ಮಧ್ಯ ರಸ್ತೆಯಲ್ಲಿನ ಗಿಡಗಳನ್ನು ರಕ್ಷಿಸಲು ಆಗ್ರಹ…ಚಿಂತಾಮಣಿ : ನಗರ ಹೊರವಲಯದ ಕನಂಪಲ್ಲಿ ಹಾಲಿನ ಡೈರಿ ಮುಂಭಾಗದ ಜೋಡಿ ರಸ್ತೆಯ ಮಧ್ಯದಲ್ಲಿ ನೆಟ್ಟಿರುವ ಅಲಂಕಾರಿಕ ಗಿಡಗಳು ಗಿಡಗಂಟಿಗಳಿಂದ ಹೊರ ಬರಲಾರದೆ ಒದ್ದಾಡುತ್ತಿದ್ದು ಸಂಬಂಧಪಟ್ಟ ನಗರಸಭೆಯ ಅಧಿಕಾರಿಗಳು ಸೂಕ್ತ ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಲಕ್ಷಾಂತರ ರೂಪಾಯಿಗಳ ಮೌಲ್ಯದ ಗಿಡಗಳನ್ನು ಸುಂದರ ನಗರವನ್ನಾಗಿ ರೂಪಿಸಲು ಜೋಡಿ ರಸ್ತೆಯ ಮಧ್ಯಭಾಗದಲ್ಲಿ ನೆಡಲಾಗಿದ್ದು ಅವುಗಳ ರಕ್ಷಣೆ ಪೋಷಣೆಯನ್ನು ಜವಾಬ್ದಾರಿಯುತವಾಗಿ ಮಾಡಬೇಕಾದ ಅಗತ್ಯತೆ ಇದ್ದರೂ ನಗರಸಭೆ ನಿರ್ಲಕ್ಷಿಸಿದ್ದು ಈಗಲಾದ್ರೂ ಗಿಡಗಂಟಿಗಳನ್ನು ತೆಗೆದು ಅಲಂಕಾರಿಕ ಗಿಡಗಳನ್ನು ರಕ್ಷಿಸಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ..
ಮದ್ಯೆ ರಸ್ತೆಯಲ್ಲಿ ಗಿಡಗಳ ರಕ್ಷಣೆಗೆ ಆಗ್ರಹ

Please follow and like us: