ಶ್ರೀಮುರಳಿ ಆಕ್ಟ್ ಮಾಡಿರೋ ‘ಉಗ್ರಂ’ ಸಿನಿಮಾ ಭರ್ಜರಿಯಾಗಿ ಸೌಂಡ್ ಮಾಡ್ತಿದೆ. ಇದೇ ಫೆಬ್ರವರಿ 21ಕ್ಕೆ ಥಿಯೇಟರ್ ಗೆ ಲಗ್ಗೆ ಇಡಲಿರೋ ‘ಉಗ್ರಂ’ನ ಅಟ್ಟಹಾಸದ ಟ್ರೈಲರ್ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆಗಳನ್ನ ಹುಟ್ಟುಹಾಕಿತ್ತು. ‘ಉಗ್ರಂ’ ಟ್ರೇಲರ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಒಂದ್ಸಾರಿ ಸಿನಿಮಾ ನೋಡ್ಬೇಕು ಅನ್ನೋ ನಿರೀಕ್ಷೆ ಇಟ್ಟಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ‘ಉಗ್ರಂ’ ಸಿನಿಮಾ ಸಖತ್ ಥ್ರಿಲ್ಲಿಂಗ್ ಅನ್ನಿಸೋ ಅಂಶಗಳನ್ನ ತನ್ನೊಳಗೇ ಬಚ್ಚಿಟ್ಟುಕೊಂಡಿದೆ. ಇದು ಭೂಗತಲೋಕದ ರಿಯಲ್ ಸ್ಟೋರಿಗಳಿಗೆ ಹಿಡಿದಿರೋ ಕನ್ನಡಿ. ಚಿತ್ರಕ್ಕೆ ರಾಮ್ ಲೀಲಾದಂತಹಾ ಸಿನಿಮಾಗೆ ಸಿನಿಮಾಟೋಗ್ರಫರ್ ಆಗಿದ್ದ ರವಿವರ್ಮನ್ ಅವರ ಕ್ಯಾಮೆರಾ ಕಮಾಲ್ ಇದೆ.