ತನ್ನ ಅಭಿಮಾನಿಯನ್ನು ನಿಂದಿಸಿದ್ದಕ್ಕೆ ಸಿಡಿದೆದ್ದ ರಶ್ಮಿಕಾ

ಬೆಂಗಳೂರು: ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಕೋಪಗೊಂಡು ವ್ಯಕಿಯೊಬ್ಬನನ್ನ ಕ್ಲಾಸ್
ತೆಗೆದುಕೊಂಡಿದ್ದಾರೆ. ಹೌದು ರಶ್ಮಿಕಾ ಮಂದಣ್ಣ ಅಭಿಮಾನಿಯೊಬ್ಬರು ತಮ್ಮ ಫ್ಯಾನ್ ಪೇಜ್‍ನಲ್ಲಿ, “ರಶ್ಮಿಕಾ ಮಂದಣ್ಣ ಯೂಟ್ಯೂಬ್‍ನ ರಾಣಿ. ಅವರು ನಟಿಸಿದ ಕನ್ನಡ ಚಿತ್ರದ ಎರಡು ಹಾಡು 5 ಕೋಟಿ ವ್ಯೂ ಪಡೆದಿದೆ. ಕನ್ನಡದ ನಟಿಯರಲ್ಲಿ ರಶ್ಮಿಕಾ ಅವರು 2 ಹಾಡು 5 ಕೋಟಿ ವ್ಯೂ ಕಂಡಿರುವ ಹೆಗ್ಗೆಳಿಕೆಗೆ ಅವರು ಪಾತ್ರರಾಗಿದ್ದಾರೆ. ಅಲ್ಲದೇ ತೆಲುಗಿನ 2 ಹಾಡು 10 ಕೋಟಿ ವ್ಯೂ ಕಂಡಿದೆ. ರಶ್ಮಿಕಾ ಈಗ ಯೂಟ್ಯೂಬ್ ರಾಣಿ ಆಗಿದ್ದಾರೆ” ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಗೆ ವ್ಯಕ್ತಿಯೊಬ್ಬನು “ಹಲೋ ಬಾಸ್. ರಶ್ಮಿಕಾ ಯೂಟ್ಯೂಬ್ ರಾಣಿ ಎನ್ನುವುದು ದೊಡ್ಡ ಜೋಕ್. ಅವರು ಕೇವಲ ನಿಮ್ಮ ಫ್ಯಾನ್ ಪೇಜ್‍ಗಳಿಗೆ ರಾಣಿ ಹೊರತು ಹೊರ ಜಗತ್ತಿಗೆ ಅಲ್ಲ. ಇಲ್ಲಿ ಯಾರೂ ಅವರನ್ನು ಕೇರ್ ಮಾಡಲ್ಲ. ಈ ಪೋಸ್ಟ್ ಯೂಟ್ಯೂಬ್
ಅವರು ನೋಡಿದರೆ ಹುಚ್ಚರಂತೆ ನಗುತ್ತಾರೆ. ನೀನು ಹೋಗಿ ಏನಾದರು ಕೆಲಸ ಮಾಡು. ಆಕೆಯನ್ನು ನೋಡುತ್ತಾ ನಿನ್ನ ಸಮಯ ವ್ಯರ್ಥ ಮಾಡಬೇಡ” ಎಂದು ಕಮೆಂಟ್ ಮಾಡಲಾಗಿತ್ತು.
ರಶ್ಮಿಕಾ ಮಂದಣ್ಣ ಆ ವ್ಯಕ್ತಿಯ ಕಮೆಂಟ್ ನೋಡಿ, “ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತದೆ. ಕಮೆಂಟ್ ಮಾಡುವ ಹಕ್ಕು ನಿಮಗೆ ಇದೆ. ನನ್ನ ಬಗ್ಗೆ ಕಮೆಂಟ್ ಮಾಡಿ ನಾನು ನಿಮ್ಮ ಕಮೆಂಟ್ ಸ್ವೀಕರಿಸುತ್ತೇನೆ. ಹಾಗಂತ ನೀವು ನನ್ನ ಅಭಿಮಾನಿಗಳ ಬಗ್ಗೆ ಈ ರೀತಿ ಮಾತನಾಡುವುದಕ್ಕೆ ನಿಮಗೆ ಯಾವುದೇ ಹಕ್ಕಿಲ್ಲ. ಈ ಮೆಸೇಜ್ ಕೇವಲ ಈ ವ್ಯಕ್ತಿಗೆ ಅಲ್ಲ. ಇದು ನನ್ನ ಅಭಿಮಾನಿಗಳ ಬಗ್ಗೆ ಕೆಟ್ಟದ್ದಾಗಿ ಕಮೆಂಟ್ ಮಾಡುವವರಿಗೆ” ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

https://twitter.com/iam_Sabar/status/1088803670949392384

Please follow and like us:

Related posts

Leave a Comment