ಅಪ್ಪು ಅಭಿನಯದ ನಟಸಾರ್ವಭೌಮ ಟ್ರೇಲರ್ ಸಖತ್ ಹಿಟ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ನಟಸಾರ್ವಭೌಮ
ಟ್ರೇಲರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಖತ್ ಹಿಟ್ ಆಗಿದೆ. ಟ್ರೇಲರ್ ಬಿಡುಗಡೆಯಾದ ಕೇವಲ 15 ನಿಮಿಷದಲ್ಲಿ 1 ಲಕ್ಷಕ್ಕೂ ಅಧಿಕ ವ್ಯೂ ಕಂಡಿತ್ತು. ಅಲ್ಲದೇ ಟ್ರೆಂಡಿಂಗ್ ನಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ. 2 ಗಂಟೆಗಳಲ್ಲಿ ಟ್ರೇಲರ್ ಬರೋಬ್ಬರಿ ನಾಲ್ಕೂವರೆ ಲಕ್ಷಗಳಿಗಿಂತ ಹೆಚ್ಚು ವ್ಯೂ ಕಂಡಿದ್ದು, ಟ್ರೇಲರ್ ಸ್ಯಾಂಡಲ್ ವುಡ್‍ನಲ್ಲಿ ಹೊಸ ದಾಖಲೆ ಬರೆಯುವ ವಿಶ್ವಾಸ ಮೂಡಿಸಿದೆ. ನಂತರ 9 ಗಂಟೆಯಲ್ಲಿ 9.07 ಲಕ್ಷ ವ್ಯೂ ಕಂಡಿದೆ. ಟ್ರೇಲರ್ ನೋಡಿದ ಸಾಕಷ್ಟು ಜನರು ಚಿತ್ರದ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿನ್ನೆಲೆ ಸಂಗೀತ ಹಾಗೂ ಅಪ್ಪುವಿನ ಲುಕ್ ಸಖತ್ ಭಿನ್ನವಾಗಿ ಕಂಡಿದೆ. ಟ್ರೇಲರ್ ಆರಂಭದಲ್ಲೇ ಚಿತ್ರ ಹಾರರ್ ಥ್ರಿಲ್ಲರ್ ಎನ್ನುವುದನ್ನು ಖಚಿತ ಪಡಿಸುತ್ತದೆ. ಅಲ್ಲದೇ ಪುನೀತ್ ಆಕ್ಷನ್ ದೃಶ್ಯ, ಡಾನ್ಸ್ ನೋಡುಗರಿಗೆ ಕಿಕ್ ಕೊಡುತ್ತದೆ. ಉಳಿದಂತೆ ಚಿತ್ರದ ತಾರಾಗಣ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

Please follow and like us:

Related posts

Leave a Comment