ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಪ್ರಚಾರದ ಕೊರತೆಯಲ್ಲಿ ರೈತರ ದಿನಾಚರಣೆ : ರೈತ ಸಂಘದ ಅಧ್ಯಕ್ಷ ಲಕ್ಷ್ಮಣ್ ರೆಡ್ಡಿ


ರೈತ ದಿನಾಚರಣೆಯ ಅಂಗವಾಗಿ ಕೃಷಿ ಇಲಾಖೆ ಕಛೇರಿಯ ಬಳಿ ಕಾರ್ಯಕ್ರಮ ನಡೆಯಿತು , ಮುಖ್ಯ ಅತಿಥಿಗಳಾಗಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ನರೇಂದ್ರ, ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಎಸ್. ಲಕ್ಷ್ಮಣರೆಡ್ಡಿ , ಮಹಿಳಾ ಮುಖಂಡರಾದ ಉಮಾ ಮತ್ತುತೋಟಗಾರಿಕೆ ಸಹಾಯಕ ನಿರ್ದೇಶಕರಾದ ಶ್ರೀನಿವಾಸ್ , ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮರನಾಥ ಮತ್ತು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗಂಗಾಧರರೆಡ್ಡಿ ಹಾಗೂ ಇನ್ನೂ ಕೆಲವು ರೈತ ಮುಖಂಡರು ಬಾಗವಹಿಸಿದ್ದರು, ಉದ್ಘಾಟನೆ ಕಾರ್ಯಕ್ರಮ ಎಲ್ಲ ಗಣ್ಯರಿಂದ ನಡೆಯಿತು.

ಚಿಂತಾಮಣಿ ಕಾಗತಿ ಕಡೆಯಿಂದ ಕೃಷಿ ವಿಜ್ಞಾನಿ ಬಂದು ರೈತರಿಗೆ ಸಾವಯವ ಕೃಷಿಯನ್ನು ಹೆಚ್ಚು ಮಾಡಬೇಕು ಮತ್ತುಸಾಮೂಹಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಇದರಿಂದ ರೈತರ ಆತ್ಮ ಹತ್ಯೆಗಳನ್ನು ತಡೆಯಲು ಸಾಧ್ಯವಾಗುತ್ತೆ ಎಂದು ತಿಳಿಸಿದರು.

ತಾಲ್ಲೂಕು ರೈತ ಸಂಘದ ( ಕೋಡಿಹಳ್ಳಿ ಚಂದ್ರ ಶೇಖರ್ ಬಣದ) ಅಧ್ಯಕ್ಷರಾದ ಎಸ್. ಲಕ್ಷ್ಮಣರೆಡ್ಡಿ ಮಾತನಾಡಿ ” 70 ವರ್ಷಗಳ ಸುಧೀರ್ಘ ಕೇಂದ್ರ ಸರ್ಕಾರಗಳ ಆಳ್ವಿಕೆಯು ರೈತರ ಮೇಲಿನ ದಬ್ಬಾಳಿಕೆಯನ್ನೇ ಮಾಡಿದೆಯೇ ಹೊರತು ಬೇರೇನೂ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತರ ಮೇಲಿನ ಎಲ್ಲ ನೀತಿಗಳು, ಯೋಜನೆಗಳು ಕಣ್ಣು ಓರೆಸುವ ಓಲೈಕೆಯ ದಾರಿಗಳೇ ಬಿಟ್ಟು, ನಿಜವಾದ ಇಚ್ಛಾಶಕ್ತಿಯನ್ನು ಹೊಂದಿದ್ದರೆ, 70 ವರ್ಷಗಳಲ್ಲಿ ಕಾಯುವ ಅವಶ್ಯಕತೆ ಇರುತ್ತಿರಲಿಲ್ಲ.

ಇಂದಿನ ರಾಜಕಾರಣವೂ ಸಹ ರೈತರನ್ನು, ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದು, ಜಾತಿಗಳ ಆಧಾರದಲ್ಲಿ ದಿನಾಚಾರಣೆಗಳನ್ನು ಮಾಡುವುದರಲ್ಲಿ ಮುಂದುವರೆದಿದೆ. ಇದು ದೇಶದ ಬೆಳವಣಿಗೆಗೆ ಉತ್ತಮ ವಾತಾವರಣ ಅಲ್ಲ. ರೈತರಿಗೆ ಭಿಕ್ಷೆ ನೀಡುತ್ತಿರುವ ಉಚಿತ ಅನ್ನಭಾಗ್ಯ ದಿಂದ ಸರ್ಕಾರದ ಯೋಜನೆ ಹಳ್ಳ ಹಿಡಿಯುತ್ತಿದೆ. ರೈತ ಸದೃಢನಾದರೆ ದೇಶ ಸುಭಿಕ್ಷವಾಗಿರುತ್ತದೆ.
ಸಾಲಮನ್ನಾ ಮಾಡಿ ಕೈ ಒರೆಸುವ ಸರ್ಕಾರಗಳ ನೀತಿಗಳು ಬದಲಾಗಬೇಕಿದೆ..

ರೈತರಿಗೆ ಲಕ್ಷ ಲಕ್ಷ ಸಾಲ ಮನ್ನಾ ಮಾಡಿ ತಲೆ ಕೆಡಿಸಿಕೊಳ್ಳುವ ಬದಲು, ಸರ್ಕಾರದಿಂದಲೇ ರೈತರಿಗೆ ಉಚಿತ ರಸಗೊಬ್ಬರಗಳು, ಬಿತ್ತನೆಬಿಜಗಳು, ರಸಗೊಬ್ಬರಗಳನ್ನು ಕಾಲಕಾಲಕ್ಕೆ, ಬೆಳೆಗೆ ತಕ್ಕಂತೆ ಒಡಗಿಸಿದರೆ, ರೈತರೇ ಸರ್ಕಾರಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಅದನ್ನು ಬಿಟ್ಟು ಸಾಲ ಮನ್ನಾದಂತಹ ಯೋಜನೆಗಳಿಂದ ರೈತ ಬೇಸಾಯ ಮಾಡಿ ಜೀವನ ಸಾಗಿಸುವುದನ್ನು ಬ್ಯಾಂಕುಗಳ ಸುತ್ತ ಅಲೆದಾಡುವ ಹಾಗೂ ಮತ್ತೊಮ್ಮೆ ಸಾಲ ದೊರೆಯುವ ಅವಕಾಶಗಳನ್ನು ಸರ್ಕಾರಗಳು ದೂರ ಮಾಡುತ್ತಿವೆ.
ರಾಜ್ಯ ಸರ್ಕಾರ ದ ಎರಡು ಲಕ್ಷರೂಪಾಯಿಗಳ ಸಾಲ ಮನ್ನಾ ಯೋಜನೆಯ ಜಾರಿ ಇನ್ನೂ ಪರಿಣಾಮಕಾರಿ ಯಾಗಿಲ್ಲ” ಎಂದು ತಿಳಿಸಿದರು .

ತಾಲ್ಲೂಕು ಮಟ್ಟದ ನಾಲ್ಕು ಪ್ರಗತಿಪರ ರೈತರನ್ನು ಗರುತಿಸಿ ಸನ್ಮಾನ ಮಾಡಲಾಯಿತು. ಸುತ್ತ ಮುತ್ತಲಿನ ಹಳ್ಳಿಗಳ ಹಲವು ರೈತರು ರೈತ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

Please follow and like us:

Related posts

Leave a Comment