ಬೂದಿಹಾಳ ಮರ್ಡರ್ ಗೆ ಸಿಕ್ತು ಬಿಗ್ ಟ್ವೀಸ್ಟ್..!

ಮೇಲುಜಾತಿ,ಕೀಳುಜಾತಿ ಪಿಡುಗು ಇನ್ನು ಆಧುನಿಕ ಯುಗದಲ್ಲೂ ಜೀವಂತ ಇದೆ ಎನ್ನುವುದಕ್ಕೆ ತಾಜಾ ಉದಾಹರಣೆಯೊಂದು ಸಿಂದಗಿ ಮರ್ಡರ್ ಕೇಸ್ ನಲ್ಲಿ ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಯ ಸಿಂದಗಿ ಪಟ್ಟಣದ ಬೂದಿಹಾಳ ಗ್ರಾಮದಲ್ಲಿ ಅನಿಲ್ ಇಂಗಳಗಿಯನ್ನು ಇಬ್ಬರು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ರು. ಆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಬೂದಿಹಾಳ ಗ್ರಾಮದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದ ಕಟ್ಟೆಯ ಮೇಲೆ ಅನಿಲ್ ಇಂಗಳಗಿ ಕುಳಿತ್ತಿದ್ದಕ್ಕೆ ಸಿದ್ದು ಬಿರಾದಾರ ಜಗಳ ಮಾಡಿದ್ದಾರೆ. ಅದೇ ಕಾರಣಕ್ಕೆ ಸಿದ್ದು ಬಿರಾದಾರ ಹಾಗೂ ಸಂತೋಷ ಹಿರ್ಲಾಕುಂಡ ಸೇರಿಕೊಂಡು ಅನಿಲ್ ಕಣ್ಣಿಗೆ ಖಾರದ ಪುಡ್ಡಿ ಎರಚಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಮೃತನ ತಂದೇ ಶರಣಪ್ಪ ಇಂಗಳಗಿ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ..ಇನ್ನು ಕೊಲೆಗೈದಿರುವ ಘಟನಾ ಸ್ಥಳಕ್ಕೆ ಎಸ್ಪಿ ಅಗರವಾಲ್ ಭೇಟಿ ನೀಡಿ ಪರಿಶೀಲನೆ ಬಳಿಕ ಮಾತಾನಾಡಿದ ಅವರು, ಹತ್ಯೆಗೈದಿರುವ ಆರೋಪಿಗಳಿಬ್ಬರನ್ನು ಸಿಂದಗಿ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ…

ವರದಿ-ಅಂಬರೀಶ್ ಎಸ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment