ನಾಗರಿಕ ಬಂದೂಕು ತರಭೇತಿ ಶಿಬಿರ ಮುಕ್ತಾಯ- IPS ಡಾ.ಕೆ ವಂಶಿಕೃಷ್ಣ ಅವರಿಂದ ಪ್ರಮಾಣ ಪತ್ರ ವಿತರಣೆ..!

ತಿಪಟೂರು: ತಿಪಟೂರು ನಗರದ ಕಲ್ಪತರು ಆಡಿಟೋರಿಯಂನಲ್ಲಿ ಪೊಲೀಸ್ ಇಲಾಖೆ ವತಿಯಿಂದ 65ನೇ ನಾಗರೀಕ ಬಂದೂಕು ತರಭೇತಿ ಶಿಬಿರದ ಮುಕ್ತಾಯ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಿರಿಯ ನಾಗರೀಕರು ಹಾಗೂ ಸಾರ್ವಜನಿಕರಿಗೆ ಹಾಗೂ ಇತರೆ ಇಲಾಖೆಯ ಅಧಿಕಾರಿಗಳಿಗೆ ಒಂದು ವಾರಗಳ ಕಾಲ ಬಂದೂಕು ಗುರಿ, ಹಾಗೂ ಬಂದೂಕು ಉಪಯೋಗಿಸುವ ವಿಧಿ ವಿಧಾನಗಳನ್ನು ತಿಳಿಸಿ ಜೊಡಲಾಗಿತ್ತು. ಮುಕ್ತಾಯದ ದಿನವಾದ ಇಂದು ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರಗಳನ್ನು ಮಾನ್ಯ ಪೊಲೀಸ್ ಅಧ್ಯಕ್ಷರಾದ ಡಾ, ಕೆ.ವಂಶಿಕೃಷ್ಣ IPS ರವರು ಪ್ರದಾನ ಮಾಡಿದರು. ತಿಪಟೂರಿನ ಯುವರಾಜ ಪ್ರಥಮ ಗುರಿಕಾರರಾಗಿ ಮೊದಲನೇ ಪ್ರಶಸ್ತಿ ಪಡೆದರು. ಇನ್ನೂ ಈ ಸಂದರ್ಭದಲ್ಲಿ ತಿಪಟೂರಿನ ನಾಲ್ಕನೇ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಶಿವಕುಮಾರ್ ರವರು ಹಾಗೂ ಶಾಸಕರಾದ ಶ್ರೀ ನಾಗೇಶ್ ರವರು ಉಪಸ್ಥಿತಿರಿದ್ದರು. ಇನ್ನೂ ಕಾರ್ಯಕ್ರಮದ ನಿರೂಪಣೆಯನ್ನು, ಹಾಗೂ ನೇತ್ರತ್ವವವನ್ನು ತಿಪಟೂರಿನ ಡಿವೈ ಎಸ್…

Read More

ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ- ಬಿ.ಸಿ ನಾಗೇಶ್..!

ತಿಪಟೂರು: ನಗರದ ಎಪಿಎಂಸಿ ಯಾರ್ಡ್ ನಲ್ಲಿ ಆರಂಭವಾದ ರಾಗಿ ಖರೀದಿ ಕೇಂದ್ರಕ್ಕೆ ಶಾಸಕರಾದ ಬಿ.ಸಿ ನಾಗೇಶ್ ಚಾಲನೆ ನೀಡಿದರು.2020-21ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ರಾಗಿಯನ್ನು ಪ್ರತಿ ಕ್ವಿಂಟಾಲ್ ಗೆ 3295.ರಂತೆ ಖರೀದಿಸಲಾಗುವುದು. ರಾಗಿ ಖರೀದಿ ಕೇಂದ್ರದಲ್ಲಿ ಪೂರ್ಣ ಒಣಗಿದ ಹಾಗೂ ಸ್ವಚ್ಚಗೊಳಿಸಿ ಉತ್ತಮ ಗುಣಮಟ್ಟದ ಮತ್ತು ಗ್ರೇಂಡರ್ ಗಳಿಂದ ದೃಢೀಕರಿಸಿದ ಗುಣಮಟ್ಟದ ರಾಗಿ ಮಾತ್ರ ಖರೀದಿಸಲಾಗುವುದು ಕಳಪೆ ಗುಣಮಟ್ಟದ ರಾಗಿಯನ್ನು ತಿರಸ್ಕರಿಸಲಾಗುವುದು ಮತ್ತು ರೈತರು 2020-21ನೇ ಸಾಲಿಗೆ ನೋಂದಣಿಯನ್ನು ಮಾಡಿಸಲು ಕೃಷಿ ಇಲಾಖೆಯಿಂದ ನೀಡಿರುವ ಫ್ರೂಟ್ಸ್ ಗುರುತಿನ ಸಂಖ್ಯೆಯನ್ನು ತರುವುದು ಕಡ್ಡಾಯವಾಗಿದೆ. ಗುರುತಿನ ಸಂಖ್ಯೆಯೊಂದಿಗೆ ಖರೀದಿ ಕೇಂದ್ರಕ್ಕೆ ಬಂದು ತಮ್ಮ ಹೆಸರನ್ನು ದಾಖಲೆ ಮಾಡಿಸಿಕೊಳ್ಳ ತಕ್ಕದ್ದು ರೈತರು ಫ್ರೂಟ್ಸ್ ಗುರುತು ಸಂಖ್ಯೆಯನ್ನು ನಮೂದಿಸಿದ ನಂತರ ತಾವು ಬೆಳೆದ ರಾಗಿ ದಾಸ್ತಾನನ್ನು ಮಾದರಿಯೊಂದಿಗೆ ಖರೀದಿ ಕೇಂದ್ರಕ್ಕೆ ಬಂದು ಕೃಷಿ ಇಲಾಖೆ…

Read More

ಸೇತುವೆ ನಿರ್ಮಾಣಕ್ಕಾಗಿ ಬೈಪಾಸ್ ರಸ್ತೆ ತಡೆ- ಗ್ರಾಮಸ್ಥರ ಆಕ್ರೋಶ..!

ತಿಪಟೂರು: ತಿಪಟೂರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರೈತ ವಿರೋಧಿ ಧೋರಣೆ ನಡೆಸುತ್ತಿದ್ದಾರೆ ಎಂದು ತಿಪಟೂರು ತಾಲ್ಲೂಕು, ಕಸಬಾ ಹೋಬಳಿ, ಮಾದಿಹಳ್ಳಿ ಗ್ರಾಮಸ್ಥರು ರಸ್ತೆಯಲ್ಲಿ ಧರಣಿ ನಡೆಸುತ್ತಿದ್ದಾರೆ.ಮಾದಿಹಳ್ಳಿ ಸರ್ವೆ ನಂಬರ್ 8,9,10,11,12,13 ಮತ್ತು 304ರ ಸರ್ಕಾರಿ ಖರಾಬು ಜಮೀನುಗಳಲ್ಲಿ,ಸರಿ ಸುಮಾರು 10 ರಿಂದ 20 ಅಡಿ ಎತ್ತರದ ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾದುಹೋಗಿದ್ದು, ಈ ರಸ್ತೆಗೆ ಲಗತ್ತಾಗಿರುವ ಅಕ್ಕಪಕ್ಕದ ಗ್ರಾಮದ ರೈತರು, ಮಾದಿಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಪ್ರತಿದಿನ ಸುಮಾರು 50 ರಿಂದ 100ರೈತರು ಹಾಲನ್ನು ಹಾಕುತ್ತಿದ್ದಾರೆ, ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮಾದಿ ಹಳ್ಳಿಯಿಂದ ಕೊಬ್ಬರಿ ದೊಡ್ಡಯ್ಯನ ಪಾಳ್ಯ ಮತ್ತು ವಾಸುದೇವರಹಳ್ಳಿಗೆ ಪ್ರತಿದಿನ ರೈತರು, ಕೃಷಿ ಕಾರ್ಮಿಕರು, ದನ ಕರುಗಳು, ಟ್ರ್ಯಾಕ್ಟರ್ ಜೆಸಿಬಿ ಇನ್ನೀತರ ಯಂತ್ರಗಳು ಹಾಗೂ ಇದೆ ಮಾದಿಹಳ್ಳಿ ಸರ್ಕಾರಿ ಜಮೀನಿನಲ್ಲಿ ಶ್ರೀ ಸಿದ್ಧಪ್ಪ ದೇವಸ್ಥಾನ ಮತ್ತು ಶ್ರೀ ಗಂಗಮ್ಮ ನವರ ಕ್ಷೇತ್ರಕ್ಕೆ ಪ್ರತಿದಿನ ಭಕ್ತಾದಿಗಳು…

Read More

ಅನ್ ಲೈನ್ ಜೂಜಾಟಕ್ಕೆ ಬಿದ್ದು ಬ್ಯಾಂಕಿನ ಹಣ ದುರುಪಯೋಗ- ವ್ಯವಸ್ಥಾಪಕ ಪರಾರಿ…!

ತಿಪಟೂರು: ನಗರದ ಹೆಚ್.ಡಿ.ಎಫ್.ಸಿ ಬ್ಯಾಂಕಿನ ವ್ಯವಸ್ಥಾಪಕ ಸುಮಾರು 29 ಲಕ್ಷ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ೦ದು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಬ್ಯಾಂಕಿನ ವ್ಯವಸ್ಥಾಪಕ ಆನ್ಲೈನ್ ಜೂಜಾದ ರಮ್ಮಿ ಸರ್ಕಲ್ಗೆ ಬಿದ್ದು ಬ್ಯಾಂಕಿನ ಹಣ ದುರುಪಯೋಗ ಪಡಿಸಿಕೊಂಡು ಈಗ ಊರು ಬಿಟ್ಟಿದ್ದಾನೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೆಚ್.ಡಿಎಫ್.ಸಿ ಬ್ಯಾಂಕಿನಲ್ಲಿ ವ್ಯವಹಾರ ಮಾಡುತ್ತಿದ್ದ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಚಿಕ್ಕಬಿದರೆಯ ಶಾಂತಕುಮಾರ್ ಬಿನ್ ಚಂದ್ರಣ್ಣ ಎಂಬಾತನು ಸಾಲದ ಬಾಬ್ತು ಜಮೆ ಮಾಡುವಂತೆ ಡಿಸೆಂಬರ್ 22ರಂದು 29 ಲಕ್ಷ ರೂಪಾಯಿಗಳನ್ನು ಬ್ಯಾಂಕ್ನ ವ್ಯವಸ್ಥಾಪಕರಿಗೆ ಕೊಟ್ಟಿರುತ್ತಾರೆ. ಆದರೆ ಡಿಸೆಂಬರ್ 24 ಆದರೂ ಖಾತೆಗೆ ಹಣ ವರ್ಗಾವಣೆಯಾಗದ ಬಗ್ಗೆ ಇಲ್ಲಸಲ್ಲದ ಕಾರಣ ಹೇಳಿದ ಮ್ಯಾನೇಜರ್ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಡಿಸೆಂಬರ್ 24ರಂದು ದೂರು ನೀಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಬ್ಯಾಂಕಿನ ಅನೇಕ ಗ್ರಾಹಕರು ಠಾಣೆ ಮುಂದೆ…

Read More

ಗುಂಡಿ ಮುಚ್ಚಿ, ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿ..!

ತಿಪಟೂರು: ತಿಪಟೂರು ನಗರದ ಡಿ.ಸಿ.ಸಿ.ಬ್ಯಾಂಕ್ ಮುಂಭಾಗ ಇರುವ ನೀರಿನ ಪೈಪ್ಲೈನ್ ಹೊಡೆದು ನೀರು ಸೋರಿಕೆಯಾಗುತ್ತಿದೆ ಎಂಬ ವರದಿ ಬಂದ ತಕ್ಷಣವೇ ನಗರಸಭೆಯ ಅಧಿಕಾರಿಗಳು ಸ್ಪಂದಿಸದ್ದನ್ನು ನೋಡಿ ಜನರಿಗೆ ಸಂತೋಷವು ಆಯಿತು. ಈ ಗುಂಡಿಯನ್ನು ತೋಡಿ ಕುಡಿಯುವ ನೀರಿನ ಪೈಪ್ಲೈನ್ ದುರಸ್ತಿ ಮಾಡಿದ್ದು ಸರಿಯಾಗಿತ್ತು. ಆದರೆ ದುರಸ್ತಿ ಕಾರ್ಯ ನಡೆದು ಹದಿನೈದು ದಿನಗಳು ಕಳೆದರೂ ಗುಂಡಿ ಮುಚ್ಚದೇ ಪಾದಚಾರಿಗಳು ಓಡಾಡಲು ತುಂಬಾ ತೊಂದರೆಯಾಗುತ್ತಿದೆ. ನಗಗರದಲ್ಲಿ ವಾಹನ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದೇ ರಸ್ತೆಯ ಪಕ್ಕದಲ್ಲಿ ಬೇಕಂದರಲ್ಲಿ ವಾಹನಗಳನ್ನು ನಿಲ್ಲಿಸುವುದು ವಾಡಿಕೆಯಾಗಿದೆ.ಇದರಿಂದ ಪಾದಚಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀರಾ ತೊಂದರೆಯಾಗುತ್ತಿದ್ದು, ಹೆಚ್ಚಿನ ಅಪಘಾತಗಳು ಕೂಡ ಸಂಭವಿಸುತ್ತಿವೆ ಆದ್ದರಿಂದ ಕೂಡಲೇ ಪೈಪ್ಲೈನ್ ರಿಪೇರಿಗೆ ತೆಗೆದಿರುವ ಗುಂಡಿಯನ್ನು ನಗರಸಭೆಯ ಅಧಿಕಾರಿಗಳು ಮುಚ್ಚಿ ಸಾರ್ವಜನಿಕರ ಓಡಾಡಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ. ವರದಿ- ಸಿದ್ಧೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Read More

ಕಲ್ಪತರು ವಿದ್ಯಾಸಂಸ್ಥೆಯ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ಸಂಗತಿ- ಪಿ.ಕೆ.ತಿಪ್ಪೇರುದ್ರಪ್ಪ..!

ತಿಪಟೂರು: ಕಲ್ಪತರು ವಿದ್ಯಾಸಂಸ್ಥೆಯ ವಿರುದ್ಧ ಆರೋಪಗಳನ್ನು ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ಸಹಕಾರ ಇಲಾಖೆಯು ನೀಡಿರುವಂತಹ ನೋಟಿಸ್ ಉತ್ತರವನ್ನು ನೀಡಲಾಗಿದೆ ಎಂದು ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ತಿಳಿಸಿದರು. ನಗರದ ಕಲ್ಪತರು ತಾಂತ್ರಿಕ ವಿದ್ಯಾಲಯದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಲ್ಪತರು ವಿದ್ಯಾಸಂಸ್ಥೆಯೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಕೆಲಸದ್ಯರುಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.ಹಿಂದೆ ಅವರು ಅಧಿಕಾರದಲ್ಲಿ ಇದ್ದಂತಹ ಸಂದರ್ಭದಲ್ಲಿ ಅವರು ಮಾಡಿರುವ ತಪ್ಪುಗಳನ್ನು ಮುಚ್ಚಿಹಾಕಲು ಇಲ್ಲದ ಸಮಸ್ಯೆಗಳನ್ನು ಸೃಷ್ಠಿಸಲು ಪ್ರಯತ್ನಿಸುತ್ತಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಸಹಕಾರ ಸಂಘದ ಚುನಾವಣೆ ತಡವಾಗಿದೆ. ಅಲ್ಲದೇ ಅವರ ನಿರ್ದೇಶನದಂತೆಯೇ ಸರ್ವಸದಸ್ಯರ ಸಭೆ, ಚುನಾವಣೆಯನ್ನು ನಿಗಧಿಪಡಿಸಲಾಗಿದೆ. ಅಲ್ಲದೇ ಸಹಕಾರ ಸಂಘದ ಜಂಟಿ ನಿರ್ದೇಶಕರು ಅಪರಾದ ಸಾಬೀತಾಗಿರುವ ಹಿನ್ನೆಲೆಯೆಂದು ನೋಟಿಸ್ನಲ್ಲಿ ಉಲ್ಲೇಖಿಸಿದ್ದು ಇಲ್ಲಿಯವರೆವಿಗೂ ಯಾವುದೇ ರೀತಿಯ ಪರಿಶೀಲನೆ ನಡೆಯದೆ ಈ ರೀತಿ ತಿಳಿಸಿದ್ದಾರೆ. ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಇಲ್ಲಿಯವರೆವಿಗೂ ಯಾವುದೇ ರೀತಿಯ ಅವ್ಯವಹಾರಗಳು ನಡೆದಿಲ್ಲ ಎಂದು ಸ್ಫಷ್ಟೀಕರಣ ನೀಡಿದರು.ಕಲ್ಪತರು…

Read More

ಎಸ್ಪಿ ಡಾ.ವಂಶಿಕೃಷ್ಣ ನೇತೃತ್ವದಲ್ಲಿ ಪಥಸಂಚಲನ..!

ತಿಪಟೂರು: ಗ್ರಾಮ ಪಂಚಾಯಿತಿ ಎರಡನೇ ಹಂತದ ಚುನಾವಣೆ ಡಿಸೆಂಬರ್ 27ರಂದು ನಡೆಯುತ್ತಿರುವ ಸಲುವಾಗಿ ತಾಲ್ಲೂಕಿನ ಬಿಳಿಗೆರೆ ಪಂಚಾಯಿತಿ ಹಾಗೂ ಕಿಬ್ಬನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಸ್ಪಿ ಡಾ. ವಂಶಿಕೃಷ್ಣ ನೇತೃತ್ವದಲ್ಲಿ ಕೆ ಬಿ ಕ್ರಾಸ್ ನಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಯಿತು. ನಂತರ ಬಿಳಿಗೆರೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ ಚುನಾವಣಾ ಕ್ರಮಗಳು,ಮತದಾರರಿಗೆ ಬೆದರಿಕೆ ಮುಖ್ಯವಾಗಿ ಆಮಿಷಗಳನ್ನು ಒಡ್ಡಬಾರದೆಂದು ಎಚ್ಚರಿಸಿದ ಅವರು ಶಾಂತಿಯುತ ಮತದಾನಕ್ಕೆ ಸಹಕರಿಸಬೇಕೆಂದು ತಿಳಿಸಿದರು. ಇನ್ನೂ ಈ ಸಂದರ್ಭದಲ್ಲಿ ತಿಪಟೂರು ಡಿವೈಎಸ್ಪಿ ಚಂದನ್ ಕುಮಾರ್ ಗ್ರಾಮಾಂತರ ವೃತ್ತದ ಸಿಪಿಐ ಜಯಲಕ್ಷ್ಮಮ್ಮ ಮತ್ತಿತರರು ಹಾಜರಿದ್ದರು. ವರದಿ-ಸಿದ್ದೇಶ್ ಎಕ್ಸ್ ಪ್ರೆಸ್ ಟಿವಿ ತಿಪಟೂರು

Read More

ಗೋವುಗಳನ್ನು ತುಂಬಿದ್ದ ಟೊಯೋಟ ಕ್ವಾಲೀಸ್ ಅಪಘಾತ – ಬದುಕುಳಿದ 32 ಗೋವುಗಳು..!

ತಿಪಟೂರು : ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತವಾಗಿ ಖಸಾಯಿ ಖಾನೆಗೆ ಸೇರಬೇಕಾದ 32 ಗೋವುಗಳು ತಮ್ಮ ಜೀವವನ್ನು ಉಳಿಸಿಕೊಂಡಿವೆ.ಮೊನ್ನೆತಾನೆ ವಿಧಾನಸಭೆಯಲ್ಲಿ ಗೋರಕ್ಷಣೆಯ ಬಗ್ಗೆ ಮತ್ತು ಗೋಹತ್ಯೆ ನಿಷೇದದ ಬಗ್ಗೆ ಚರ್ಚೆ ನಡೆದಿದ್ದು,ಗೋಹತ್ಯೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆದೇಶವನ್ನು ಸರ್ಕಾರ ಹೊರಡಿಸಿತ್ತು. ಆದ್ರೆ ತಿಪಟೂರಿನಲ್ಲಿ 30 ಸಿಮೆ ಹಸುಗಳು ಸೇರಿದಂತೆ 1ಹೋರಿ ಯನ್ನು ವ್ಯಾಪಾರಮಾಡಿಕೊಂಡು ಟಯೋಟ ಕ್ವಾಲೀಸ್ ನಲ್ಲಿ ತುಂಬಿಕೊಂಡು ಹೊರಟಿದ್ದ ಗಾಡಿ ಮಂಜುನಾಥಪುರದಲ್ಲಿ ರಾತ್ರಿ ಅಪಘಾತಕ್ಕೀಡಾಗಿದೆ.ಇನ್ನೂ ವಾಹನ ಚಾಲಕಿಬ್ಬರು ಅಪಘಾತವಾಗುತ್ತಿದ್ದಂತೆ ಗಾಡಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.ಇನ್ನೂ ವಾಹವನ್ನು ನೋಡಿದ ಸ್ಥಳಿಯರು ಹೊನ್ನವಳ್ಳಿ ಪೋಲಿಸ್ ಠಾಣೆಗೆ ಸುದ್ದಿ ತಿಳಿಸಿದರು. ಈ ಸಂದರ್ಭದಲ್ಲಿ ಪಶುವೈದ್ಯಾದಿಕಾರಿಗಳು ಗೋವುಗಳ ಆರೋಗ್ಯವನ್ನು ತಪಾಸಣೆ ಮಾಡಿ, ಗೋವುಗಳನ್ನು ಮೈಸೂರಿನ ಚಾಮುಂಡಿ ಬೆಟ್ಟದ ಹತ್ತಿರವಿರುವ ಪಿಂಬಾಲ ಗೋ ಶಾಲೆಗೆ ಕಳುಹಿಸಲಾಗುವುದೆಂದು ಪೋಲಿಸರು ತಿಳಿಸಿದ್ದಾರೆ. ವರದಿ- ಸಿದ್ಧೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Read More

ಮತ ಬಹಿಷ್ಕಾರಕ್ಕೆ ಜನಪ್ರತಿನಿಧಿಗಳೇ ನೇರ ಕಾರಣ- ಕೆ.ಟಿ ಶಾಂತಕುಮಾರ್..!

ತಿಪಟೂರು: ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಭಾಗದ ಜನರು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದು, ಇದಕ್ಕೆ ತಾಲ್ಲೂಕಿನಲ್ಲಿ ಆಯ್ಕೆಯಾಗಿ ಅಧಿಕಾರ ನಡೆಸಿದ ಜನಪ್ರತಿನಿಧಿಗಳೇ ನೇರ ಕಾರಣ ಎಂದು ಸಮಾಜ ಸೇವಕ ಕೆ.ಟಿ ಶಾಂತಕುಮಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಭಾಗದ ರೈತರು ಕೃಷಿ ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾದ ನೀರನ್ನು ಹರಿಸದಿದ್ದರೆ ಇವರ ಗತಿ ಏನು? ಚುನಾವಣಾ ಸಂದರ್ಭದಲ್ಲಿ ಜನಪ್ರತಿನಿಧಿಗಳು ಮತದಾರರನ್ನು ದೇವರು ಎಂದು ಕರೆಯುತ್ತಾರೆ, ಮತ ಗಿಟ್ಟಿಸಿಕೊಂಡ ನಂತರ ಕೊಟ್ಟ ಆಶ್ವಾಸನೆ ಭರವಸೆಗಳನ್ನು ಮರೆಯುವುದು ಸರಿಯಲ್ಲ, ಹೊನ್ನವಳ್ಳಿ ಏತ ನೀರಾವರಿ ಸೇರಿದಂತೆ ಹಲವು ಯೋಜನೆಗಳನ್ನು ತಂದರೂ ಯಾವೊಂದು ಯೋಜನೆಗಳು ಫಲಪ್ರದವಾಗಿಲ್ಲ. ಈ ಭಾಗದ ಜನರು ಹನಿ ನೀರಿಗಾಗಿ ಪರದಾಡುವ ಸ್ಥಿತಿಗೆ ಇಲ್ಲಿನ ಜನಪ್ರತಿಗಳೆ ನೇರ ಕಾರಣರಾಗಿದ್ದಾರೆ. ಈಗಲಾದರೂ ಜನ ಪ್ರತಿನಿಧಿಗಳು ಎಚ್ಚೆತ್ತುಕೊಂಡು ಹೊನ್ನವಳ್ಳಿ ಭಾಗಕ್ಕೆ ನೀರು ಹರಿಸುವ ಕೆಲಸ ಮಾಡಬೇಕು ಇಲ್ಲವಾದರೆ…

Read More

ನೀರಿಗಾಗಿ ಚುನಾವಣೆಯನ್ನು ಬಹಿಷ್ಕರಿಸಿದ ಹೊನ್ನವಳ್ಳಿ ಗ್ರಾಮದ ಜನ..!

ತಿಪಟೂರು ತಾಲೂಕಿನ ಹೊನ್ನವಳ್ಳಿ ಸುತ್ತಮುತ್ತಲ ಭಾಗಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಾಗಿದೆ ಹಾಗಾಗಿ ಈ ಬಾರಿ ಹೊನ್ನವಳ್ಳಿ ಭಾಗದ ಜನರು ಪಕ್ಷಾತೀತವಾಗಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ಸಂಪೂರ್ಣವಾಗಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಹೊನ್ನವಳ್ಳಿ ಗ್ರಾಮ ಪಂಚಾಯಿತಿಯ 6ಕ್ಷೇತ್ರಗಳ 14 ಸ್ಥಾನಗಳಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ .ಇದರ ಮಧ್ಯೆ ಚುನಾವಣೆ ಬಹಿಷ್ಕಾರದ ಮಧ್ಯೆ ಸಂಧಾನ ಮಾಡಲು ಪ್ರಯತ್ನಿಸಿದ್ದ ಅಧಿಕಾರಿಗಳಿಗೂ ಜಗ್ಗದೆ ಯಾರೂ ಸಹ ನಾಮಪತ್ರ ಸಲ್ಲಿಸಲು ಮುಂದೆ ಬಂದಿರಲಿಲ್ಲ. ವರದಿ-ಸಿದ್ದೇಶ್ ಎಕ್ಸ್ ಪ್ರೆಸ್ ಟಿವಿ ತಿಪಟೂರು

Read More