ಮೈದಾನದಲ್ಲೇ ಕಿತ್ತಾಡಿಕೊಂಡ ಜಡೇಜಾ-ಇಶಾಂತ್..! ವಿಡಿಯೋ ವೈರಲ್

ಪರ್ತ್(ಡಿ.19): ಭಾರತ ತಂಡದ ವೇಗಿ ಇಶಾಂತ್ ಶರ್ಮಾ ಹಾಗೂ ಸ್ಪಿನ್ನರ್ ರವೀಂದ್ರ ಜಡೇಜಾ, ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನ 4ನೇ ದಿನದಾಟದ ವೇಳೆ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಈ ಇಬ್ಬರೂ ಏನೇನು ಮಾತನಾಡಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ. ಆದರೆ ಇಬ್ಬರೂ ಫೀಲ್ಡಿಂಗ್‌ನಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ವಾಗ್ವಾದಕ್ಕಿಳಿದಿದ್ದರು. ಜಡೇಜಾ, ಬೇಡಿಕೆಯನ್ನು ಇಶಾಂತ್ ತಿರಸ್ಕರಿಸಿದ್ದೇ ವಾಗ್ವಾದಕ್ಕೆ ಕಾರಣ ಎನ್ನಲಾಗಿದೆ. ವಾಗ್ವಾದ ಹೆಚ್ಚಾಗುವ ವೇಳೆಗೆ ವೇಗಿ ಮೊಹಮದ್ ಶಮಿ ಮತ್ತು ಕುಲ್ದೀಪ್ ಯಾದವ್ ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.

ಪರ್ತ್ ಟೆಸ್ಟ್’ನಲ್ಲಿ ಇಶಾಂತ್ ಶರ್ಮಾ 5 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಜಡೇಜಾ ಸಬ್’ಸ್ಟಿಟ್ಯೂಟ್ ಫೀಲ್ಡರ್ ಆಗಿ ಕಣಕ್ಕಿಳಿದಿದ್ದರು. ಪರ್ತ್ ಟೆಸ್ಟ್’ನಲ್ಲಿ ಆಸ್ಟ್ರೇಲಿಯಾ ಜಯಭೇರಿ ಬಾರಿಸುವುದರೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ. ಇದೀಗ ಮೂರನೇ ಟೆಸ್ಟ್ ಪಂದ್ಯ ಡಿಸೆಂಬರ್ 26ರಂದು ಮೆಲ್ಬೊರ್ನ್’ನಲ್ಲಿ ನಡೆಯಲಿದೆ.

Please follow and like us:

Related posts

Leave a Comment