕ್ಕೆ ಹರಪನಹಳ್ಳಿ ಬಿಇಒ ವೀರಭದ್ರಪ್ಪ ಚಾಲನೆ ನೀಡಿದರು.ಕೋವಿಡ್ 19 ಮಹಾಮಾರಿ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರವು ಮಕ್ಕಳಿರುವ ಮನೆಯ ಹತ್ತಿರ ಹೋಗಿ ಮಕ್ಕಳಿಗೆ ಪಾಠವನ್ನು ಕಲಿಸಿ ಕೊಡಬೇಕು ಎನ್ನುವ ಉದ್ದೇಶದಿಂದ ವಿದ್ಯಾಗಮ ಯೋಜನೆಯನ್ನು ಜಾರಿಗೆ ತಂದಿದ್ದು, ಸುಮಾರು 17 ತಂಡಗಳನ್ನು ರಚನೆ ಮಾಡಿ, ವಠಾರ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅನುಸರಿಸಬೇಕಾದ ನಿಯಮಗಳು,ಹಾಗೂ ಮಕ್ಕಳಿಗೆ ಕೊರೊನ ರೋಗ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹರಪನಹಳ್ಳಿ ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಜಾಗೃತಿ ಮೂಡಿಸಲಾಯಿತು. ವರದಿ. ಮೆಹೆಬೂಬ್ ಸಬ್ ಎಕ್ಸ್ ಪ್ರೆಸ್ ಟಿವಿ ಹರಪನಹಳ್ಳಿ
Read Moreಹರಪನಹಳ್ಳಿ ಜಿಲ್ಲಾ ಘೋಷಣೆಗೆ ಒತ್ತಾಯಿಸಿ ರಸ್ತೆ ತಡೆ ಚಳುವಳಿ..!
ಬಳ್ಳಾರಿ: ಹರಪನಹಳ್ಳಿ ಜಿಲ್ಲಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದು ಹರಪನಹಳ್ಳಿ ಪ್ರವಾಸಿ ಮಂದಿರ ವೃತ್ತದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲದವರೆಗೆ ರಾಜ್ಯ ಹೆದ್ದಾರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯಗಳಿಗೆ ಪ್ರಥಮ ಆದ್ಯತೆ ಅನ್ವಯ ಹರಪನಹಳ್ಳಿ ನೂತನ ಜಿಲ್ಲೆಯಾಗಿ ಘೋಷಣೆಯಗಬೇಕು. ಎಂದು ಒತ್ತಾಹಿಸಿದರು. ಬಳ್ಳಾರಿಯಿಂದ ಹರಪನಹಳ್ಳಿ ದೂರವಾಗಲಿದ್ದು 25-30, ಕಿ.ಮಿ. ವ್ಯಾಪ್ತಿಯೊಳಗಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ತಾಲೂಕು ಒಳಗೊಂಡ ಹರಪನಹಳ್ಳಿನ್ನು ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಪ್ರತಿಭಟನಾ ನಿರತರು ಆಗ್ರಹಿಸಿದರು.ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪ ರವರಿಗೆ ಶಿರಸ್ತೇದಾರರಾದ ವಿರುಪಾಕ್ಷ ಶೆಟ್ಟಿ ಅವರ ಮುಖಾಂತರ ಮನವಿ ಪತ್ರ ನೀಡಿದರು. ಈ ಸಂದರ್ಭದಲ್ಲಿ ಹೊಸಳ್ಳಿ ಮಲ್ಲೇಶ್, ಹೆಚ್. ವೆಂಕಟೇಶ್, ಡಿ.ಎಸ್.ಎಸ್ ಮುಖಂಡರಾದ ಮೈಲಪ್ಪ, ಓ.ಮಹಾಂತೇಶ್, ಅಂಬೇಡ್ಕರ್ ತಾಲೂಕ ಅಧ್ಯಕ್ಷರಾದ ನಿಚ್ಚವನ ಹಳ್ಳಿ ಭೀಮಪ್ಪ,ಕಾಲದವರೆಗೆ ರಸ್ತೆತಡೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವರದಿ-ಮೆಹಬೂಬ್ ಸಾಬ್ ಎಕ್ಸ್ ಪ್ರೆಸ್…
Read Moreಹತ್ರಾಸ್ ನ ವಾಲ್ಮೀಕಿ ಯುವತಿಯ ಕೊಲೆ ಖಂಡಿಸಿ ಪಂಜಿನ ಮೆರವಣಿಗೆ..!
ಬಳ್ಳಾರಿ: ಉತ್ತರ ಪ್ರದೇಶ ರಾಜ್ಯದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ಮನಿಷಾ ವಾಲ್ಮೀಕಿ ಯುವತಿಯ ಅತ್ಯಾಚಾರ ಬರ್ಬರ ಕೊಲೆ ಮತ್ತು ಈ ಅವಮಾನವೀಯ ಕೃತ್ಯ ವಿರೋಧಿಸಿ ನೊಂದ ಕುಟುಂಬದ ಭೇಟಿಗೆ ತೆರಳಿದ್ದ ಕಾಂಗ್ರೆಸ್ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ , ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರನ್ನು ತಡೆದ ಉತ್ತರ ಪ್ರದೇಶ ಪೊಲೀಸರ ಕ್ರಮ ಖಂಡಿಸಿ ಶ್ರೀಮತಿ ಎಂಪಿ ವೀಣಾ ಮಹಾಂತೇಶ್ ನೇತೃತ್ವದಲ್ಲಿ ಇಂದು ಸಂಜೆ ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹುತ್ ಪಂಜಿನ ಮೆರವಣಿಗೆ ,ಪ್ರತಿಭಟನೆ ನಡೆಸಿದರು. ಉತ್ತರ ಪ್ರದೇಶದ #ಹತ್ರಾಸ್ ಜಿಲ್ಲೆಯಲ್ಲಿ ಹಾಡು ಹಗಲೇ 19 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂಥದ್ದು. ಆಸ್ಪತ್ರೆಯಲ್ಲಿ ಮೃತಪಟ್ಟ ಬಾಲಕಿಯ ಪಾಲಕರ ಅನುಮತಿ ಪಡೆಯದೆ ಪೊಲೀಸರೇ ಗೌಪ್ಯವಾಗಿ ಅನುಮಾನಕ್ಕೆಡೆ ಮಾಡಿಕೊಡುವಂತೆ ಅಂತ್ಯಸಂಸ್ಕಾರ ನಡೆಸಿರುವುದರ ಹಿಂದಿನ ಉದ್ದೇಶವೇನು. ನಿಜಕ್ಕೂ ಘೋರ, ಅಮಾನವೀಯ.ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಒಳಗಾಗಿ…
Read Moreದೇವರ ದರ್ಶನಕ್ಕೆ ಮುಗಿಬಿದ್ದ ಜನ..ಸೋಂಕು ಹರಡುವ ಭೀತಿಯಲ್ಲಿ ಜನಗಳನ್ನು ವಾಪಾಸ್ಸ್ ಕಳುಹಿಸಿದ ಆಡಳಿತ ಮಂಡಳಿ..!
ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿರುವ ಉಚ್ಚoಗೇಮ್ಮನ ದೇವಸ್ಥಾನವನ್ನು ಸರ್ಕಾರದ ಆದೇಶದಂತೆ ಕೋವಿಡ್-19 ನಿಂದಾಗಿ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಲಾಕ್ ಡೌನ್ ತರವಿನ ನಂತರ ಇಂದು ಧಾರ್ಮಿಕ ಪ್ರಸಿದ್ಧ ಉಚ್ಚoಗಿ ದುರ್ಗದಲ್ಲಿ ನೂಲು ಹುಣ್ಣಿಮೆ ಪ್ರಯುಕ್ತ ಉಚ್ಚoಗೇಮ್ಮನ ದೇವಸ್ಥಾನವನ್ನು ಓಪನ್ ಮಾಡಿದ್ದು, ದೇವರ ದರ್ಶನ ಪಡೆಯಲು ಬೆಳಗ್ಗೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕು ಹರಡಬಹುದು ಎಂದು ಎಚ್ಚೇತ್ತ ತಾಲ್ಲೂಕು ಆಡಳಿತ ಮಂಡಳಿ ಮತ್ತೆ ಇಂದಿನಿಂದ ದೇವರ ದರ್ಶನವನ್ನು ನಿಷೇಧ ಮಾಡಿದ್ದು, ಗ್ರಾಮದಲ್ಲಿರುವ ಹಾಲಮ್ಮ, ಪಾದಗಟ್ಟೆ, ಗುಡ್ಡದ ಮೇಲಿನ ಉಚ್ಚoಗೇಮ್ಮ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ. ಸಿಪಿಐ ಕುಮಾರ್ ಹಾಗೂ ಅರಸೀಕೆರೆ ಸಬ್ ಇನ್ಸ್ಪೆಕ್ಟರ್ ಕಿರಣ್ ಕುಮಾರ್, ಮುಜುರಾಯಿ ಇಲಾಖೆ ಸಿಬ್ಬಂದಿಗಳು ಗ್ರಾಮದಲ್ಲಿ ಭಕ್ತರು ಗುಂಪು ಸೇರದಂತೆ ಭಕ್ತರನ್ನು ತಡೆದು ವಾಪಸ್ಸ್ ಕಳುಹಿಸುತ್ತಿದ್ದು, ದೇವಸ್ಥಾನಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ನೀಡದ ಕಾರಣ ಗ್ರಾಮದ ಹೊರಗೆ ಅಲ್ಲಲ್ಲಿ…
Read Moreಸಾಮಾನ್ಯ ಖಾಯಿಲೆಗೂ ವೆಂಟಿಲೇಟರ್ ಕೊರತೆ.. ಕೊರೊನಾ ವಾರಿಯಾರ್ ಸಾವು..!
ಬಳ್ಳಾರಿ: ಇಷ್ಟು ದಿನ ಕೊರೊನಾ ಸೊಂಕಿನಿಂದ ಬಳಲುತ್ತಿದ್ದವರಿಗೆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಿಗ್ತಾಯಿಲ್ಲ ಅಂತ ಕೇಳ್ತಾಯಿದ್ವಿ, ಆದರೆ ಇದೀಗ ಸಾಮಾನ್ಯ ಖಾಯಿಲೆಗೂ ವೆಂಟಿಲೇಟರ್, ಬೆಡ್ ಸಿಗದಂತಾಗಿದೆ. ನಿನ್ನೆ ಇದ್ದಕ್ಕಿದಂತೆ ಕೊರೊನಾ ವಾರಿಯರ್ ಮನೆ ಸರ್ವೇ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾಋಎ. ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೇ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಹಾಗೂ ಬೆಡ್ ನ ಕೊರತೆ ಇದ್ದಿದ್ದರಿಂದ ವ್ಯಕ್ತಿ ಬಳ್ಳಾರಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸ್ವತಃ ಬಳ್ಳಾರಿ ಡಿಹೆಚ್ಒ ಡಾ.ಜನಾರ್ದನ ಸ್ಪಷ್ಟ ಪಡಿಸಿದ್ದು ಕೂಡಲೇ ಸರ್ಕಾರ ಇದರ ಬಗ್ಗೆ ಮುತುವರ್ಜಿವಹಿಸಬೇಕೆಂದು ತಿಳಿಸಿದ್ದಾರೆ. ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read More