ಬ್ರೇಕಿಂಗ್ : ಇಂದು ಸಂಜೆ 5.20ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ, , ಹೀಗಿದೆ ನೂತನ ಸಚಿವರ ಹೆಸರುಗಳು

ಬೆಂಗಳೂರು : ಇಂದು ಸಂಜೆ 5.20 ಕ್ಕೆ ನೂತನ ಸಚಿವರ ಪ್ರಮಾಣ ವಚನ ರಾಜಭವನದಲ್ಲಿ ನಡೆಯಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಾಧ್ಯಮ ಪ್ರಕಟಣೆ ನೀಡಿರುವ ಮಾಜಿ ಸಿದ್ದರಾಮಯ್ಯ, ನೂತನ ಸಚಿವ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ಸಂಜೆ 5.20 ಕ್ಕೆ ರಾಜಭವನದಲ್ಲಿ ನಡೆಯಲಿದೆ. ಶಿವಲ್ಳಿ, ಎಂಟಿಬಿ ನಾಗರಾಜ್, ತುಕಾರಾಂ, ಎಂ.ಬಿ.ಪಾಟೀಲ್, ಪರಮೇಶ್ವರ್ ನಾಯಕ್, ಸತೀಶ್ ಜಾರಕಿಹೊಳಿ, ತಿಮ್ಮಾಪುರ, ರಹೀಂ ಖಾನ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡುವುದರ ಜೊತೆಗೆ ಸಂಪುಟದಲ್ಲಿ ಖಾಲಿ ಇದ್ದ 6 ಸ್ಥಾನಗಳ ಭರ್ತಿಗೆ ತೀರ್ಮಾನ ಆಗಿರುವುದರಿಂದ ಈಗ ಒಟ್ಟು 8 ಮಂದಿ ಹೊಸಬರು ಸೇರ್ಪಡೆಗೆ ಅವಕಾಶ ದೊರೆತಿದೆ. ರಮೇಶ್ ಜಾರಕಿಹೊಳಿ ಸ್ಥಾನಕ್ಕೆ ಅವರ ಸಹೋದರ ಸತೀಶ್ ಜಾರಕಿಹೊಳಿ, ಆರ್. ಶಂಕರ್ ಸ್ಥಾನಕ್ಕೆ ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ ನೇಮಕಗೊಳ್ಳಲಿದ್ದಾರೆ.

Please follow and like us:

Related posts

Leave a Comment