ನವದೆಹಲಿ(ಜ.24):ನಾಲ್ಕು ಅಂತಸ್ತಿನ ಕಟ್ಟಡ ಕುಸಿತದಿಂದಾಗಿ ನಾಲ್ವರು
ಕಾರ್ಮಿಕರು ಮೃತಪಟ್ಟಿರುವ ಘಟನೆ ಹರ್ಯಾಣದ ಉಲ್ವಾಸ್ ಪ್ರದೇಶದಲ್ಲಿ
ನಡೆದಿದೆ. ಇನ್ನು ನಾಲ್ವರು ಕಟ್ಟದ ಅವಶೇಷದಡಿ ಸಿಲುಕಿದ್ದಾರೆ. ಎಂಬ ಮಾಹಿತಿ ಇದೆ. ಇಂದು
ಬೆಳಿಗ್ಗೆಯೇ ಕುಸಿದ ಕಟ್ಟಡ ಕುಸಿದಿದೆ. ಈ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ
ರಾಷ್ಟ್ರೀಯ ವಿಪತ್ತು ನಿರ್ವಹಣ ದಳದವರ ಮೂರು ತಂಡಗಳ ರಕ್ಷಣಾ
ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಅಂತಸ್ತು ಗುರುಗ್ರಾಮ ಸಮೀಪದ ಉಲ್ಲಾವಾಸ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟದ ನಿರ್ಮಾಣ ಹಂತದಲ್ಲಿತ್ತು. ಇಂದು ಬೆಳಗ್ಗೆ 5 ಗಂಟೆಗೆ ದಿಢೀರನೇ ಕಟ್ಟಡ
ಕುಸಿದಿದೆ. ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅವರ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ ಎನ್ನಲಾಗಿದೆ. ಇನ್ನೂ ಕಬ್ಬಿಣದ ಗ್ರಿಲ್ಸ್ ಹೆಚ್ಚಿರುವ ಕಾರಣ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ ಎಂದು ತಿಳಿದು ಬಂದಿದೆ.
ನಾಲ್ಕು ಅಂತಸ್ತಿನ ಕಟ್ಟಡ ಕುಸಿತ: ನಾಲ್ವರ ದುರ್ಮರಣ

Please follow and like us: