Connect with us

ಚಿಕ್ಕಬಳ್ಳಾಪುರ

ಸದೃಢ ಸಮಾಜಕ್ಕೆ‌ ನಿರ್ಮಾಣದಲ್ಲಿ‌ ಶಿಕ್ಷಕರ‌ ಪಾತ್ರ ಅಪಾರ

Published

on

ಸದೃಡ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ
      
ಗುಡಿಬಂಡೆ : ಮಕ್ಕಳಲ್ಲಿ ಅಡಗಿರುವ ಕ್ರಿಯಾತ್ಮಕ ಶಕ್ತಿಯನ್ನು ಗುರುತಿಸಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡಿ  ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅಪಾರವಾದುದು ಎಂದು  ಕ.ಸಾ.ಪ ತಾಲೂಕು ಅಧ್ಯಕ್ಷೆ  ಅನುರಾಧ ಆನಂದ ತಿಳಿಸಿದರು
ಗುಡಿಬಂಡೆ ಗಡಿ ಭಾಗದ  ಚೋಳಶೆಟ್ಟಿಹಳ್ಳಿ ಗ್ರಾಮದ ಶ್ರೀರಾಮದೇವಾಲಯದಲ್ಲಿ ನಡೆದ ಕಸಾಪ ನಡಿಗೆ ಸಾಧಕರ ಕಡೆಗೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಶಿಕ್ಷಕ ದೇವರಿಗೆ ಸಮಾನ ಎಂದು  ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೇಳಲಾಗಿದೆ. ಯಾವುದೇ ಜಾತಿ, ಮತ, ಪಂಥ, ಗಂಡು, ಹೆಣ್ಣು ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣ ಸಿಕ್ಕಾಗ ಮಾತ್ರ ಸಮಾಜ ಸುಧಾರಣೆ ಆಗಲು  ಸಾಧ್ಯ. ತಂದೆ ತಾಯಿಯ  ನಂತರ ಅವರ ಜೀವನದ  ಅತ್ಯುನ್ನತ ಸಾಧನೆಗೆ ಗುರುಗಳೇ ಕಾರಣ. ಸಿ.ಎಸ್.ಪ್ರಭಾಕರ್ ರಾವ್ ಮಕ್ಕಳ  ಒಳ್ಳೆಯ ಭವಿಷ್ಯಕ್ಕಾಗಿ ಉತ್ತಮ ಗುಣಮಟ್ಟದ  ಶಿಕ್ಷಣವನ್ನು ನೀಡಿದ್ದರಿಂದ  ಇಂದು ಅವರು ಶಿಷ್ಯರು ಉನ್ನತಸ್ಥಾನದಲ್ಲಿದ್ದಾರೆ. ಇಂತಹ  ಶಿಕ್ಷಕರ ಮಾರ್ಗದರ್ಶನ ಇಂದಿನ ಯುವ ಪೀಳಿಗೆಗೆ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸನ್ಮಾನ  ಸ್ವೀಕರಿಸಿ ಮಾತನಾಡಿದ ಸಾಹಿತಿ ನಿವೃತ್ತ ಶಿಕ್ಷಕ ಸಿ.ಎಸ್.ಪ್ರಭಾಕರ್ ರಾವ್,  ಗುಡಿಬಂಡೆ ತಾಲೂಕಿನಲ್ಲಿ  ಕೋಲಾರ ಜಿಲ್ಲೆಯಾಗಿದ್ದಾಗ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ನಡೆಸಿದ್ದೆವು ಹುತ್ತನೂರು  ರಾಜಮ್ಮರನ್ನು ಸಮ್ಮೇಳನದ ಅಧ್ಯಕ್ಷರಾಗಿದ್ದರು ಈ ಕಾರ್ಯಕ್ರಮದಲ್ಲಿ ಉತ್ತಮ ನಿರ್ವಹಣೆಮಾಡಿದ್ದಾರೆ ಎಂಬ ಪ್ರಶಂಸೆ ನೀಡಿದ್ದರು. ಎಲ್ಲೋಡು ಆದಿನಾರಾಯಣ ಸ್ವಾಮಿ ತಪ್ಪಲಿನಲ್ಲಿ ಸುವರ್ಣ ಮೋತ್ಸವ ಕಾರ್ಯಕ್ರಮವನ್ನು  ಮಾಡಿದ್ದೆವು ಕೂರ್ಮಗಿರಿ ಎಂಬಸ್ಮರಣ ಸಂಚಿಕೆಯನ್ನು  ಬಿಡುಗಡೆ ಮಾಡಿ ಗುಡಿಬಂಡೆ ಪೂರ್ಣಿಮರಿಂದ ಉಪನ್ಯಾಸವನ್ನು ಸಹ  ಮಾಡಿಸಿದ್ದೆವು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ  ಚೋಳಶೆಟ್ಟಿಹಳ್ಳಿ ಗ್ರಾಮದ  ಸಾಹಿತಿ ನಿವೃತ್ತ ಶಿಕ್ಷಕಸಿ.ಎಸ್.ಪ್ರಭಾಕರ್ ರಾವ್ ರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು  ವತಿಯಿಂದ ಹಾಗೂ ಹಳೇ ವಿದ್ಯಾರ್ಥಿಗಳು ಸನ್ಮಾನಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಘಟಕದ  ಸದಸ್ಯ  ಎನ್. ನಾರಾಯಣಸ್ವಾಮಿ,  ಬಾಗೇಪಲ್ಲಿ ತಾಲೂಕಿನಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಯಾಗಿ  ಕಾರ್ಯನಿರ್ವಹಿಸಿದ್ದ  ಆದಿಲಕ್ಷ್ಮಮ್ಮ ಮಾತನಾಡಿದರು.
ಈ ವೇಳೆ ತಾಲ್ಲೂಕು ಕನ್ನಡ  ಸಾಹಿತ್ಯ ಪರಿಷತ್ತಿನ ವಾಹಿನಿ ಎಚ್.ಆರ್.ಸುರೇಶ್,  ವಿ.ಶ್ರೀರಾಮಪ್ಪ, ರಘು,  ಬಿ.ಮಂಜುನಾಥ, ರಾಜೇಶ್, ಮಂಜುನಾಥ ಗಣಪತಿ ಹೆಗಡೆ, ನಾಗಲಿಂಗಪ್ಪ, ಸಿ.ಎ.ಚಲಪತಿ, ವೆಂಕಟಾಚಲಯ್ಯ,  ಸುರೇಶ್ ಜೈನ್, ಶ್ರೀನಿವಾಸ್,  ಕರ್ನಾಟಕ ರಕ್ಷಣಾ ವೇದಿಕೆಯ ಜಿ.ವಿ.ಆನಂದ್, ಶ್ರೀನಿವಾಸ್ ಯಾದವ್ ಸೇರಿದಂತೆ  ಮತ್ತಿರರು ಭಾಗವಹಿಸಿದ್ದರು.

ದೇವರಾಜ್ ಎನ್ ಆರ್ ಚಿಕ್ಕಬಳ್ಳಾಪುರ

Continue Reading
Click to comment

Leave a Reply

Your email address will not be published. Required fields are marked *

ಚಿಕ್ಕಬಳ್ಳಾಪುರ

ಅಕ್ಕನ ಸುಖ ಸಂಸಾರಕ್ಕಾಗಿ ಜಗಳವಾಡಿ ಬಾವನಿಂದಲೇ ಹತ್ಯೆಯಾದ ಬಾಮೈದ..!

Published

on

By

ಚಿಕ್ಕಬಳ್ಳಾಪುರ: ಅಕ್ಕನ ಸಂಸಾರ ಸುಖವಾಗಿರಲಿ ಎಂದು ಬಾವನ ಅನೈತಿಕ ಸಂಬಂಧ ಪ್ರಶ್ನಿಸಿದ ಹಿನ್ನೆಲೆ ಬಾವನೇ ಬಾಮೈದನನ್ನು ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇಮ್ರಾನ್ ಖಾನ್ (25) ಕೊಲೆಯಾದ ಯುವಕ, ಬಾವ ಸಾಧಿಕ್ ಪಾಷಾ@ಚಾಂದ್, ಟಿಪ್ಪು, ಸಮಿವುಲ್ಲಾ, ಸಯ್ಯದ್ ಕೊಲೆ ಮಾಡಿರುವ ಆರೋಪಿಗಳು. ಕಳೆದ 5 ವರ್ಷಗಳ ಹಿಂದೆ ರುಕ್ಸಾನಾ ಎಂಬಾಕೆಯನ್ನು ಚಾಂದ್ ಪಾಷಾ ಮದವೆಯಾಗಿದ್ದ ನಂತರ ಮುಮ್ತಾಜ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಷಯ ತಿಳಿದ ಇಮ್ರನ್ ಖಾನ್ ಸಾಕಷ್ಟು ಬಾರಿ ಚಾಂದ್ ಪಾಷಾ ಜೊತೆಗೆ ಜಗಳ ಮಾಡಿದ್ದ. ಇತ್ತೀಚೆಗೆ ಇದೇ ವಿಚಾರವಾಗಿ ಬಾವನ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದ. ಇದರಿಂದ ಕೋಪಿತಗೊಂಡ ಚಾಂದ್ ಪಾಷಾ ಸೇಡಿಗೆ ಸೇಡು ತೀರಿಸಿಕೊಳ್ಳಲು ಬಾಮೈದನ ಕೊಲೆಗೆ ತನ್ನ ಸ್ನೇಹಿತರೊಂದಿಗೆ ಪ್ಲಾನ್ ರೂಪಿಸಿದ್ದ. ಅದರಂತೆ ಜನವರಿ 3ನೇ ತಾರೀಖು ಆಂಧ್ರಪ್ರದೇಶದ ಹಿಂದೂಪುರ ಮೂಲದ ಲಾರಿ ಚಾಲಕರಿಂದ ಬರ್ಭರವಾಗಿ ದೇಹದೆಲ್ಲೇಡೆ ಡ್ರಾಗರ್ ನಿಂದ ಚುಚ್ಚಿ ಚುಚ್ಚಿ, ಮರ್ಮಾಂಗ ಕತ್ತರಿಸಿ ಕೊಲೆ ಮಾಡಿಸಿ ಎಸ್ಕೇಪ್ ಆಗಿದ್ದ.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಗೌರಿಬಿದನೂರು ಪೊಲೀಸರು, ನಾಲ್ಕೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕೊಲೆಯ ಬಳಿಕ ಪರಾರಿಯಾಗಿದ್ದ ಆರೋಪಿಗಳ ಬೆನ್ನು ಹತ್ತಿದ್ದ ಪೊಲೀಸರು, ಚಾಂದ್ ಪಾಷಾ 2ನೇ ಹೆಂಡತಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿಗಳ ಕುರಿತು ಮುಮ್ತಾಜ್ ಬಾಯಿ ಬಿಟ್ಟಿದ್ದಾಳೆ. ಗೌರಿಬಿದನೂರು ವೃತ್ತ ನಿರೀಕ್ಷಕ ಎಸ್.ರವಿ ಹಾಗೂ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Continue Reading

ಚಿಕ್ಕಬಳ್ಳಾಪುರ

ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಮುಂದಾದ ಶ್ರೀ ಧರ್ಮಸ್ಥಳ ಯೋಜನೆ.!

Published

on

By

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದ ಕೆರೆ ಅಂಗಳದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಘದ ಅಡಿಯಲ್ಲಿ ತಾಲ್ಲೂಕಿನ ಬೋದುಗೂರು ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ರಮದ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು. ತದನಂತರ ಅದ್ಯಕ್ಷತೆ ವಹಿಸಿದ ಕೆರೆ ಬಳಕೆದಾರರ ಸಂಘದ ಅದ್ಯಕ್ಷ ವೆಂಕಟಸ್ವಾಮಿ ರೆಡ್ಡಿ ಮಾತನಾಡಿ ಈಗಾಗಲೆ ಗ್ರಾಮ ಪ್ರದೇಶಗಳಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಪೂಜ್ಯರ ಸಮಕ್ಷಮದಲ್ಲಿ ಕೆರೆ ಹೊಳೆತ್ತುವ ಕಾರ್ಯ ನಡೆಯುತ್ತಿದಿದ್ದು, ಇಂದು ನಮ್ಮ ಬೋದಗೂರು ಗ್ರಾಮದ ಕೆರೆ ಹೂಳೆತ್ತಲು 18.50 ಲಕ್ಷ ಬಿಡುಗಡೆ ಮಾಡಿ ಪುಣ್ಯವಂತರಾಗಿದ್ದಾರೆ ಎಂದರು. ಮಳೆ ನೀರು ಸರಾಗವಾಗಿ ಹರಿಯದೆ ಕೆರೆಗೆ ನೀರು ಬರುತ್ತಿಲ್ಲ ಮೊದಲು ನೀರು ಬರಲು ಕಾಲುವೆಗಳು ತೆರವುಗೊಳಿಸಿ ಸ್ವಚ್ಚಗೊಳಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು. ಇನ್ನೂ ಈ ಸಂದರ್ಭದಲ್ಲಿ ವೃದ್ಧರಿಗೆ ಮಾಶಾಸನ ಬಿಡುಗಡೆಗೊಳಿಸಿದರು.

ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Continue Reading

ಚಿಕ್ಕಬಳ್ಳಾಪುರ

ಭಿಕ್ಷುಕನಿಗೆ ಊಟ ನೀಡಿ ಮಾನವೀಯತೆ ಮೆರೆದ ಎಎಸ್ಐ..!

Published

on

By

ಚಿಕ್ಕಬಳ್ಳಾಪುರ: ಪೊಲೀಸರ ಕುರಿತು ಸಾಕಷ್ಟು ನಕಾರಾತ್ಮಕ ಆಲೋಚನೆಗಳೇ ಕಣ್ಣ ಮುಂದೆ ಬರುತ್ತದೆ, ಆದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲಿಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಸೋಮಶೇಖರ್ ಮಾನವೀಯತೆ ಮೆರದು ಜನರ ಮೆಚ್ಚಿಗೆಗಳಿಸಿದ್ದಾರೆ. ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಊಟವಿಲ್ಲದೆ ಅಸ್ವಸ್ಥಗೊಂಡಿದ್ದ ಭಿಕ್ಷುಕನನ್ನು ಗಮನಿಸಿ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣರಾಗಿದ್ದಾರೆ. ಈ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಎಎಸ್ಐ ಸೋಮಶೇಖರ್ ಕಾರ್ಯವೈಕರಿ ಕಂಡು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Continue Reading

Trending

Copyright © 2023 EXPRESS TV KANNADA

kuşadası escort kayseri escort kocaeli escort canlı maç izle selcuksports güvenilir bahis siteleri deneme bonusu deneme bonusu veren siteler bahis siteleri https://resimlihaber.org/ canlı bahis siteleri güvenilir bahis siteleri http://seu.frvm.utn.edu.ar/guvenilir-bahis-siteleri.html deneme bonusu veren sitelercasino sitelerimıknatısmaç izle