ಸೋನಂ ಕಪೂರ್ ಗೆ ಪೇಟಾ 2018ರ ಸಾಲಿನ ಶ್ರೇಷ್ಠ ವ್ಯಕ್ತಿ ಪ್ರಶಸ್ತಿ

ಮುಂಬೈ, ಡಿ.19: ಬಾಲಿವುಡ್ ನಟಿ ಸೋನಂ ಕಪೂರ್ ಅವರಿಗೆ ಪ್ರಾಣಿ ಪ್ರಿಯ ಸಂಸ್ಥೆ ಪೇಟಾ 2018ರ ಶ್ರೇಷ್ಠ ವ್ಯಕ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಪ್ರಾಣಿಪ್ರಿಯರಾಗಿರುವ ಸೋನಂ ಅವರು ಯಾವುದೇ ರೀತಿಯ ಪ್ರಾಣಿಚರ್ಮದಿಂದ ತಯಾರಾಗಿರುವ ವ್ಯಾನಿಟಿ ಬ್ಯಾಗ್ ‌ ಆಗಲೀ , ಜಾಕೆಟ್ ಆಗಲೀ ಬಳಿಸುವುದಿಲ್ಲ. ಅಲ್ಲದೆ , ಪ್ರಾಣಿಗಳ ಸಹಾಯಕ್ಕಾಗಿ ಸದಾ ಮುಂದಿರುತ್ತಾರೆ ಎಂದು ಪೇಟಾ ಭಾರತದ ಸಹಾಯಕ ನಿರ್ದೇಶಕ ಸಚಿನ್ ಬಂಗೇರಾ ಹೇಳಿದ್ದಾರೆ .

ಸೋನಂ ಕಪೂರ್ ಎಲ್ಲರಿಗೂ ಮಾದರಿ

ಜಗತ್ತಿನ ಎಲ್ಲಾ ಜೀವಿಗಳಿಗೆ ಗೌರವ ನೀಡಬೇಕು . ಸೋನಂ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರು ನಡೆಯಬೇಕು . ಸೋನಂ ಇತರರಿಗೆ ಮಾದರಿಯಾಗಿದ್ದಾರೆ . 2016ರಲ್ಲಿ ಪೇಟಾ ಭಾರತೀಯ ಸಸ್ಯಾಹಾರಿ ಸೆಲೆಬ್ರಿಟಿ ಪ್ರಶಸ್ತಿಯನ್ನು ಸೋನಂ ಅವರಿಗೆ ನೀಡಲಾಗಿತ್ತು . ಇದರ ನಂತರ ಅವರು ಅದೇ ಸಂಸ್ಥೆಯಿಂದ ಬ್ಯುಸಿನೆಸ್ ಪ್ರಶಸ್ತಿ ಕೂಡಾ ಸೋನಂಗೆ ಲಭಿಸಿತ್ತು .

Please follow and like us:

Related posts

Leave a Comment