Connect with us

ಮಂಡ್ಯ

ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಅಂಬೇಡ್ಕರ್ ಕ್ರಾಂತಿ ದಳ ರಾಜ್ಯಾಧ್ಯಕ್ಷ ನಾಗರಾಜು ಬಂಧನ..!

Published

on

ಮಳವಳ್ಳಿ: ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅಂಬೇಡ್ಕರ್ ಕ್ರಾಂತಿ ದಳದ ರಾಜ್ಯಾಧ್ಯಕ್ಷ ಡಾ. ಬಿ.ಆರ್ ನಾಗರಾಜುರವರನ್ನು ಬಂಧಿಸಿರುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.ಅಂಬೇಡ್ಕರ್ ಕ್ರಾಂತಿ ದಳದ ರಾಜ್ಯಾಧ್ಯಕ್ಷ ಡಾ. ಬಿ.ಆರ್ ನಾಗರಾಜು ರವರು ಇಂದು ಗ್ರಾಮಾಂತರ ಪೊಲೀಸಠಾಣೆ ತೆರಳಿ ಸಬ್ ಇನ್ಸ್ ಪೆಕ್ಟರ್ ಡಿ.ರವಿಕುಮಾರ್ ಜೊತೆ ಗಲಾಟೆ ಮಾಡಿದ್ದು, ಕರ್ತವ್ಯ ಕ್ಕೆ ಅಡ್ಡಪಡ್ಡಿದ ಹಿನ್ನಲೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಡಿ ರವಿಕುಮಾರ್ ರವರು ಮಳವಳ್ಳಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಅಂಬೇಡ್ಕರ್ ಕ್ರಾಂತಿ ದಳದ ರಾಜ್ಯಾಧ್ಯಕ್ಷ ಡಾ. ಬಿ.ಆರ್ ನಾಗರಾಜು ರವರು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಆರೋಪಿ ನಾಗರಾಜು ರವರು ಮಂಡ್ಯ ಜೈಲ್ ಗೆ ಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಇನ್ನೂ ಇತ್ತೀಚಿಗೆ ಇದೇ ನಾಗರಾಜುರವರು ಸಬ್ ಇನ್ಸ್ ಪೆಕ್ಟರ್ ಡಿ.ರವಿಕುಮಾರ್ ರವರು ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಆರೋಪಿಸಿ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಅರೆಬೆತ್ತಲೆ ಮಾಡಿದ್ದನು ಎನ್ನಲಾಗಿದೆ..

ವರದಿ- ಎ.ಎನ್ ಲೋಕೇಶ್ ಎಕ್ಸ್ಪ್ರೆಸ್ ಟಿವಿ ಮಳವಳ್ಳಿ

Continue Reading
Click to comment

Leave a Reply

Your email address will not be published. Required fields are marked *

ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿಗೆ 2021 ರಲ್ಲಿ ನಡೆಯಲಿರುವ ಕಸಪಾ ಚುನಾವಣೆ ಪ್ರಚಾರ..!

Published

on

By

ಮಳವಳ್ಳಿ: ಕನ್ನಡ ಸಾಹಿತ್ಯ ಪರಿಷತ್ತಿಗೆ 2021 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸಲಿರುವ ಚನ್ನೇಗೌಡರು ಮಳವಳ್ಳಿ ಪಟ್ಟಣದ ವಿಶ್ವ ಮಾನವ ವಿಚಾರ ವೇದಿಕೆ ಕಚೇರಿಗೆ ಇಂದು ಭೇಟಿ ನೀಡಿದರು. ಇದೇ ವೇಳೆ ಚನ್ನೇಗೌಡರವರು ಮಾತನಾಡಿ, ಕಸಪಾದಲ್ಲಿ ಮತ್ತಷ್ಟು ಸುಧಾರಣೆಯಾಗಬೇಕಾಗಿದೆ. ಕನ್ನಡ ಪರ ಸಂಘಟನೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಗೆ ಸೇರಿಸಿಕೊಂಡು ಕನ್ನಡ ಪರ ಹೋರಾಟ ಮಾಡಬೇಕಾಗಿದೆ. ಇದಲ್ಲದೆ ಕನ್ನಡವನ್ನು ಉಳಿಸಬೇಕಾಗಿದೆ ಎಂದರು. ಇನ್ನೂ ಯುವ ಬರಹಗಾರರಗಳನ್ನು ಹೊರತರುವ ಕೆಲಸವನ್ನು ಕಸಪಾ ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ನಿಲುವುಗಳನ್ನು ಮುಂದೆ ಇಟ್ಟುಕೊಂಡು ನಾನು ಚುನಾವಣೆಯಲ್ಲಿ ಸ್ವರ್ಧಿಸುತ್ತಿದ್ದೇನೆ ಎಂದರು. ಈ ಭಾರಿ ನನ್ನನ್ನು ಆಯ್ಕೆ ಮಾಡಲು ನಿಮ್ಮ ಸಹಕಾರ ಬೇಕು. ಇದಲ್ಲದೆ ನಾನು ಸಹ ಮಂಡ್ಯ ಜಿಲ್ಲೆಯವನು ಕಸಪಾ ಪ್ರಗತಿಗೆ ನಾವೆಲ್ಲರೂ ಒಟ್ಟಾಗಿ ಅಭಿವೃದ್ಧಿ ಪಡಿಸೋಣ ಎಂದರು.ಇನ್ನೂ ಈ ಕಾರ್ಯಕ್ರಮದಲ್ಲಿ ವಿಶ್ವಮಾನವ ವಿಚಾರ ವೇದಿಕೆ ಅಧ್ಯಕ್ಷ ಮ.ಸಿ ನಾರಾಯಣ, ಪ್ರಧಾನ ಕಾರ್ಯದರ್ಶಿ ನಾಗೇಶ್, ಖಜಾಂಚಿ ಡಾ.ಮಹದೇವ, ಕಸಪಾ ತಾಲ್ಲೂಕು ಅಧ್ಯಕ್ಷ ದೇವರಾಜು, ಪ್ರಾಂತ ರೈತ ಸಂಘದ ಅಧ್ಯಕ್ಷ ಭರತ್ ರಾಜ್ ಇದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Continue Reading

ಮಂಡ್ಯ

ಬಿಜೆಪಿ ಅಧ್ಯಕ್ಷ ನಂಜುಂಡೇಗೌಡರ ವಿರುದ್ಧ ಗುಡುಗಿದ ರೈತ ಸಂಘದ ಅಧ್ಯಕ್ಷ ಎನ್ಎಲ್ ಭರತ್ ರಾಜ್..!

Published

on

By

ಮಳವಳ್ಳಿ: ತನ್ನನ್ನು ತಾನು ಬಿಜೆಪಿಗೆ ಮಾರಿಕೊಂಡಿರುವ ನಂಜುಂಡೇಗೌಡರು ರೈತರ ಬಗ್ಗೆ ಮಾತನಾಡುವ ಯಾವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ ಹಾಗೂ ರೈತರ ಪ್ರತಿನಿಧಿಯಾಗಲು ಯೋಗ್ಯತೆ ಇಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ಎಲ್ ಭರತ್ ರಾಜ್ ಆರೋಪಿಸಿದ್ದಾರೆ. ಮಳವಳ್ಳಿಯ ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಚಾರಿತ್ರಿಕ ವಾದದ್ದು, ಸ್ವಾತಂತ್ರ್ಯ ಚಳುವಳಿಯ ನಂತರದ ಧೀರೋದ್ಧಾತ ಹಾಗೂ ಐತಿಹಾಸಿಕವಾದ ಚಳುವಳಿಯನ್ನು ದಲ್ಲಾಳಿಗಳ ಹೋರಾಟ ಎಂದು ನಂಜುಂಡೇಗೌಡರು ಕರೆದಿರುವುದು ಅವರು ಬಿಜೆಪಿ ಗುಲಾಮರಾಗಿರುವುದಕ್ಕೆ ಸಾಕ್ಷಿಯಾಗಿದೆ. ರೈತ ಸಂಘಟನೆಯ ಮೂಲಕ ಬೆಳೆದು ಬಂದು ತನ್ನ ಬೆಳೆಸಿದ ರೈತ ಕುಲಕ್ಕೆ ವಿಷ ಉಣಿಸುತ್ತಿದ್ದಾರೆ, ಅವರ ನೆಚ್ಚಿನ ನಾಯಕ ನರೇಂದ್ರ ಮೋದಿ ಅದಾನಿಯ, ಅಂಬಾನಿಯ ಗುಲಾಮನಾಗಿ ರೈತ ವಿರೋಧಿ ವಿದ್ಯುತ್ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯಿದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಯಾವ ಸದನಗಳಲ್ಲೂ ಚರ್ಚಿಸದೆ, ಚಳಿಗಾಲದ ಸಂಸತ್ ಅಧಿವೇಶನವನ್ನು ರದ್ದು ಪಡಿಸಿ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು. ಮೋದಿ ಪ್ರಜಾಪ್ರಭುತ್ವದ ಕೊಲೆಗಾರ ಭಾರತದ ದಿವಾಳಿಕೋರ, ಬಂಡವಾಳ ಶಾಹಿಗಳ ದಾಸಾನುದಾಸ, ಕೃಷಿ ವಲಯ ಕೈಗಾರಿಕಾ ವಲಯಗಳನ್ನ ಹಾಳು ಮಾಡಿ ಬಡತನ ನಿರುದ್ಯೋಗ ಅಸಮಾನತೆ ಅಸಹಿಷ್ಣುತೆಯನ್ನ ಹುಟ್ಟುಹಾಕಿರುವ ಗೋಮುಖ ವ್ಯಾಘ್ರನನ್ನ ನಂಜುಂಡೆಗೌಡರು ಸಮರ್ಥಿಸಿಕೊಳ್ಳುವುದು ರೈತ ದ್ರೋಹಿ ಕೆಲಸವಾಗಿದೆ ಇದೇ ನೀತಿಗಳನ್ನು ವಿರೋಧಿಸಿ ರಾಜ್ಯ ರೈತ ಸಂಘದಲ್ಲಿದ್ದಾಗ ಮೂರ್ನಾಲ್ಕು ದಶಕಗಳ ಕಾಲ ಹೋರಾಟ ಮಾಡಿರುವುದನ್ನು ಮರೆತು ಮಾತನಾಡುತ್ತಿದ್ದಾರೆ ನಿಮಗೆ ಕಿಂಚಿತ್ತಾದರೂ ಸ್ವಾಭಿಮಾನವಿದ್ದರೆ ತನ್ನನ್ನು ಬೆಳೆಸಿದ ರೈತರಿಗೆ ದ್ರೋಹ ಬಗೆಯದೆ ಹಸಿರು ಟವಲ್ ನ್ನು ಬಿಜೆಪಿಗೆ ಒತ್ತೆ ಇಡದೆ ಸಾಮಾನ್ಯ ಮನುಷ್ಯನಾಗಿ ಬಾಳಿ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸುತ್ತದೆ ಎಂದರು ಇನ್ನೂ ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ರೈತ ಸಂಘ ಪ್ರಧಾನ ಕಾರ್ಯದರ್ಶಿ ಲಿಂಗರಾಜುಮೂರ್ತಿ, ಆನಂದ್ ಚಿಕ್ಕಮೊಗಣ್ಣ ಸಿದ್ದೇಗೌಡ ದಾಸಬೋವಿ, ಕರಿಯಪ್ಪ, ಭಾಗವಹಿಸಿದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Continue Reading

ಮಂಡ್ಯ

ಕುವೆಂಪು ದಿನಾಚರಣೆ ಹಾಗೂ ದಿನಶೀರ್ಷಿಕೆ ಬಿಡುಗಡೆ..!

Published

on

By

ಮಳವಳ್ಳಿ: ವಿಶ್ವ ಮಾನವ ವಿಚಾರ ವೇದಿಕೆ ವತಿಯಿಂದ ಕುವೆಂಪುರವರ 116 ನೇ ವರ್ಷ ಜನ್ಮ ದಿನಾಚರಣೆ ಹಾಗೂ ದಿನ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮವನ್ನು ಮಳವಳ್ಳಿ ಪಟ್ಟಣದ ವಿಶ್ವ ಮಾನವ ವಿಚಾರ ವೇದಿಕೆ ಕಚೇರಿಯ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪುರಸಭಾಧ್ಯಕ್ಷೆ ರಾಧ ನಾಗರಾಜುರವರು ಉದ್ಘಾಟಿಸಿದರು.ಇದೇ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿರವರು ಮಾತನಾಡಿ ವಿಚಾರವಂತರ ನಡುವೆ ನಾವೆಲ್ಲ ಇದ್ದೇವೆ ಎನ್ನುವುದೇ ಸಮಾದಾನದ ಸಂಗತಿ,ವಿಚಾರವಂತರಿಗೆ ತೊಂದರೆ ತಪ್ಪಿದ್ದಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಇನ್ನೂ ಇದೇ ವೇಳೆ ಹಂದಿನಾಗಣ್ಣ, ಸಿಐಟಿಯು ರಾಜ್ಯ ಕಾರ್ಯದರ್ಶಿ ಜಿ.ರಾಮಕೃಷ್ಣ, ಹಿರಿಯ ರಂಗಕಲಾವಿದ ಪುಟ್ಟಸ್ವಾಮಾಚಾರ್ಯ,ಜಯರಾಜು ರವರನ್ನು ಸನ್ಮಾನಿಸಲಾಯಿತು. ಇನ್ನೂ ಕಾರ್ಯಕ್ರಮದಲ್ಲಿ ವಿಶ್ವ ಮಾನವ ವಿಚಾರ ವೇದಿಕೆ ಅಧ್ಯಕ್ಷ ಮ.ಸಿ ನಾರಾಯಣ, ಪ್ರಧಾನ ಕಾರ್ಯದರ್ಶಿ ನಾಗೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ, ನಾಗರಾಜು, ವಿಶ್ವಗುರು ಸೊಸೈಟಿ ಅಧ್ಯಕ್ಷ ಕೃಷ್ಣಶೆಟ್ಟಿ, ಭರತ್ ರಾಜ್ ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Continue Reading

Trending

Copyright © 2023 EXPRESS TV KANNADA